Sunday, April 24, 2011

ಸತ್ಯ ಸಾಯಿ ಬಾಬಾ

ಮಾತು ಆರಂಭಿಸುವ ಮುನ್ನ

ಅಗಸ್ಟ್ ೨೦೦೯ ಕ್ಕೆ ನನ್ನ ಬ್ಲಾಗ್ ಗೆ ತಡೆಯಾಜ್ಞೆ ಬಂದಿತ್ತು. ಅಬ್ಬಾ ಸಾಯಿಬಾಬಾ ಇನ್ನಿಲ್ಲ ಆನ್ನುವ ಕಾರಣವೋ ಗೊತ್ತಿಲ್ಲ ತಡೆಯಾಜ್ಞೆ ತೆರವಾಗಿದೆ. ಹಾಗಾಗಿ ಬಾಬಾ ಕುರಿತು ಇವತ್ತು ಪೋಸ್ಟ್ ಮಾಡುತ್ತಿದ್ದೇನೆ. ಮುಂದೆ ಅಡೆತಡೆಗಳಿಲ್ಲದೆ ಬ್ಲಾಗ್ ನಡೆದುಹೋಗುತ್ತೆ ಅನ್ನಉವ ಭರವಸೆ ಇದೆ.
-----------------------------------------------------------------------------------

ಪುಟ್ಟಪರ್ತಿಯಲ್ಲಿ ನೀರವ ಮೌನಸತ್ಯ ಸಾಯಿಬಾಬಾ ಆಸ್ಪತ್ರೆಯಲ್ಲಿದ್ದಾರೆ. ಸಾವು ಬದುಕಿನ ನಡುವೆ ಹೋರಾಟ ನಡೆದಿದೆ. ತಾನು ಸಾಯುವ ದಿನ ಘೋಷಿಸಿದ್ದ ಸತ್ಯಸಾಯಿ ಬಾಬಾನಿಗೆ ಈ ಸ್ಥಿತಿ ಅಂದಾಗ ನಾನು ಅಚ್ಚರಿಯಾಗಿದೆ. ಜಗತ್ತಿನ ಕಣ್ಣೀರು ಓರೆಸ ಹೊರಟವನಿಗೆ ಈ ಸ್ಥಿತಿ ಅಂದ್ರೆ ಯಾರಿಗೆ ನೋವಾಗುವುದಿಲ್ಲ ಹೇಳಿ.ಹಾಗಂತ ನಾನು ಬಾಬಾನನ್ನ ಭಗವಂತ ಅಂದವನಲ್ಲ.ನನ್ನ ಅನುಭದ ಕಾರಣಕ್ಕೆ ಬಾಬಾ ಬಗ್ಗೆ ಆಭಿಮಾನವಿದೆ.ಕಳ್ಳ ಬಾಬಾಗಳಿಗಿಂತ ಸತ್ಯಸಾಯಿ ಬಾಬಾರ ಬಗ್ಗೆ ಒಂದಿಷ್ಟು ಪ್ರೀತಿಯಿದೆ.