Saturday, November 8, 2008

ಮೌನಗಳು

ಮೌನ ೧

ಯಾಕೆ ಕಾಡುತ್ತೀಯ ಹೀಗೆ
ಮಾತಿನಲ್ಲಿ ಮೌನದಲ್ಲಿ
ಜಿಟಿ ಜಿಟಿ ಮಳೆಯಲ್ಲೂ
ನಿನ್ನದೇ ನೆನಪು
ನಿನ್ನ ಮೌನ ರೂಪ
ನನ್ನ ಮೌನವನ್ನು ಹೇಗೆ ಕಾಡುತ್ತಿದೆ

ಮೌನ ೨

ಮೌನವಾಗಿರುವ ಹುಡುಗಿ
ಮೌನದೊಳಗೆ ಕಾಡುತ್ತಾಳೆ
ತುಟಿ ಬಿಚ್ಚದ ಹುಡುಗಿ
ಮೌನದಲ್ಲಿ ಮುಗುಳು ನಗುತ್ತಾಳೆ
ಮಲ್ಲಿಗೆಯಂತ ಮೌನ
ತಾವರೆಯಂತಹ ನಗು
ಅರ್ಥವಾಗುವುದೇ ಇಲ್ಲ.

ಮೌನ ೩
ಅಮ್ಮ ಬಿಡಲಿಲ್ಲ
ಅಪ್ಪ ಮೌನ ಒಡೆಯಲಿಲ್ಲ
ಒಡೆದದ್ದು ಹೃದಯಗಳು
ಮನಗಳು

5 comments:

sapna said...

ರಾಧಾ ಅವ್ರೆ ಈ ಮೌನ ಯಾರು???!!!!!!!ಮನಸಲ್ಲೆ ಏನೋ ಮಂಡಿಗೆ ತಿಂತಿರೋ ಹಾಗಿದೇ??????!!!ಹಹಹಹಾ....

Unknown said...

ತುಂಬಾ ಚೆನ್ನಾಗಿದೆ ನಿಮ್ಮ ಕವನ... ಸ್ಪೂರ್ತಿಯು ಚೆನ್ನಾಗಿದೆ...

sunaath said...

ಮೌನದ ಸಾಮರ್ಥ್ಯವನ್ನು ಚೆನ್ನಾಗಿ ಬಣ್ಣಿಸಿದ್ದೀರಿ.

VENU VINOD said...

ಅಮ್ಮ ಬಿಡಲಿಲ್ಲ
ಅಪ್ಪ ಮೌನ ಒಡೆಯಲಿಲ್ಲ
ಒಡೆದದ್ದು ಹೃದಯಗಳು
ಮನಗಳು
painful lines

jomon varghese said...

nice.. ಮೌನ ಮಾತಾಡಿದೆ.