Thursday, September 11, 2008

ನಾಲ್ಕು ಕನಸು

ಕನಸು - ೧

ನನ್ನ ಪಾದ ತಲಗಳನ್ನು ಸಮುದ್ರದ
ಅಲೆಗಳು ಚುಂಬಿಸುತ್ತಿರಬೇಕು
ಸಮುದ್ರ ದಂಡೆಯಲ್ಲಿ ಮಲಗಿ ನಾನು
ಆಕಾಶ ದೃಷ್ಟಿಸುತ್ತಿರಬೇಕು
---------------------------

ಕನಸು - ೨


ಈ ಮಳೆಯೇ ಹೀಗೆ, ತುಂತುರು ಹನಿ
ಕಿವಿಯಲ್ಲೊಂದು ಮೊಬೈಲ್ ನ ಈಯರ್ ಫೋನ್
ಅದರಲ್ಲಿ ನನ್ನ ಹುಡುಗಿಯಯ ದನಿ
ಹನಿ ಹನಿ ಪ್ರೇಂ ಕಹಾನಿ
-------------------------

ಕನಸು - ೩


ಪೂಜೆ ಮುಗಿದ ಮೇಲೆ
ದೇವರ ಮುಟ್ಟಬೇಕು, ನಮಿಸಬೇಕು ಅನ್ನಿಸುತ್ತದೆ
ಪ್ರೀತಿಸಿದ ಹುಡುಗಿಯ ಮೇಲೂ ಅಷ್ಟೆ ಭಕ್ತಿ
ಪೂಜೆ ಮುಗಿದ ವಿಗ್ರಹದಂತೆ
ಪ್ರೀತಿ ಉಕ್ಕುತ್ತದೆ
----------------------------
ಕನಸು ೪

ಎಲ್ಲಾ ಮರೆತಿರುವಾಗ, ಮರೆಯಲಾಗುವುದಿಲ್ಲ
ನಿನ್ನ ಕಣ್ಣ ಒಳಗಿನ ಕನಸು
ಮನಸ್ಸಿನೊಳಗಿನ ಭಯ, ಆತಂಕ
ಮತ್ತೇನೂ ತಪ್ಪು ........ನಿನ್ನ ಕನಸು ಕದ್ದದ್ದು

Tuesday, September 9, 2008

ನಲ್ಲೂರು - ಸಾರಥಿಯಾದ ಬಗೆ


ಕನ್ನಡ ಸಾಹಿತ್ಯ ಪರಿಷತ್ ನ ನೂತನ ಅಧ್ಯಕ್ಷರಾಗಿ ನಲ್ಲೂರು ಪ್ರಸಾದ್ ಅಧಿಕಾರ ಸ್ವೀಕರಿಸಿದ್ದಾರೆ.ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯ ನೂತನ ಸಾರಥಿಯ ಮೇಲೆ ಇದೀಗ ಹತ್ತು ಹಲವು ಭರವಸೆಗಳಿದೆ.ಚುನಾವಣೆಯ ಕಣಕ್ಕೆ ಇಳಿದ ಸಂದರ್ಭದಲ್ಲಿ ನಲ್ಲೂರು ಹಲವು ಬಗೆಗಳಲ್ಲಿ ತನ್ನ ಗೆಲುವಿನ ದಾರಿಯನ್ನು ಕಂಡುಕೊಂಡಿದ್ದರು. ಉಡುಪಿಯ ಸಾಹಿತ್ಯ ಸಮ್ಮೇಳನಕ್ಕೂ ಮುನ್ನವೇ ತಾವು ಪರಿಷತ್ ನ ಸಾರಥಿಯಾಗಬೇಕು ಎಂದು ಟೊಂಕ ಕಟ್ಟಿದ ನಲ್ಲೂರು ಅದರಲ್ಲಿ ಯಶಸ್ವಿಯಾಗಿದ್ದಾರೆ.

ಒಂದು ರೀತಿಯಲ್ಲಿ ನೋಡಿದರೆ ನಲ್ಲೂರು ಸುಲಭ ಗೆಲುವಿಗೆ ದಾರಿ ಮಾಡಿಕೊಟ್ಟದ್ದು ಅವರ ಪ್ರತಿಸ್ಪರ್ಧಿಯಾಗಿದ್ದ ಸಿ.ವೀರಣ್ಣ ಎಂದರೆ ತಪ್ಪಲ್ಲ.ತಮಗೆ ಸ್ಪರ್ಧಿಗಳೇ ಇಲ್ಲ ಎಂದು ಹೇಳಿ ಎಲ್ಲಾ ಬಗೆಯಲ್ಲಿ ವೀರಣ್ಣ ಎಡವಟ್ಟು ಮಾಡಿಕೊಂಡರು.ಇನ್ನು ವಿದ್ಯಾಶಂಕರ್ ಸರದಿ ಗೊಂದಲದ ಹೇಳಿಕೆಗಳದ್ದೇ ಕಾರುಬಾರಾಯಿತು. ಒಟ್ಟಾರೆ ನಲ್ಲೂರು ಪ್ರಸಾದರ ಸಂಘಟನ ಚಾತುರ್ಯತೆ ೨೩ನೇ ಕ.ಸಾ.ಪ ಅಧ್ಯಕ್ಷಗಾದಿ ಒಲಿಯುವಂತೆ ಮಾಡಿದೆ.


ನಲ್ಲೂರು... ಸವಾಲು.. ಸಾಲು.. ಸಾಲು..


* ನಲ್ಲೂರು ಮುಂದೆ ಸಾವಿರ ಸವಾಲುಗಳಿದೆ. ೭೫ನೇ ಸಾಹಿತ್ಯ ಸಮ್ಮೇಳನ ನಡೆಸಲು ಚಿತ್ರದುರ್ಗ ಸಜ್ಜಾಗಿದೆ.ಡಿಸೆಂಬರ್ ನಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ಜಿಲ್ಲಾ ಕ.ಸಾ.ಪ ಸಿದ್ಧವಿದೆ. ಆದರೆ ಸ್ಥಳೀಯ ಶಾಸಕ ಯಾಕೋ ಮನಸ್ಸು ತೋರಿಸುತ್ತಿಲ್ಲ.
* ಪರಿಷತ್ ನ ಕೊಠಡಿಗಳಲ್ಲಿ ಸಾಕಷ್ಟು ಪುಸ್ತಕಗಳು ರಾಶಿ ಬಿದ್ದಿದೆ.ಯಾರೊಬ್ಬರಿಗೂ ಇದು ಬೇಕಾಗಿಲ್ಲ.ಇದನ್ನು ವಿಲೇವಾರಿ ಮಾಡುವ ಬಗೆ ಹೇಗೆ.ಇಂತಹ ಕಳಪೆ ಗುಣಮಟ್ಟದ ಪುಸ್ತಕ ಪ್ರಕಟಣೆ ತಡೆಗಟ್ಟುವುದು ಹೇಗೆ.
* ಹಿರಿಯ ಸಾಹಿತಿಗಳು ಏನಿಸಿಕೊಂಡ ಮಂದಿ ಪರಿಷತ್ ಕಡೆ ಬರುವುದೇ ಇಲ್ಲ. ಇವರಿಗೆ ಚಾಮರಾಜಪೇಟೆಯ ಹಾದಿ ತೋರಿಸುವುದಾದರೂ ಹೇಗೆ?
* ಕನ್ನಡ ಸಾಹಿತ್ಯ ಸಮ್ಮೇಳನಗಳದ್ದು ಇದೇ ಪಾಡು, ಹಿರಿಯ ತಲೆಗಳು ಸಮ್ಮೇಳಾನಂಗಣಕ್ಕೆ ಬರುವುದಿಲ್ಲ. ಕನಿಷ್ಟ ಪಕ್ಷ ನಿಕಟ ಪೂರ್ವ ಸಮ್ಮೇಳನಾಧ್ಯಕ್ಷರು ಬಂದರೆ ಸಾಕು. ಹೊಸ ತಲೆಮಾರಿಗೆ ಹಿರಿಯ ಸಾಹಿತಿಗಳನ್ನು ಕಾಣುವ ಅವಕಾಶ ದೊರೆಯುತ್ತದೆ.
* ಸಮ್ಮೇಳನಗಳು ಜಾತ್ರೆಯಾಗುತ್ತಿದೆ. ಸಮ್ಮೇಳನದ ನಿರ್ಣಯಗಳು ಹಾಗೇ ಉಳಿದಿವೆ.
* ಬೆಂಗಳೂರಿನಲ್ಲಿ ಸಮ್ಮೇಳನ ನಡೆಯದೆ ಹಲವು ದಶಕ ಸಂದು ಹೋಗಿವೆ.ಈಗ ನಲ್ಲೂರು ಬಣದ ರಾಮಲಿಂಗೇಗೌಡ ನಗರ ಘಟಕದ ಅಧ್ಯಕ್ಷರಾಗಿದ್ದಾರೆ.
* ಅಮೃತ ನಿಧಿಯ ಕಥೆ ?

ಹೀಗೆ ಪಟ್ಟಿ ಬೆಳೆಯುತ್ತದೆ..........


ರಾಜಕೀಯ ವ್ಯಕ್ತಿಗಳಿಂದ ಸಮ್ಮೇಳನ, ಪರಿಷತ್ತು ದೂರವಿರಬೇಕು ಎಂದು ಎಲ್ಲರೂ ಬಯಸುತ್ತಿದ್ದರೂ, ಆದರೆ ನಲ್ಲೂರು ರಾಜಕೀಯ ನಂಟಿನೊಂದಿಗೆ ಪರಿಷತ್ತು ಕಟ್ಟುವುದಾಗಿ ಹೇಳಿದ್ದಾರೆ. ಕಾದು ನೋಡುವ, ೩ ವರ್ಷಗಳಲ್ಲಿ ನಲ್ಲೂರು ಪರಿಷತ್ತು ಕಟ್ಟುವ ಬಗೆಯನ್ನು