Saturday, December 15, 2012

ಇದನ್ನ ಸೋಮಾರಿತನ ಅಂದುಕೊಳ್ಳುತ್ತೀರಾ? ನಿರ್ಲಕ್ಷ್ಯ ಅಂದರೆ ಸರಿಯೇ.  ಪಬ್ಲಿಕ್ ರಸ್ತೆಯಲ್ಲಿ ಹಂಚಿಕೊಳ್ಳಲಾಗದ( ಖಾಸಗಿ ರಸ್ತೆ ಇದೆಯ) ಕನಸುಗಳನ್ನ ಬರೆಯಲು ಪ್ರಾರಂಭಿಸಿದ್ದು ಬ್ಲಾಗ್. ಅದ್ರೆ ಅದೇನು ಗೊತ್ತಿಲ್ಲ, ಬೆಂಗಳೂರು ಟ್ರಾಫಿಕ್ ಜಾಮ್ ನಂತೆ, ಸದ್ದು, ಸುದ್ದಿ ಎರಡೂ ಇಲ್ಲದೆ ನಿಂತು ಹೋಯ್ತು.
ನನ್ನವರು ಮತ್ತೆ ಬರೆಯಬೇಕು ಅಂದಾಗ........ (ಅವರಿಗೂ ಹೇಳಿ ಹೇಳಿ ಬೇಜಾರಾಗಿದೆ.) ಬರೆಯಬೇಕು ಅನ್ನಿಸಿತು.

--..,
 ಕೇರ್ ಅಂದರೇನು. ಯಾರ ಬಗ್ಗೆ ಯಾರು ಕೇರ್ ತಗೋಬೇಕು. ಪ್ರಿಯತಮೆಯ ಬಗ್ಗೆ ಪ್ರಿಯ. ಪ್ರೀಯನ ಬಗ್ಗೆ ಪ್ರಿಯತಮ.ಅಮ್ಮನ ಬಗ್ಗೆ ಮಗ,ಮಗನ ಬಗ್ಗೆ ಅಮ್ಮ ಹೀಗೆ ಮುಂದುವರಿ ಸಂದರ್ಭಗಳು ಕೇರ್ ಅನ್ನು ನಿರ್ಧರಿಸುತ್ತವೆ ಅನ್ನುವುದು ನಿಜ. ತುಂಬಾ ಮಿಸ್ ಮಾಡ್ಕೋಂಡಾಗ ಸಂದರ್ಭ ಕೇರ್ ಅನ್ನು ನಿರ್ಧರಿಸುವುದು ಎಷ್ಟು ಸರಿ

Sunday, April 24, 2011

ಸತ್ಯ ಸಾಯಿ ಬಾಬಾ

ಮಾತು ಆರಂಭಿಸುವ ಮುನ್ನ

ಅಗಸ್ಟ್ ೨೦೦೯ ಕ್ಕೆ ನನ್ನ ಬ್ಲಾಗ್ ಗೆ ತಡೆಯಾಜ್ಞೆ ಬಂದಿತ್ತು. ಅಬ್ಬಾ ಸಾಯಿಬಾಬಾ ಇನ್ನಿಲ್ಲ ಆನ್ನುವ ಕಾರಣವೋ ಗೊತ್ತಿಲ್ಲ ತಡೆಯಾಜ್ಞೆ ತೆರವಾಗಿದೆ. ಹಾಗಾಗಿ ಬಾಬಾ ಕುರಿತು ಇವತ್ತು ಪೋಸ್ಟ್ ಮಾಡುತ್ತಿದ್ದೇನೆ. ಮುಂದೆ ಅಡೆತಡೆಗಳಿಲ್ಲದೆ ಬ್ಲಾಗ್ ನಡೆದುಹೋಗುತ್ತೆ ಅನ್ನಉವ ಭರವಸೆ ಇದೆ.
-----------------------------------------------------------------------------------

ಪುಟ್ಟಪರ್ತಿಯಲ್ಲಿ ನೀರವ ಮೌನ



ಸತ್ಯ ಸಾಯಿಬಾಬಾ ಆಸ್ಪತ್ರೆಯಲ್ಲಿದ್ದಾರೆ. ಸಾವು ಬದುಕಿನ ನಡುವೆ ಹೋರಾಟ ನಡೆದಿದೆ. ತಾನು ಸಾಯುವ ದಿನ ಘೋಷಿಸಿದ್ದ ಸತ್ಯಸಾಯಿ ಬಾಬಾನಿಗೆ ಈ ಸ್ಥಿತಿ ಅಂದಾಗ ನಾನು ಅಚ್ಚರಿಯಾಗಿದೆ. ಜಗತ್ತಿನ ಕಣ್ಣೀರು ಓರೆಸ ಹೊರಟವನಿಗೆ ಈ ಸ್ಥಿತಿ ಅಂದ್ರೆ ಯಾರಿಗೆ ನೋವಾಗುವುದಿಲ್ಲ ಹೇಳಿ.ಹಾಗಂತ ನಾನು ಬಾಬಾನನ್ನ ಭಗವಂತ ಅಂದವನಲ್ಲ.ನನ್ನ ಅನುಭದ ಕಾರಣಕ್ಕೆ ಬಾಬಾ ಬಗ್ಗೆ ಆಭಿಮಾನವಿದೆ.ಕಳ್ಳ ಬಾಬಾಗಳಿಗಿಂತ ಸತ್ಯಸಾಯಿ ಬಾಬಾರ ಬಗ್ಗೆ ಒಂದಿಷ್ಟು ಪ್ರೀತಿಯಿದೆ.

Sunday, August 2, 2009

ಮರು ಪ್ರವೇಶ - ಆರ್ಥಿಕ ಹಿಂಜರಿತದ ನೆಪ

ಹೀಗೆಲ್ಲ ಯಾಕೆ ಆಗುತ್ತೆ ಅನ್ನುವ ಪ್ರಶ್ನೆಗೆ ಉತ್ತರವಿಲ್ಲ.ಕಣಜ ಬರಿದಾಯಿತೆ ಅನ್ನುವ ಆತಂಕ ಕಾಡುತ್ತಿದೆ.ಹಾಗೆನಿಲ್ಲ ಅದದ್ದು ಇಷ್ಟೆ ಭಾರೀ ಸಂಭ್ರಮದಿಂದ ಪ್ರಾರಂಭಗೊಂಡ ಬ್ಲಾಗು ಹೀಗೆ ನೀರಸವಾಯಿತೇ ಎನ್ನುವ ಪ್ರಶ್ನೆಗೆ ಹುಡುಕಾಟ ನಡೆದಿದೆ. ಇದು ನನ್ನ ಒಬ್ಬನ ಪ್ರಶ್ನೆಯಲ್ಲ. ಸುಮಾರು ಬ್ಲಾಗುಗಳು ಅಪ್ ಡೇಟ್ ಭಾಗ್ಯಕ್ಕೆ ಕಾಯುತ್ತಿದೆ.

ನನ್ನ ಪಾಡು: ಇಂದಲ್ಲ,ನಾಳೆ,ನಾಳೆ ಇಲ್ಲ ನಾಡಿದ್ದು ಹೀಗೆ ದಿನ ದೂಡಿ ತಿಂಗಳು ಕಳೆದಿದೆ. ಹೌದು ಸ್ವಾಮಿ ರಿಸಿಷನ್ ಪ್ರಭಾವ. ಗೂಗ್ಲ್ ಕ್ಲಿಕ್ ಮಾಡಬೇಕಾದರೂ only for news ಅನ್ನುವ ಎಚ್ಚರಿಕೆಯ ಗಂಟೆ.ಸೈಬರ್ ಗೆ ಹೋಗೋಣ ಎಂದರೆ ಅಯ್ಯೋ ಟೈಂ ಎಲ್ಲಿದೆ ಮಾರಾಯ. ಅದ್ರೆ ಚಯರ್ ಸವೆಸಿದ ಕ್ಷಣ ಗೊತ್ತಿಲ್ಲದೆ ಸರಿದಿದೆ.

ನನ್ನ ಸ್ವಗತ ೧: laptop ತೆಗೆದು ಬ್ಲಾಗ್ ಅಪ್ ಡೇಟ್ ಮಾಡೋಣ ಎಂದರೆ ಯಾವ ಬ್ಯಾಂಕು ಲೋನ್ ಕೊಡಲ್ಲ. ಬದಲಿಗೆ ನಮ್ಮ ಪಾಲಿಗೆ ಬಾಗಿಲು ಮುಚ್ಚಿರುವ ಬ್ಯಾಂಕ್ ನ ವಾರ್ಷಿಕ ,ಅರ್ಧ ವಾರ್ಷಿಕ ವಹಿವಾಟನ್ನು ಬರೆಯುವುದನ್ನು ತಪ್ಪಿಸುವಂತಿಲ್ಲ. ಎಲ್ಲಿಗೆ ಕಾಲ ಬಂತು ಸ್ವಾಮಿ.
ನನ್ನ ಸ್ವಗತ ೨:ಬಹು ಮಹಡಿ ಕಟ್ಟದಿಂದ ಯಾರೋ ಹಾರಿದರಂತೆ,ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕ್ಯಾಟ್ ವಾಕ್ ಇವೆಲ್ಲ IMP.ಇದರಲ್ಲೇ ಕಾಲ ಕಳೆದು ಹೋಯಿತು.ದಾಲ್ ರೇಟ್ ಜಾಸ್ತಿಯಾಗಿದೆ.ಒಂದು ಚಿಕ್ಕ ದಾಲ್ ಒಳಗಡೆ ಸಾವಿರ ಕಥೆಯಿದೆ.MNC ಕಂಪನಿಗಳು ದಾಲ್ ರೇಟ್ ಗಗನಮುಖಿಯಾಗಲು ಪ್ರಮುಖ ಕಾರಣ.ಆದರೆ ಇವನೆಲ್ಲಾ ನಾವು ಬರೆಯುವ ಹಾಗಿಲ್ಲ.ಅಂದ ಹಾಗೆ ನೀವು ಯಾಕೆ ಅಂತ ಕೇಳುವ ಹಾಗಿಲ್ಲ. ಬ್ಯಾಂಕ್ ಗೂ ದಾಲ್ ಗೆ ಎಂಥಾ ಸಂಬಂಧ ನೋಡಿ.


ಮಿರ್ಚಿಕಾ ಮರ್ಜಿ


ಟಿ.ವಿ ಬಗ್ಗೆ ಪತ್ರಿಕೆಗಳು ಚರ್ಚೆ ನಡೆಸಿತು. ಈಗ ಪತ್ರಿಕೆ ಬಗ್ಗೆ ಪತ್ರಿಕೆಯಲ್ಲೇ ಚರ್ಚೆ ಪ್ರಾರಂಭಗೊಂಡಿದೆ. ಈ ನಡುವೆ ಟಿ.ವಿ ನಲ್ಲಿ ಪೇಪರ್ ಬಗ್ಗೆ ಚರ್ಚೆ ಚರ್ಚೆ ನಡೆಸಲು ಸಿದ್ದತೆ ನಡೆಸಿತು. ಪ್ರೋಮೋ ಬಿಟ್ಟರೆ ಮತ್ತೇನೂ ಅಲ್ಲಿ ಬರಲೇ ಇಲ್ಲ. ಪೇಪರ್ ಬಗ್ಗೆ ಪೇಪರ್ ನಲ್ಲೆ ಚರ್ಚೆ ನಡೆಯಿತು ಅಂತ ಟಿ.ವಿ ನಲ್ಲಿ ಟಿ.ವಿ ಬಗ್ಗೆ ಚರ್ಚೆಯಾಗಲ್ಲ. ಯಾಕೆಂದರೆ ನಮ್ಮದೂ ಅನಿವಾರ್ಯ ಸಹಕಾರ ಸಂಘ ನಿಗಮ ನಿಯಮಿತ.

Sunday, May 3, 2009

ಒಂದಿಷ್ಟೆ ಹೊತ್ತು

ಕತ್ತಲಾಗಿದೆ ಜಗತ್ತು
ಬೆತ್ತಲಾಗಿದೆ ಮನಸ್ಸು
ಮೈ ಮನ ಆವರಿಸಿದೆ ಮುನಿಸು
ನಕ್ಷತ್ರದ ಸುತ್ತ ಕಪ್ಪು ಚುಕ್ಕೆ
ಮಲ್ಲಿಗೆ ಕಂಪಿನಲ್ಲೂ
ಬೆವರ ಪರಿಮಳ ಆವರಿಸಿದೆ

ಕನಸುಗಳಿಗೆ ಮೊರ್ತ ಸ್ವರೂಪ
ಬದುಕಿನಲ್ಲಿ ಸಂಭ್ರಮದ ಕ್ಷಣ
ಕೆಲವೇ ಹೊತ್ತು ಮಲ್ಲಿಗೆ ಅರಳಿದೆ
ಮತ್ತೆ ಮೊಗ್ಗು ಕಟ್ಟುವ ಆಶೆ

ಮಲ್ಲಿಗೆ ಪರಿಮಳ ಬೆವತಿದೆ
ಪರಿಮಳ ಹೀರಬೇಕು

ಕೂದಲ ಬೇರಲ್ಲಿ ಕಂಪನ
ಕನಸಿನ ಮೋಡ ಮಳೆಯಾಗಿದೆ

ಬೆಳಕು ಹರಿವ ಹೊತ್ತಿಗೆ ನಿರಾಳ
ಮೈ ಮನದ ಸುತ್ತ ಮಲ್ಲಿಗೆಯದ್ದೆ ಘಮ ಘಮ

Saturday, April 18, 2009

ಬದುಕು

ಶರಣಾಗುತ್ತೇನೆ ಗೆಳತಿ
ನಿನ್ನ ಪಾದ ತಳದಲ್ಲಿ
ಬಿರು ಬಿಸಿಲಲ್ಲಿ ತಂಗಾಳಿಯಾಗುತ್ತೇನೆ
ಅಮಾವಸೆ ಕತ್ತಲಲ್ಲಿ
ಮಿಂಚು ಹುಳವಾಗುತ್ತೇನೆ
ಆದರೆ
ಮಳೆ ಬಂದಾಗ ಮರವಾಗಲಾರೆ
ನಿನ್ನ ಕಣ್ಣಂಚಿನಲ್ಲಿ ಕಣ್ಣೀರಾಗುವ
ಬದಲು
ನಿನ್ನ ಉಸಿರಾಗುತ್ತೇನೆ

ಇಷ್ಟೆಲ್ಲ ನಿನಗಾಗಿ
ನನಗಾಗಿ ನೀನು ಬದುಕಾಗಬೇಡ
ನನ್ನ ರೆಪ್ಪೆಯೊಳಗಿನ ಕನಸಾಗು
ಅಷ್ಟೆ ಸಾಕು ನಾನು ಬದುಕು ಕಟ್ಟುತ್ತೇನೆ

Monday, February 2, 2009

ಈ ಸಾವು ನ್ಯಾಯವೇ?





ಖಂಡಿತಾ ಈ ಲೇಖನ ಓದಿದ ನಂತರ ನಮ್ಮ ವ್ಯವಸ್ಥೆಯ ಬಗ್ಗೆ ಮತ್ತೆ ಪ್ರಶ್ನೆಯೊಂದು ಎದುರಾಗುತ್ತದೆ.ದಯವಿಟ್ಟು ಕ್ಷಮಿಸಿ ನಮ್ಮ ಕೈಯಲ್ಲಿ ಸಾಧ್ಯವಾಗಬಹುದಾದ ಕೆಲಸವನ್ನು ಮಾಡಿದ್ದೇವೆ.ಕೊನೆಯದಾಗಿ ಈ ವಿಷಯವನ್ನು ಹೊರ ಜಗತ್ತಿಗೆ ತಿಳಿಸಿಕೊಡುವ ಮತ್ತೊಂದು ಪ್ರಯತ್ನ ಇಲ್ಲಿದೆ.


ಈ ಸಾವು ನ್ಯಾಯವೇ ಎನ್ನುವ ಮಾತಿನ ಹಿಂದೆ ಸಮಾಧಾನಕ್ಕೆ ನಿಲುಕದ ನೋವಿದೆ.ಸಾವಿನ ಪ್ರಚಾರಕ್ಕೂ ಇಂತಹ ತಾರತಮ್ಯವೇ ಎನ್ನುವ ಪ್ರಶ್ನಾರ್ಥಕ ಚಿಹ್ನೆಯಿದೆ.
ನಿಮಗೆ ನೆನಪಿರಬಹುದು ಹಳೆ ವಿಮಾನ ರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡಿ,ಪೋಲೀಸರ ಕಣ್ಣು ತಪ್ಪಿಸಲು ಹೋದ ಮೊಕ್ರಂ ಎನ್ನುವ ಯುವಕ ಸೇನೆಯ ಗುಂಡಿಗೆ ಬಲಿಯಾದಾಗ ಸಿಕ್ಕ ಪ್ರಚಾರ.ರಾಷ್ಟ್ರೀಯ ವಾಹಿನಿಗಳು ಸೇರಿದಂತೆ ಮಾಧ್ಯಮಗಳು ಸಾಕಷ್ಟು ಈ ಬಗ್ಗೆ ಬರೆದಿದ್ದವು.ಇದು ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಹಜ.ಆದರೆ ಅಗಬಾರದ ಅನಾಹುತ ಆಯಿತು ಅಂತ ಬರೆದರಲ್ಲ ಅದು ದುರದೃಷ್ಟ. ಆದರೆ ಇದಕ್ಕೆ ವ್ಯತಿರಿಕ್ತವಾದ ಘಟನೆ ನಡೆದಿದೆ.ಆದರೆ ಸುದ್ದಿಯಾಗಲಿಲ್ಲ.ಸದ್ದೂ ಮಾಡಲಿಲ್ಲ.ಕಂದಮ್ಮಳನ್ನು ಕಳೆದುಕೊಂಡ ಮನಸ್ಸುಗಳು ಮಾತ್ರ ಜೀವನ ಪರ್ಯಂತ ನರಳುವಂತಾಗಿದೆ.

ಆದು ಜನವರಿ ೩೦ರ ಸಂಜೆ.ಬೆಂಗಳೂರಿನ ಗೋವಿಂದರಾಜ ನಗರದ ಮನೆಯೊಂದರಲ್ಲಿ ಸಂಭ್ರಮದ ಸಿದ್ದತೆ ನಡೆಯುತ್ತಿತ್ತು.ಪುಟಾಣಿಯೊಬ್ಬಳ ಹುಟ್ಟು ಹಬ್ಬದ ಸಡಗರಕ್ಕೆ ಬೀದಿ ತಯಾರಾಗಿತ್ತು.ಆದೇ ಹೊತ್ತಿನಲ್ಲಿ ಹುಟ್ಟು ಹಬ್ಬ ಆಚರಿಸಬೇಕಾಗಿದ್ದಚಿತ್ರಾ ಬೀದಿ ಬದಿಯಲ್ಲಿ ಆಡುತ್ತಿದ್ದಳು.ಅದು ಎಲ್ಲಿದ್ದನೋ ಯಮಕಿಂಕರ.ಅದೇ ದಾರಿಯಲ್ಲಿ ಬೈಕ್ ವೀಲಿಂಗ್ ಮಾಡಿಕೊಂಡು ಬಂದ ಪುಣ್ಯಾತ್ಮನೊಬ್ಬ ಚಿತ್ರಾ ಮೇಲೆ ಬೈಕ್ ಹತ್ತಿಸಿದ್ದ.ಕ್ಷಣಾರ್ಧ.ಚಿತ್ರಾಳ ಪ್ರಾಣ ಪಕ್ಷಿ ಹಾರಿ ಹೋಗಿತ್ತು.ಇತ್ತ ಬೈಕ್ ಸವಾರ ಗಾಡಿ ಬಿಟ್ಟು ಪರಾರಿಯಾಗಿದ್ದ.

ಹೊಸ ಬಟ್ಟೆ ಉಟ್ಟು ೯ನೇ ವರ್ಷಕ್ಕೆ ಕಾಲಿಡಬೇಕಾಗಿದ್ದ ಚಿತ್ರಾಳ ಕುಟುಂಬದ ಹಿಂದೆ ನೋವಿನ ಕಥೆಯಿದೆ. ವೃತ್ತಿಯಲ್ಲಿ ಚಿತ್ರಾಳ ತಂದೆ ಬಸವರಾಜು ಮಾಸ್ತರ್, ಅವರಿಗೆ ಒಟ್ಟು ೫ ಜನ ಮಕ್ಕಳು. ಈಗಾಗಲೇ ೪ ಮಕ್ಕಳನ್ನು ಬಸವರಾಜು ಕಳೆದುಕೊಂಡಿದ್ದರು. ಕೊನೆಯ ಪುಟಾಣಿ ಚಿತ್ರಾಳನ್ನು ಇನ್ನಿಲ್ಲದ ಪ್ರೀತಿಯಿಂದ ಬೆಳೆಸಿದ್ದರು. ಬೀದಿ ಮಂದಿಗೂ ಅಷ್ಟೇ.. ಚಿತ್ರಾಳೆಂದರೆ ಅಚ್ಚು ಮೆಚ್ಚು.ಆದರೆ ಈಗ ಎಲ್ಲವೂ ನೆನಪು.ವೀಲಿಂಗ್ ಎಂಬ ಹುಚ್ಚು ಸಾಹಸಕ್ಕೆ ಯಾವುದೇ ತಪ್ಪು ಮಾಡದ ಚಿತ್ರ ಬಲಿಯಾಗಿದ್ದಾಳೆ.
ಇಂಥ ಸಾವಿನ ಕಥೆಗೆ ಸಿಗಬೇಕಾಗಿದ್ದ ಪ್ರಚಾರ ಸಿಗಲಿಲ್ಲ.ಮಂಗಳೂರಿನ ಪಬ್ ದಾಳಿಯ ಸುದ್ದಿಯಲ್ಲಿ ಚಿತ್ರ ತೇಲಿ ಹೋಗಿದ್ದಾಳೆ.ಇದು ವಿಜಯನಗರ ಟ್ರಾಫಿಕ್ ಪೋಲಿಸರಿಗೂ ಅನುಕೂಲವಾಗಿದೆ.ಬೈಕ್ ಬಿಟ್ಟು ಹೋದ ಯುವಕ ಪತ್ತೆಗೆ ಪೋಲಿಸರು ಇನ್ನೂ ಮೀನಾ ಮೇಷ ಎಣಿಸುತ್ತಿದ್ದಾರೆ. ಅದಕ್ಕೆ ಈ ಸಾವು ನ್ಯಾಯವೇ................

ಕೆಳಗಡೆ ಸಂಚಾರ ವಿಭಾಗದ ಪೊಲೀಸ್ ಆಯುಕ್ತರ ಈ ಮೈಲ್ ಇದೆ. ಈ ಪ್ರಕರಣ ಸಂಬಂಧ ಆರೋಪಿಯ ಶೀಘ್ರ ಬಂಧಿಸುವಂತೆ ಒಂದು ಮೇಲ್ ಕಳುಹಿಸಿ ಅಮೇಲೆ ನೋಡೋಣ ನಮ್ಮ ಪೊಲೀಸರ ಕಾರ್ಯ ವೈಖರಿ.
addlcptrafficbcp@gmail.com

Friday, January 16, 2009

ಹೊತ್ತಲ್ಲದ ಹೊತ್ತಿನಲ್ಲಿ.......... ಅನಂತ ನಮನ



ತುಂಬಾ ದಿನಗಳಿಂದ ನಾನು ಬರೆಯಬೇಕು ಅಂದುಕೊಂಡದ್ದು ಬೇರೆ ವಿಷಯ.ಆದರೆ ಹೀಗೆ ನನ್ನ ಲೇಖನ ಹಾದಿ ಬದಲಾಗುತ್ತದೆ ಅಂದುಕೊಂಡಿರಲಿಲ್ಲ.ತಿಂಗಳು ಕಳೆದು ಹೋಗಿದೆ ಬರೆಯಬೇಕು ಅನ್ನುವ ತುಡಿತಕ್ಕೆ.ಬರೆಯಬೇಕು ಅಂದುಕೊಂಡಗಾಲೆಲ್ಲ ಸಾವಿರ ಅಡ್ಡಿಗಳು.ಹಿಂದೆ ಶ್ರೀನಿಧಿ ಕಾಡುತ್ತಿದ್ದ.ಈಗ ಅವನಿಗೂ ಅರ್ಥವಾಗಿದೆ.ಹೀಗಾಗಿ ವಾರಕ್ಕೊಂದು ಪೋಸ್ಟ್ ಮಾಡಲೇಬೇಕು ಅಂತ ನಿರ್ಧರಿಸಿದ್ದೇನೆ.

ಬರೆಯಬೇಕು ಅಂತ ಅಂದುಕೊಂಡಿದ್ದ ಲೇಖನ ಈಗ outdated ಆಗಿದೆ.ಹಾಗಾಗಿ ಹಳೆಯ ನೆನಪುಗಳನ್ನು ಕೆದಕಿದಷ್ಟೆ ನೋವಾಗುತ್ತಿದೆ.
ಬೆಳಗಾವಿ ಅಧಿವೇಶನ,ಸಾಹಿತ್ಯ ಸಮ್ಮೇಳನದ ಸಿದ್ದತೆ.ಇದು ಒಂದು ಕಡೆಯಾದರೆ.ಮತ್ತೊಂದು ಕಡೆ ರಾಜು ಅನಂತಸ್ವಾಮಿ ಇನಿಲ್ಲ.ಹೀಗೆ ನೆನಪುಗಳ ಬುತ್ತಿ ಸಾಗುತ್ತದೆ. ನಾವೆಲ್ಲ ಭಾವಗೀತೆ ಅಂದರೆ ಭಾವಪರವಶರಾಗುತ್ತೇವೆ.ಆದರೆ ಇನ್ನು ಮುಂದೆ ಬರೀ ನೆನಪುಗಳ ಮುಂದೆ ಪರವಶರಾಗಬೇಕಾಗಿದೆ.ವಿಧಿ ಎಷ್ಟೊಂದು ಕ್ರೂರಿ ಅನ್ನಿಸಿಬುಡುತ್ತೆ.ಜಿ.ವಿ. ಅತ್ರಿಯಂತೆ ಇದೀಗ ರಾಜು ಹೊತ್ತಲ್ಲದ ಹೊತ್ತಿನಲ್ಲಿ ಅಗಲಿದ್ದಾರೆ.ಏನಾಗಿದೆ ಇವರಿಗೆಲ್ಲ ಅನ್ನಿಸಿಬಿಡುತ್ತೆ.ಹೌದು ನನ್ನಂತ ಭಾವಗೀತೆ ಪ್ರೀಯರಿಗಂತು ರಾಜು ಅನಂತಸ್ವಾಮಿ ಇನ್ನಿಲ್ಲ ಅನ್ನುವುದು ನಂಬಲಾಗದ ಸತ್ಯ. ಸುದ್ದಿಯ ಬೆನ್ನು ಬಿದ್ದಿದ್ದ ನನಗೆ ರಾಜು ಅನಂತಸ್ವಾಮಿ ಹೀಗೆ ಸುದ್ದಿಯಾಗುತ್ತಾರೆ ಅಂದುಕೊಂಡಿರಲಿಲ್ಲ. ಯಾವ ಮೋಹನ ಮುರಳಿ ಕರೆಯಿತೋ..... ದೂರ ತೀರಕೆ ನಿನ್ನನ್ನು..........ಜಿ.ಪಿ.ರಾಜರತ್ನಂ ಅವರ ರತ್ನನ ಪದಗಳನ್ನು ಹಾಡುವ ಮೂಲಕ ಕನ್ನಡದ ಮನೆ ಮನಗಳಲ್ಲಿ ಮಾತಾಗಿದ್ದರು.ಹೀಗೆ ರಾಜು ಬಗ್ಗೆ ಹೇಳುತ್ತ ಹೋದರೆ ಸಾವಿರ ಪುಟಗಳು.

ಒಂದು ನಿಟ್ಟನಲ್ಲಿ ರಾಜು ಬಹುಮುಖ ಪ್ರತಿಭೆಯಾಗಿದ್ದ.ಭಾವಗೀತೆ ಲೋಕದ ಮಾಂತ್ರಿಕನಲ್ಲದೆ...ಚಲನಚಿತ್ರಗಳಿಗೆ ಸಂಗೀತ ನಿರ್ದೇಶನಾಗಿದ್ದ.ಒಳ್ಳೆಯ ನಟನಾಗಿದ್ದ. ಮಂಡ್ಯ ರಮೇಶನ ನಟನ ಶಾಲೆಯಲ್ಲಿ ಸಂಗೀತ ಗುರುವಾಗಿ, ಹಲವು ಚಿತ್ರಗಳಲ್ಲಿ ಹಾಸ್ಯ ನಟರಾಗಿಗೂ ರಾಜು ಅನಂತಸ್ವಾಮಿ ನಟಿಸಿದ್ದ.ಪುನೀತ್ ನ 'ಅಭಿ' ಚಿತ್ರದಲ್ಲಿನ ನಟನೆಗಾಗಿ ಉತ್ತಮ ಹಾಸ್ಯ ನಟ ಪ್ರಶಸ್ತಿ ರಾಜು ಪಾಲಾಗಿತ್ತು.ಜೊತೆಗೆ ನಾಗತಿಹಳ್ಳಿ ನಿರ್ದೇಶನದ 'ಅಮೃತ ಧಾರೆ' ಮತ್ತು ಜಾಕ್ ಪಾಟ್ ಚಿತ್ರಗಳಲ್ಲಿ ನಟನೆ. ಹೂವು,ಅನಂತ ನಮನ,ದೀಪೋತ್ಸವ,ಮುಂತಾದ ಆಲ್ಬಂಗಳನ್ನು ರಾಜು ಅನಂತಸ್ವಾಮಿ ಹೊರ ತರುವಲ್ಲಿ ಪಟ್ಟ ಶ್ರಮ ಆಷ್ಟಿಷ್ಟಲ್ಲ.ಈಗ ನೆನಪು ಮಾತ್ರ.ನಮನ ಮಾತ್ರ ನನ್ನ ಕಡೆಯಿಂದ.