
ನನ್ನೊಳಗೆ ಹಲವು ಗೊಂದಲಗಳೊಂದಿಗೆ ಅದೆಷ್ಟೋ ತಿಂಗಳ ಬಳಿಕ ನನ್ನ ಊರಿಗೆ ಹೋಗಿಬರಲು ಸಿದ್ಧವಾಗಿದ್ದೇನೆ. ಬೆಂಗಳೂರಿನ ಅಪರೂಪದ ಅಕ್ಕನೊಂದಿಗಿನ ಮುನಿಸಿನಿಂದ ಮನಸ್ಸು ಯಾಕೋ ಕಾಡುತ್ತಿದೆ.
ಒಂದು ವಾರ ತಂಗಿ, ಹೆತ್ತವರೊಂದಿಗೆ ಇರಬಹುದು ಎನ್ನುವ ಖುಷಿ ಮತ್ತೊಂದೆಡೆ. ಜೊತೆಗೆ ನನ್ನದೇ ಆದ ಗೆಳೆಯರ ಬಳಗದೊಂದಿಗೆ ಸೇರಿಕೊಳ್ಳುವ ಕಾತರ, ಆತುರ ಇನ್ನೊಂದು ಕಡೆ. ಹಲವು ಗೆಳೆಯರ ಮುನಿಸುಗಳಿಗೆ ಉತ್ತರ ನೀಡಬೇಕಲ್ಲ ಎನ್ನುವ ಭಯ.ಜೊತೆಗೆ ನಾನು ಕಲಿತ ಶಾಲೆ ಕಾಲೇಜುಗಳತ್ತ ಒಂದು ನೋಟವನ್ನು ಬೀರಬೇಕು.ಪ್ರೀತಿಯ ದೇವರ ಸ್ಥಳಗಳಿಗೆ ಭೇಟಿ ನೀಡಬೇಕು, ಹಳೆಯ ಗೆಳೆತಿಯರನ್ನ ಮಾತನಾಡಿಸಬೇಕು. ಹೀಗೆ ಹತ್ತು ಹಲವು ಕಾರ್ಯಕ್ರಮದ ಪಟ್ಟಿ ನನ್ನ ಬಳಿ ಇದೆ.
ಬರುವಾಗ ಏನು ತರಬೇಕು ಅಂದರೆ ಕೋರಿ ರೊಟ್ಟಿಯ ಹೆಸರು ಪ್ರಥಮವಾಗಿದೆ.
ಇನ್ನೇನು ಬರೆಯಬೇಕು ಆದರೆ ಹೊರಡುವ ಖುಷಿ........ ಒಂದೆಡೆಯಾದರೆ. ಮತ್ತೆ ವಾಪಾಸು ಬಂದ ಮೇಲೆ ಮನಸ್ಸು ಜಾತ್ರೆ ಮುಗಿದ ಮರುದಿನದ ಮೈದಾನದಂತೆ ಭಣಗುಟ್ಟುತ್ತದೆ. ಕಡಲು ನೋಡಲೇಬೇಕು.........
2 comments:
ರಾಧಾ, ವಾಪಸ್ ಬರುವಾಗ ಕಡಲು, ಅದರ ಪರಿಮಳ, ಅದರೊಳಗಿನ ಖುಶಿ.. ಹೊತ್ತು ತರ್ಲಿಲ್ಲ ಅ೦ದ್ರೆ ಮತ್ತೆ ವಾಪಸ್ ಮ೦ಗ್ಳೂರಿಗೆ ಕಳಿಸ್ತೀನಿ.. ಹುಷಾರ್!!!
Post a Comment