Saturday, March 22, 2008

ಬ್ಲಾಗರುಗಳ ಮೀಟ್ ಬಗ್ಗೆ........

ಇಂತಹುದೊಂದು ದಿನ ಬೇಕಾಗಿತ್ತು. ನಮ್ಮತನಕ್ಕೆ ಹೊಸ ದಿಕ್ಕನ್ನು ತೋರಿಸುವ, ಕತ್ತಲಿದ್ದ ಜಾಗದಲ್ಲಿ ಅದೇನೋ ಎನ್ನುವುದನ್ನು ತಿಳಿಸುವವರು ಬೇಕಾಗಿತ್ತು. ಅಂತಹುದೊಂದು ಕಾರ್ಯಕ್ಕೆ ಪ್ರಣತಿ ಚಾಲನೆ ನೀಡಿದೆ.
ಬ್ಲಾಗರುಗಳ ಮೀಟ್ ಬಗ್ಗೆ ಕಾರ್ಯಕ್ರಮದ ದಿನವೇ ಬರೆಯಬೇಕಾಗಿತ್ತು.ಆದರೆ ಕಾರ್ಯದ ಒತ್ತಡ ನಿಧಾನವಾಗಿಸಿತು. ಬಹುಶ ನಾನು ಬರೆಯದೇ ಇದದ್ದು ಒಳ್ಳೆಯದಾಯಿತು. ಈ ಮೀಟ್ ಬಗ್ಗೆ ದೊಡ್ಡ ಚರ್ಚೆಯೇ ಪ್ರಾರಂಭಗೊಂಡಿದೆ. ಆ ಏಲ್ಲಾ ಚರ್ಚೆಗಳಿಗೆ ನಿಮ್ಮ ನಿಮ್ಮ ಬ್ಲಾಗುಗಳಲ್ಲಿ ಕಮೆಂಟ್ ಮಾಡುತ್ತೇನೆ.

ನನ್ನ ನೋಟ

ಈ ಹಿಂದೆ ನಾನು ನನ್ನ ಗೆಳೆಯರೆಲ್ಲ ಸೇರಿ mnc ಕಂಪನಿಗಳಲ್ಲಿ ನಡೆಯುತ್ತಿದ್ದ ಬ್ಲಾಗರ್ ಮೀಟ್ ಬಗ್ಗೆ ಮಾತಾನಾಡುತ್ತಿದ್ದೆವು.ಆದರೆ ಅಲ್ಲಿನ ವಸ್ತು ವಿಷಯವೇ ಭಿನ್ನ ಎಂದಾಗ ಸುಮ್ಮನಾಗಿದ್ದೆವು. ಇಂತಹ ಮೀಟ್ ಕನ್ನಡದಲ್ಲಿ ಸಾಧ್ಯವಿಲ್ಲ ಎಂದು ಕೈ ಚೆಲ್ಲಿದ್ದೆವು. ಆದರೆ ಪ್ರಣತಿ ಇದನ್ನು ಸಾಧ್ಯವಾಗಿಸಿದೆ. ಕನಿಷ್ಟ ೧೦ ಜನ ಸೇರಬಹುದು ಎನ್ನುವ ಊಹೆ ೨೦೦ರ ಗಡಿ ದಾಟಿದೆ.
ಇಂತಹುದೊಂದು meet ಬೇಕಾಗಿತ್ತೆ ಎನ್ನುವ ಪ್ರಶ್ನೆಗೆ ಈ ಕಾರ್ಯಕ್ರಮ ಉತ್ತರಿಸಿದೆ. ಜೊತೆಗೆ ವಿದೇಶದಲ್ಲಿ ಕನ್ನಡ ಕುಟ್ಟುವ ಮಂದಿಯ ನೋವು ಕಾರ್ಯಕ್ರಮದ ಬೆಲೆಯನ್ನು ತಿಳಿಸಿದೆ.

ಕಪ್ಪು ಚುಕ್ಕೆ

ಬ್ಲಾಗರ್ ಗಳ ಮೀಟ್ ಇದೆ ಎಂದು ಬ್ಗಾಗ್ ಗಳಲ್ಲಿ ಸುದ್ದಿ ಹರಡಿದಾಗ ಕನಿಷ್ಟ ಪಕ್ಷ ಆ ಬಗ್ಗೆ ಪ್ರತಿಕ್ರಿಯಿಸುವ ಮನಸ್ಸನ್ನು ( ಸೌಜನ್ಯ) ಕೆಲ ಸೀನಿಯರ್ ಬ್ಲಾಗರ್ ಗಳು ಎಂದು ಕರೆಸಿಕೊಂಡ ಮಂದಿ ತೋರಿಸಲಿಲ್ಲ. ಆದರೆ ಕೇವಲ ಸುದ್ದಿ ತಿಳಿದ ಸಾಹಿತಿ ಕಿ.ರಂ, ಸಂಚಯದ ಪ್ರಹ್ಲಾದ್ ಇವರೆಲ್ಲ ಒಂದಿಷ್ಟು ಹೊತ್ತು ಯುವ ಮನಸ್ಸುಗಳ ಜೊತೆಗಿದ್ದರಲ್ಲ ಅಷ್ಟು ಸಾಕು.

ಹಾಗಾದರೆ ಮುಂದೆ ಆಗಬೇಕಾದ್ದೇನು

ಇಂತಹ ಮೀಟ್ ತಿಂಗಳಿಗೊಂದು ನಡೆಯಬೇಕು. ಅದು ಪ್ರಣತಿಯ ಜವಾಬ್ದಾರಿಯಾಗಬಾರದು. ನನ್ನ ಜೊತೆ ಒಂದಿಷ್ಟು ಗೆಳೆಯರು ಕೈ ಜೋಡಿಸಿದರೆ ಮುಂದಿನ ಬ್ಲಾಗರ್ ಮೀಟ್ ನ ಜವಾಬ್ದಾರಿ ನಾನು ವಹಿಸಿಕೊಳ್ಳಬಹುದು.
ನಾವು ಮಾಡಬೇಕಾದ ಕೆಲಸ ಸಾಕಷ್ಟಿದೆ, ದಯವಿಟ್ಟು ಕೈ ಜೋಡಿಸಿ ಈ ಮೀಟ್ ನಾಂದಿಯಾಗಲಿ, ನಿಂತ ನೀರಾಗದಿರಲಿ, ಹರಿವ ನದಿಯಾಗಲಿ,

Sunday, March 9, 2008

ನೀವು ಬನ್ನಿ


ಬಹು ದಿನದ ನೀರಿಕ್ಷೆ ಈಡೇರುತ್ತಿದೆ. ಬ್ಲಾಗಿನಲ್ಲಿ ಇಂಗ್ಲೀಷ್ ಉಪಯೋಗಿಸುತ್ತಿದ್ದ ಮಂದಿ ಒಂದೆಡೆ ಸೇರುತ್ತಿದ್ದರು. ಈಗ ಕನ್ನಡ ಬ್ಲಾಗರರು ಕೂಡಾ ಒಂದೆಡೆ ಸೇರಬಹುದಾಗಿದೆ. ಬನ್ನಿ ನಾನು ಆಹ್ವಾನಿಸುತ್ತಿದ್ದೇನೆ, ನಾನು ಬರುತ್ತೇನೆ, ನೀವು ಬನ್ನಿ.