Wednesday, January 31, 2007


ಹಳೆಯ ನೆನಪೊಂದನ್ನು ಇಲ್ಲಿ ತೇಲಿಸಿದ್ದೇನೆ. ನನ್ನ ಜೊತೆಗಿರುವವನು ಲ್ಯಾನ್ಸಿ. ಒಳ್ಳೆಯ ಕ್ಯಾಮಾರಮೆನ್ ಗೆಳೆಯ. ಆತನ ಜೊತೆ ಮತ್ತೆ ಒಳ್ಳೆಯ ದಿನಗಳಿಗೆ ಕಾದಿರುವೆ.

ಜಿಲ್ಲಾ ಪಂಚಾಯತ್ ಗೆ ಚುನಾವಣಿ ಸಂದರ್ಭದಲ್ಲಿ ಶಾಸಕ ಕೃಷ್ಣ ಪಾಲೇಮಾರ್ ಗೆ ಪ್ರಶ್ನೆ ಎಸೆದ ಸಂದರ್ಭ. ನನ್ನ ಪ್ರಶ್ನೆ ನಿಜವಾಗಿದೆ ಎಂಬುದು ಆ ಸಂಸ್ಥೆಯಲ್ಲಿ ಇಲ್ಲದೇ ಇದ್ದರೂ ಇರುವ ನೆಮ್ಮದಿ.

ಉಳಿದಿರುವುದು ನೋವು ಮಾತ್ರ..........

ರೈಲು ಗಾಡಿಯ ಕುಲುಕಾಟಕ್ಕೆ
ನಿನ್ನ ಎದೆ ಕುಲುಕುತಿತ್ತು.
ನಾನೂ ಕುಲುಕುತ್ತಿದ್ದೆ ನಿನ್ನ ಮನಸ್ಸಿನೊಳಗೆ.

ನನ್ನ ಮೌನದೊಳಗೆ
ನಿನ್ನ ಕುಲುಕಾಟವಿಲ್ಲ
ಕಟ್ಟಿದ ಕನಸು ನುಚ್ಚು ನೂರಾಗಿತ್ತು
ಇನ್ನೆಲ್ಲಿ ಕುಲುಕಾಟ

ನಿರೀಕ್ಷೆ ಬೆಳೆದ ಬಗೆ
ಹೇಗೆ ಇಳಿದು ಹೋಯಿತು
ಗೆಜ್ಜೆಯ ದನಿಗೆ ಹುಚ್ಚನಾದದ್ದು
ಪ್ರೀತಿ ಬೆಳೆಸಿದ್ದು
ಕನಸು ಕಟ್ಟಿದು
ಮನೆಯವರ ಅಬ್ಬರಕ್ಕೆ
ನೀರಿನಂತೆ ಪ್ರೀತಿ ಕಟ್ಟೆಯೊಡೆದು ಕರಗಿತ್ತು.

ಈಗ ರೈಲು ನಿಂತಿದೆ
ಕುಲುಕಾಟವಿಲ್ಲ
ಈ ವರೆಗಿನ ಕುಲುಕಾಟದಲ್ಲಿ ನಾನೂ ಕರಗಿದ್ದೇನೆ.
ಪ್ರೀತಿಯೂ ಕರಗಿದೆ.
ಆದರೆ
ನೋವು ಉಳಿದಿದೆ.

Wednesday, January 24, 2007

ಕನಸುಗಳಿಗೆ ಬರವೇ ?ತುಟಿಗೆ ತುಟಿ ತಾಗಿಸಿ
ರಸ ಹೀರಿದ ಕ್ಷಣ
ಕಾಮವೋ ಪ್ರೇಮವೋ ಗೊತ್ತಿಲ್ಲ.
ಆವಾಗ ನಾನು ಕಣ್ಣು ಮುಚ್ಚಿದೆ.

ಉಪ್ಪರಿಗೆಯ ಮೇಲೆ ಬೆಳದಿಂಗಳಿತ್ತು
ಅಂಗಳದಲ್ಲಿ ಮಲ್ಲಿಗೆ ಸೇವಂತಿ ಪರಿಮಳ
ಹರಡಿಕೊಳ್ಳುತ್ತಿತ್ತು.
ಮನೆಯ ಹೆಣ್ಣು ಬೆಕ್ಕು ಇನಿಯನ ಭೇಟಿಯಲ್ಲಿತ್ತು.
ನಾನು ನಾನಾಗಿರಲ್ಲಿಲ್ಲ.

ಒಳಗಡೆ,
ಒಲೆಯಲ್ಲಿ ತಾಯಿ ಇಟ್ಟ ಹಾಲು ಉಕ್ಕುತಿತ್ತು.
ಬೆಂಕಿ ಧಗ ಧಗ ಅನ್ನುವಂತೆ......

ಹೊರಗಡೆ,
ಗುಲಾಬಿ ಹೂವಿನ ಎಸಳಿನಿಂದ
ಇಬ್ಬನಿ ಜಾರಿತ್ತು.

ನಡು ರಾತ್ರಿ ದಿವ್ಯ ಮೌನ
ಎಲ್ಲವೂ ಮುಗಿದಿತ್ತು.
ಮಲ್ಲಿಗೆ, ಸೇವಂತಿ, ಗುಲಾಬಿ ಅರಳಿತ್ತು.
ಒಲೆಯ ಬೆಂಕಿ ಇದ್ದಿಲಾಗಿತ್ತು.

Tuesday, January 23, 2007

ಎರಡನೇ ದಿನಕ್ಕೂ ಮಾಸದ ನೆನಪು.ಮಂಗಳೂರಿನಿಂದ ಮರಳಿ ೨ ದಿನ ಕಳೆಯಿತು. ಮನದಲ್ಲಿ ಮತ್ತೇ ಆದೇ ಖಾಲಿ ಮೈದಾನ. ನೆನಪಿನಲ್ಲಿ ಏನಿದೆ ಅಂದರೆ ತಂಗಿಯ ಕಣ್ಣಂಚಿನ ಕಣ್ಣೇರು,ತಗ್ಗಿದ ತಾಯಿಯ ಸ್ವರ.ವಿಶ್ವಾಸದ ತಂದೆಯ ಮುಖ. ಜೊತೆಗೆ ಚಡ್ಡಿ ಗೆಳೆಯರಿಬ್ಬರೂ ಕಣ್ಣ ಮುಂದೆ ಪ್ರತೀ ದಿನ ನಿಲ್ಲುತ್ತಾರೆ.
ಮಂಗಳೂರಿಗೆನಾಗಿದೆ? ಮಂಗಳೂರು ಹೇಗಿದೆ ಎಂದು ಕೇಳಿದರೆ ಬದಲಾಗಿದೆ ಎನ್ನುವುದು ಸತ್ಯ. ಹೊಸ ಕಟ್ಟದ ತಲೆ ಏತ್ತಿದೆ. ದಿನ ನಿತ್ಯ ಸಿಗುತ್ತಿದ್ದ ಇನ್ಸ್ ಪೆಕ್ಟ್ ರ್ ೨ ಏನ್ ಕೌಂಟರ್ ಮಾಡಿದ್ದಾರೆ. ನನ್ನೂರಿನ ಬಸ್ಸುಗಳು ಹೊಸ ಬಣ್ಣ ಬಳಿದು ಹೊಸ ಹೊಸ ಹುಡುಗಿಯರನ್ನು ಹತ್ತಿಸಿಕೊಂಡು ಮಂಗಳೂರು, ಬಿ.ಸಿ. ರೋಡ್ ಎಂದು ಹಾರನ್ ಹೊಡೆಯುತ್ತ ಹೋಗಿ ಬರುತ್ತಿದೆ. ಅದರೆ ಜನ ಮಾತ್ರ ಆದೇ ಪೇಪರ್ ಓದುತ್ತಾರೆ ಆದರೆ ಟಿ.ವಿ. ಮಾತ್ರ ಬದಲಾಯಿಸಿದ್ದಾರೆ. TV9 ನ ಕೋಟ್ ANCHOR ಗಳ ಮಾತಿಗೆ ಬೆರಗಾಗಿದ್ದಾರೆ. ಹುಡುಗಿಯರೇ ನಡೆಸಿಕೊಡುವ ಕ್ರೈಂ ಸುದ್ದಿಯ ನಡುವೆ ಮುಳುಗಿ ಹೋಗಿದ್ದಾರೆ.ಮತ್ತೇ ಅದೇ ಪ್ರೀತಿಯ ಧಾರವಾಹಿ ಬಂದರೆ ರಿಮೋಟ್ ಕೈಗೆತ್ತುಕೊಳ್ಳುತ್ತಾರೆ.
ಮನೆ ಪಕ್ಕದ ಜಾಗವೆಲ್ಲ infosys ತನ್ನ ವಶಕ್ಕೆ ತೆಗೆದುಕೊಳ್ಳಲು ಸಿದ್ದತೆ ನಡೆಸಿದೆ. ಮನೆ ಪಕ್ಕದ ಬೋಳು ಗುಡ್ಡದಲ್ಲಿ infosys ತನ್ನ ವಶದ ೫೦೦ ಎಕರೆ ಜಾಗದಲ್ಲಿ ಕಾಮಗಾರಿ ಪ್ರಾರಂಭಿಸಿದೆ. ಬೆಳಕು ಕಾಣದ ಗುಡ್ಡದಲ್ಲಿ ಬೆಳುಕು ನೀಡಿದ ಚರ್ಚ್ ನ ಬೆಳಕನ್ನು ನುಂಗಿ ನೀರು ಕುಡಿದಂತೆ infosys ತನ್ನ ಬೆಳಕು ಬೀರುತ್ತಿದೆ. ಕೆಲ ವರ್ಷ ಕಳೆದರೆ ನಾನು ಎತ್ತರವಾದ ನೆಲದಲ್ಲಿ ಅಂದರೆ ನಮ್ಮ ಮನೆಯು ಸೇರಿದಂತೆ - ಜಾಗದಲ್ಲಿ infosys ಬೆಳೆದರೆ ಅಚ್ಚರಿಯಿಲ್ಲ.
ಮತ್ತೆ ಮಂಗಳೂರಿನ ಬಗ್ಗೆ, ನನ್ನೂರಿನ ಬರೆಯಿತ್ತೇನೆ. ಅಲ್ಲಿಯವರೆಗೆ.


ಕಿಕ್ ಗಾಗಿ ಮಾತ್ರ.

ಮದುವೆಯ ಹುಡುಗಿಗೆಗೆ ಕಚೇರಿಯಲ್ಲಿ ಮದುವೆಗೂ ರಜಾ ಕೊಡದಿದ್ದರೆ.?

ಚಿಂತೆ ಯಾಕೆ Moment ರಿಜಿಸ್ಟ್ ರ್ ನಲ್ಲಿ ಬರೆದು ಬಿಟ್ಟು ತಾಳಿ ಕಟ್ಟಿಸಿಕೊಳ್ಳಲು ಹೋದರಾಯಿತು.

Saturday, January 13, 2007

ನೋವು - ಸಂತೋಷದೊಂದಿಗೆ ಪಯಣ.........


ನನ್ನೊಳಗೆ ಹಲವು ಗೊಂದಲಗಳೊಂದಿಗೆ ಅದೆಷ್ಟೋ ತಿಂಗಳ ಬಳಿಕ ನನ್ನ ಊರಿಗೆ ಹೋಗಿಬರಲು ಸಿದ್ಧವಾಗಿದ್ದೇನೆ. ಬೆಂಗಳೂರಿನ ಅಪರೂಪದ ಅಕ್ಕನೊಂದಿಗಿನ ಮುನಿಸಿನಿಂದ ಮನಸ್ಸು ಯಾಕೋ ಕಾಡುತ್ತಿದೆ.
ಒಂದು ವಾರ ತಂಗಿ, ಹೆತ್ತವರೊಂದಿಗೆ ಇರಬಹುದು ಎನ್ನುವ ಖುಷಿ ಮತ್ತೊಂದೆಡೆ. ಜೊತೆಗೆ ನನ್ನದೇ ಆದ ಗೆಳೆಯರ ಬಳಗದೊಂದಿಗೆ ಸೇರಿಕೊಳ್ಳುವ ಕಾತರ, ಆತುರ ಇನ್ನೊಂದು ಕಡೆ. ಹಲವು ಗೆಳೆಯರ ಮುನಿಸುಗಳಿಗೆ ಉತ್ತರ ನೀಡಬೇಕಲ್ಲ ಎನ್ನುವ ಭಯ.ಜೊತೆಗೆ ನಾನು ಕಲಿತ ಶಾಲೆ ಕಾಲೇಜುಗಳತ್ತ ಒಂದು ನೋಟವನ್ನು ಬೀರಬೇಕು.ಪ್ರೀತಿಯ ದೇವರ ಸ್ಥಳಗಳಿಗೆ ಭೇಟಿ ನೀಡಬೇಕು, ಹಳೆಯ ಗೆಳೆತಿಯರನ್ನ ಮಾತನಾಡಿಸಬೇಕು. ಹೀಗೆ ಹತ್ತು ಹಲವು ಕಾರ್ಯಕ್ರಮದ ಪಟ್ಟಿ ನನ್ನ ಬಳಿ ಇದೆ.
ಬರುವಾಗ ಏನು ತರಬೇಕು ಅಂದರೆ ಕೋರಿ ರೊಟ್ಟಿಯ ಹೆಸರು ಪ್ರಥಮವಾಗಿದೆ.

ಇನ್ನೇನು ಬರೆಯಬೇಕು ಆದರೆ ಹೊರಡುವ ಖುಷಿ........ ಒಂದೆಡೆಯಾದರೆ. ಮತ್ತೆ ವಾಪಾಸು ಬಂದ ಮೇಲೆ ಮನಸ್ಸು ಜಾತ್ರೆ ಮುಗಿದ ಮರುದಿನದ ಮೈದಾನದಂತೆ ಭಣಗುಟ್ಟುತ್ತದೆ. ಕಡಲು ನೋಡಲೇಬೇಕು.........

Friday, January 12, 2007

ಸಿ.ಜಿ.ಕೆ ನೆನಪಿನಲ್ಲಿ ................ನಿನ್ನೆ ಸಹೋದ್ಯೋಗಿ ಮಿತ್ರ ಪ್ರಸಾದ್ ಜೊತೆಗೆ ನಾಟಕ ನೋಡಲು ಹೋಗಿದ್ದೆ. ಮಂಗಳೂರಿನಿಂದ ಕನಸಿನ ಮೊಟೆ ಹೊತ್ತು ಬೆಂಗಳೊರಿಗೆ ಬಂದಾಗ ನಾಟಕ, ಸೆಮಿನಾರ್, ಪುಸ್ತಕ ಪ್ರದರ್ಶನ,ಪುಸ್ತಕ ಬಿಡುಗಡೆ ನನಗೆ ಇನ್ನೂ ಹತ್ತಿರವಾಯಿತು ಅಂದುಕೊಂಡಿದ್ದೆ. ಆದರೆ ಆ ನಿರೀಕ್ಷೆ
ಸುಳ್ಳಾಗಿತ್ತು. ಮಂಗಳೂರಿನಲ್ಲಿದ್ದಾಗ ಸಂಪರ್ಕದಲ್ಲಿದ್ದ ಆನ್ವೇಷಣಿ, ದೇಶಕಾಲ, ಸಂಚಯ ದ ಬಗೆಗಿನ ನಿರೀಕ್ಷೆಗಳು ಕೂಡಾ ಸುಳ್ಳಾಗಿತ್ತು.
ಆದರೆ ನಿನ್ನೆ ಸಿ.ಜಿ.ಕೆ ನೆನಪಿಗಾಗಿ ರಂಗನಿರಂತರ ತಂಡ ರವೀಂದ್ರ ಕಲಾಕ್ಷೇತ್ರದಲ್ಲಿ ತೇಜಸ್ವಿ ಅವರ 'ಜುಗಾರಿ ಕ್ರಾಸ್'ನಾಟಕ ಇದೆ ಎಂದು ಪ್ರಸಾದ್ ಹೇಳಿದಾಗ ನಾನು ಅವನ ಜೊತೆ ಹೊರಟು ನಿಂತೆ. ಸಿಜಿಕೆ ಅಂದರೆ ನನಗೆ ನೆನಪಿರುವುದು ಅವರು ಮಂಗಳೂರಿಗೆ ಅವರದೇ ಪುಸ್ತಕದ ವಿಚಾರ ಸಂಕಿರಣಕ್ಕೆ ಬಂದ ದಿನ. ಸಂತ ಅಲೋಶೀಯಸ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮ ಇನ್ನೂ ನೆನಪಿದೆ. ಅದಕ್ಕೆ ಕಾರಣವೂ ಇದೆ. ಕಾರ್ಯಕ್ರಮಕ್ಕೆ ಕಾರ್ಯ ನಿಮಿತ್ತ ಹಾಜರಾದದ್ದು ಇದಕ್ಕೆ ಮುಖ್ಯ ಕಾರಣ.
ನಿನ್ನೆಯ ನಾಟಕ ಚೆನ್ನಾಗಿತ್ತು. ಹೊಸ ಮುಖಗಳೇ ಇದ್ದ ಕಾರಣಕ್ಕೆ ಟೀಕೆ ಸಲ್ಲದ್ದು. ಕಾದಂಬರಿಯೊಂದನ್ನು ನಾಟಕಕ್ಕೆ ಇಳಿಸಿದ ನಟರಾಜ ಹೊನ್ನವಳ್ಳಿ ಅವರಿಗೆ THANKS ಖಂಡಿತಾ...........
ಕೆಲವೊಂದು ಪ್ರಥಮ ದೃಶ್ಯಗಳು ಬೇಸರ ಉಂಟು ಮಾಡಿದರೂ.. ಬಳಿಕ ಪರವಾಗಿಲ್ಲ.....
ಕ್ರಾಸ್,ಕ್ರಾಸ್,ಕ್ರಾಸ್,ಕ್ರಾಸ್....... ಜುಗಾರಿ ಕ್ರಾಸ್ ಹಾಡು ಇನ್ನೂ ಮನಸ್ಸಿನಲ್ಲಿದೆ.
ಒಟ್ಟಾರೆಯಾಗಿ ನಾಟಕ ಚೆನ್ನಾಗಿತ್ತು.ಮಲೆನಾಡು ಸಂಪದ್ ಭರಿತವಾಗಿದೆ ಎನ್ನುವ ಕಾದಂಬರಿ ಅಂಶವನ್ನು ನಾಟಕ ಪ್ರೇಕ್ಷಕರಿಗೆ ಮನದಟ್ಟು ಮಾಡಿದೆ.ಏಲಕ್ಕಿ ವ್ಯಾಪಾರದ ಸಾಬಿ, ಕಂಡಕ್ಟರ್ ಜೊತೆಗೆ ಕಾದಂಬರಿಯಲ್ಲಿ ಪ್ರಸ್ತಾಪವಾಗದೇ ನಾಟಕದಲ್ಲಿ ಪ್ರವೇಶವಾಗುವ ಪಾತ್ರಗಳು ನಾಟಕಕ್ಕೆ ಒಂದಿಷ್ಟು ಕಳೆ ತಂದಿದೆ. ರಂಗವಿನ್ಯಾಸ ಕೂಡಾ ನಾಟಕ ಕಳೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ನಾನು ಮತ್ತೊಮ್ಮೆ ಕಾದಂಬರಿ ಓದಿದರೆ ಈ ಬಗ್ಗೆ ಇನ್ನಷ್ಟು ಬರೆಯಬಲ್ಲೆ.

ಕೊನೆಗೊಂದು ಕಿರಿಕ್!
ನಮ್ಮ ಊರಿನಲ್ಲೂ ಹಳೆಯ ಪರದೆ, ಸಿಂಗಲ್ ಸೆಟ್ಟ್ ನಾಟಕದ ಜಾಗದಲ್ಲಿ ಇಂತಹ ನಾಟಕಗಳನ್ನು ಪ್ರದರ್ಶಿದರೆ
ಹೇಗಿರಬಹುದು ?
* ಜನ ಆಯಗ್ ಮರ್ಲ್ ಅಂತಾರೆ.....( ಅವನಿಗೆ ಹುಚ್ಚು)

ಕನ್ನಡದಲ್ಲಿ ಕುಟ್ಟಲು ಆರಂಭಿಸಿದ ಹಿನ್ನಲೆ.

ಕೆಲ ದಿನಗಳ ಹಿಂದೆ ORKUT ಬಳಗಕ್ಕೆ ಸೇರಿಕೊಂಡಾಗ ಕನ್ನಡದ ಬ್ಲಾಗುಗಳ ಪರಿಚಯವಾಯಿತು. ಮಂಗಳೂರಿನ ಪತ್ರಕರ್ತ ಗೆಳೆಯ ವೇಣುವಿನ ಬ್ಲಾಗು ಇಷ್ಟವಾಗಿತ್ತು.ನಾನು ಕನ್ನಡದಲ್ಲಿ ಬ್ಲಾಗು ಪ್ರಾರಂಭಿಸಬೇಕು ಎಂಬ ಹಠ ಗಟ್ಟಿಯಾಗಿತ್ತು. ಈ ಕಾರಣಕ್ಕೆ ನಾನು ಕನ್ನಡದಲ್ಲಿ ಬರೆಯಬೇಕು ಅನ್ನುವ ಕಾರಣಕ್ಕೆ ಆತನಿಗೆ ಪೋನಾಯಿಸಿದೆ. ಒಂದಿಷ್ಟು ಸಲಹೆ ಕೊಟ್ಟನಾದರೂ ನನಗೆ ಬರೆಯಲು ಸಾಧ್ಯವಾಗಲಿಲ್ಲ.ಬಳಿಕ ಹೀಗೆ ಅಂತರ್ ಜಾಲದೊಳಗೆ ಜಾರಿದ ಸಂದರ್ಭದಲ್ಲಿ ' ಸುಶೀಲ್' ಎಂಬವರ ಸುಸಂಕೃತ ಬ್ಲಾಗು ಪರಿಚಯವಾಯಿತು. ಅಲ್ಲಿ ಕನ್ನಡದಲ್ಲಿ ಹೇಗೆ ಬರೆಯಬೇಕು ಎನ್ನುವ ಬಗ್ಗೆ ಮಾಹಿತಿ ಇತ್ತು, ಆದರೂ ನನಗೆ ಮತ್ತೇ ಆದೇ ಸಮಸ್ಯೆ............
ಬಳಿಕ ಹೊಳೆದದ್ದು ಸಹಾಯಕ್ಕಾಗಿ ಸಹೋದ್ಯೋಗಿ ಶ್ರೀ ಗೆ ತಿಳಿಸುವುದು. ಆಕೆ ಕನ್ನಡದಲ್ಲಿ ಬರೆಯಲು ಸಫಲವಾದಗ ಹೊಟ್ಟೆ ಉರಿಯುತ್ತಿತ್ತು. ಆದರೂ ನನಗೆ ಬಾರೀ ಸಂತೋಷ. ಈ ಕಾರಣಕ್ಕಾಗಿ ತಡವಾಗಿ ಗೆಳತಿ- ಅಕ್ಕ ಶ್ರೀ ಗೆ ಪ್ರೀತಿಯ ಥ್ಯಾಂಕ್ಸ್ .

Wednesday, January 10, 2007

ನಮಸ್ಕಾರ,
ಈ ದಿನ ಎಷ್ಟು ಖುಷಿ ಗೊತ್ತಾ........ ಹಲವು ದಿನಗಳಿಂದ ಕನ್ನಡದಲ್ಲಿ ಕುಟ್ಟಬೇಕು ಎನ್ನುವ ಆಶೆ ಇವತ್ತು ಈಡೇರಿದೆ. ಆದರೆ ಈ ಪ್ರಸಾದ್ ಯಾಕೋ ಕಾಡುತ್ತಾನೆ. ದಿನಾ ಹೀಗೆ. ಅವನಿಗೆ ಕುಡಿದ ವಿಸ್ಕಿ ತಲೆಗೆ ಹತ್ತಿದರೆ ಇಳಿಯುವುದಿಲ್ಲ. ಅದಕ್ಕೆ ನಾಳೆ ಮತ್ತಷ್ಟು ಬರೆಯುತ್ತೇನೆ. ಅವನ ಬಗ್ಗೆ ನನ್ನ ಬಗ್ಗೆ ಹೀಗೆ....................

Tuesday, January 9, 2007
See this person enjoing................

guess ya Birthday..............? KANASU+DREMS ?I am cross just 24. Some time happy see another photo.......

Monday, January 1, 2007

Meet

Waiting Long time................. Now it is Ok............
Happy NA...........

Wish u happy new year. Old Drems+ New Drems = ?.