Saturday, November 29, 2008

ನಮನ........

ಪ್ರತೀ ಕ್ಷಣ ಆತಂಕ.... ಎಲ್ಲ ಮುಗಿದಿದೆ ಈಗ ಉಳಿದಿರುವುದು ನೋವು... ನೆನಪು ಅಳಿಯದಿರಲಿ

ಸೆಲ್ಯೂಟ್ to brothers..... ಸುದ್ದಿಗಾಗಿ ಪಟ್ಟ ಪಾಡು, ಹೋರಾಟದ ಅಂತಿಮ ಕ್ಷಣ..... ಇಲ್ಲಿದೆ













Saturday, November 8, 2008

ಮೌನಗಳು

ಮೌನ ೧

ಯಾಕೆ ಕಾಡುತ್ತೀಯ ಹೀಗೆ
ಮಾತಿನಲ್ಲಿ ಮೌನದಲ್ಲಿ
ಜಿಟಿ ಜಿಟಿ ಮಳೆಯಲ್ಲೂ
ನಿನ್ನದೇ ನೆನಪು
ನಿನ್ನ ಮೌನ ರೂಪ
ನನ್ನ ಮೌನವನ್ನು ಹೇಗೆ ಕಾಡುತ್ತಿದೆ

ಮೌನ ೨

ಮೌನವಾಗಿರುವ ಹುಡುಗಿ
ಮೌನದೊಳಗೆ ಕಾಡುತ್ತಾಳೆ
ತುಟಿ ಬಿಚ್ಚದ ಹುಡುಗಿ
ಮೌನದಲ್ಲಿ ಮುಗುಳು ನಗುತ್ತಾಳೆ
ಮಲ್ಲಿಗೆಯಂತ ಮೌನ
ತಾವರೆಯಂತಹ ನಗು
ಅರ್ಥವಾಗುವುದೇ ಇಲ್ಲ.

ಮೌನ ೩
ಅಮ್ಮ ಬಿಡಲಿಲ್ಲ
ಅಪ್ಪ ಮೌನ ಒಡೆಯಲಿಲ್ಲ
ಒಡೆದದ್ದು ಹೃದಯಗಳು
ಮನಗಳು

Tuesday, November 4, 2008

ನೆಟ್ಟ(ಟ್ಟಿ)ಗೆ ಬರೆಯುವವರು

ಎಲ್ಲೊ ಓದಿದ ನೆನಪು ಬ್ಲಾಗ್ ಎಂದರೆ ಖಾಸಗಿ ಡೈರಿ ಎಂದು, ನನಗೆ ಇಷ್ಟವಾಗಿರಲಿಲ್ಲ.ನಿಮಗೆ ಬೇಕಾದದನ್ನು ಖಂಡಿತಾ ಬರೆಯಲು ಅವಕಾಶವಿದೆ.ಹಾಗಂತ ಅದನ್ನು ಎಲ್ಲರೂ ಓದಬಾರದು ಅಂತ ಏನಿಲ್ಲ ತಾನೇ.ಅಂದ ಮೇಲೆ ಅದು ಖಾಸಗಿ ಡೈರಿಯಾಗಲು ಹೇಗೆ ಸಾಧ್ಯ.ನಿಮ್ಮ ಕನಸುಗಳಿಗೆ,ನಿಮ್ಮ ವಿರಹ ವೇದನಗಳಿಗೆ ಬ್ಲಾಗ್ ನಲ್ಲಿ ಅವಕಾಶವಿದೆ.ಅಂದ ಹಾಗೆ ಬರೆದ ಬರಹಗಳಿಗೆ copy right ಇಲ್ಲ.ಹೀಗೆ ಡೈರಿ ಅನ್ನುವ ಕಲ್ಪನೆಯನ್ನು ದಯವಿಟ್ಟು ಕಿತ್ತು ಹಾಕಿ.

ಬ್ಲಾಗ್ ನಲ್ಲಿ ಕೆಸರೆರಚಾಟದ ಚಟಗಳು ಪ್ರಾರಂಭವಾಗಿದೆ.ಒಂದಿಷ್ಟು ದಿನ ಬಿಟ್ರೆ ಈ ಚಟ ಕಡಿಮೆಯಾಗುತ್ತದೆ. ಆದರೆ ಆತೀ ಬುದ್ದಿವಂತರೆನಿಸಿದ ಮಂದಿ ಇಂತಹ ಲೇಖನಗಳಿಗೆ ಪ್ರತಿಕ್ರಿಯಿಸುವುದರಿಂದ ಇವರಿಗೆ ಒಂದಿಷ್ಟು ಬಲ ಬಂದ ಹಾಗಿದೆ.ಅವರು ಕೆಸರಲ್ಲಿದ್ದಾರೆ ನಿಜ,ನಾವೇಕೆ ಕೆಸರಿಗೆ ಇಳಿಯೋಣ.ಬ್ಲಾಗ್ ಗಳು ಪವಿತ್ರವಾಗಿರಬೇಕು ನಿಜ.ಹಾಗಾಗಿ ನಮ್ಮತನದಲ್ಲಿ ನಾವಿದ್ದರೆ ಬ್ಲಾಗ್ ಗಳು ತನ್ನತನದ ಹಾದಿಯಲ್ಲಿ ಮುನ್ನಡೆಯುತ್ತದೆ.

ಹೊಸತನಕ್ಕೆ ತೆರೆದುಕೊಳ್ಳುತ್ತಿರುವ ಬ್ಲಾಗುಗಳು ಕನ್ನಡದ ಮಟ್ಟಿಗೆ ಹೊಸ ಬೆಳವಣಿಗೆಯೇ ಸರಿ ಹತ್ತು ಹಲವು ಕಥೆಗಳು, ಕವನಗಳು ಹೊಸತನದಿಂದ ನಮಗೆ ಸಿಗುತ್ತಿವೆ.ಸವಿಯೋಣ ಬನ್ನಿ
ನಮಗೊಂದು ಅಭಿಮಾನವಿದೆ ನಾವೆಲ್ಲ ನೆಟ್ಟಗೆ ಬರೆಯುವವರು ಅಂದರೆ ನೆಟ್ಟಿಗೆ ಬರೆಯುವವರು