Friday, January 16, 2009

ಹೊತ್ತಲ್ಲದ ಹೊತ್ತಿನಲ್ಲಿ.......... ಅನಂತ ನಮನತುಂಬಾ ದಿನಗಳಿಂದ ನಾನು ಬರೆಯಬೇಕು ಅಂದುಕೊಂಡದ್ದು ಬೇರೆ ವಿಷಯ.ಆದರೆ ಹೀಗೆ ನನ್ನ ಲೇಖನ ಹಾದಿ ಬದಲಾಗುತ್ತದೆ ಅಂದುಕೊಂಡಿರಲಿಲ್ಲ.ತಿಂಗಳು ಕಳೆದು ಹೋಗಿದೆ ಬರೆಯಬೇಕು ಅನ್ನುವ ತುಡಿತಕ್ಕೆ.ಬರೆಯಬೇಕು ಅಂದುಕೊಂಡಗಾಲೆಲ್ಲ ಸಾವಿರ ಅಡ್ಡಿಗಳು.ಹಿಂದೆ ಶ್ರೀನಿಧಿ ಕಾಡುತ್ತಿದ್ದ.ಈಗ ಅವನಿಗೂ ಅರ್ಥವಾಗಿದೆ.ಹೀಗಾಗಿ ವಾರಕ್ಕೊಂದು ಪೋಸ್ಟ್ ಮಾಡಲೇಬೇಕು ಅಂತ ನಿರ್ಧರಿಸಿದ್ದೇನೆ.

ಬರೆಯಬೇಕು ಅಂತ ಅಂದುಕೊಂಡಿದ್ದ ಲೇಖನ ಈಗ outdated ಆಗಿದೆ.ಹಾಗಾಗಿ ಹಳೆಯ ನೆನಪುಗಳನ್ನು ಕೆದಕಿದಷ್ಟೆ ನೋವಾಗುತ್ತಿದೆ.
ಬೆಳಗಾವಿ ಅಧಿವೇಶನ,ಸಾಹಿತ್ಯ ಸಮ್ಮೇಳನದ ಸಿದ್ದತೆ.ಇದು ಒಂದು ಕಡೆಯಾದರೆ.ಮತ್ತೊಂದು ಕಡೆ ರಾಜು ಅನಂತಸ್ವಾಮಿ ಇನಿಲ್ಲ.ಹೀಗೆ ನೆನಪುಗಳ ಬುತ್ತಿ ಸಾಗುತ್ತದೆ. ನಾವೆಲ್ಲ ಭಾವಗೀತೆ ಅಂದರೆ ಭಾವಪರವಶರಾಗುತ್ತೇವೆ.ಆದರೆ ಇನ್ನು ಮುಂದೆ ಬರೀ ನೆನಪುಗಳ ಮುಂದೆ ಪರವಶರಾಗಬೇಕಾಗಿದೆ.ವಿಧಿ ಎಷ್ಟೊಂದು ಕ್ರೂರಿ ಅನ್ನಿಸಿಬುಡುತ್ತೆ.ಜಿ.ವಿ. ಅತ್ರಿಯಂತೆ ಇದೀಗ ರಾಜು ಹೊತ್ತಲ್ಲದ ಹೊತ್ತಿನಲ್ಲಿ ಅಗಲಿದ್ದಾರೆ.ಏನಾಗಿದೆ ಇವರಿಗೆಲ್ಲ ಅನ್ನಿಸಿಬಿಡುತ್ತೆ.ಹೌದು ನನ್ನಂತ ಭಾವಗೀತೆ ಪ್ರೀಯರಿಗಂತು ರಾಜು ಅನಂತಸ್ವಾಮಿ ಇನ್ನಿಲ್ಲ ಅನ್ನುವುದು ನಂಬಲಾಗದ ಸತ್ಯ. ಸುದ್ದಿಯ ಬೆನ್ನು ಬಿದ್ದಿದ್ದ ನನಗೆ ರಾಜು ಅನಂತಸ್ವಾಮಿ ಹೀಗೆ ಸುದ್ದಿಯಾಗುತ್ತಾರೆ ಅಂದುಕೊಂಡಿರಲಿಲ್ಲ. ಯಾವ ಮೋಹನ ಮುರಳಿ ಕರೆಯಿತೋ..... ದೂರ ತೀರಕೆ ನಿನ್ನನ್ನು..........ಜಿ.ಪಿ.ರಾಜರತ್ನಂ ಅವರ ರತ್ನನ ಪದಗಳನ್ನು ಹಾಡುವ ಮೂಲಕ ಕನ್ನಡದ ಮನೆ ಮನಗಳಲ್ಲಿ ಮಾತಾಗಿದ್ದರು.ಹೀಗೆ ರಾಜು ಬಗ್ಗೆ ಹೇಳುತ್ತ ಹೋದರೆ ಸಾವಿರ ಪುಟಗಳು.

ಒಂದು ನಿಟ್ಟನಲ್ಲಿ ರಾಜು ಬಹುಮುಖ ಪ್ರತಿಭೆಯಾಗಿದ್ದ.ಭಾವಗೀತೆ ಲೋಕದ ಮಾಂತ್ರಿಕನಲ್ಲದೆ...ಚಲನಚಿತ್ರಗಳಿಗೆ ಸಂಗೀತ ನಿರ್ದೇಶನಾಗಿದ್ದ.ಒಳ್ಳೆಯ ನಟನಾಗಿದ್ದ. ಮಂಡ್ಯ ರಮೇಶನ ನಟನ ಶಾಲೆಯಲ್ಲಿ ಸಂಗೀತ ಗುರುವಾಗಿ, ಹಲವು ಚಿತ್ರಗಳಲ್ಲಿ ಹಾಸ್ಯ ನಟರಾಗಿಗೂ ರಾಜು ಅನಂತಸ್ವಾಮಿ ನಟಿಸಿದ್ದ.ಪುನೀತ್ ನ 'ಅಭಿ' ಚಿತ್ರದಲ್ಲಿನ ನಟನೆಗಾಗಿ ಉತ್ತಮ ಹಾಸ್ಯ ನಟ ಪ್ರಶಸ್ತಿ ರಾಜು ಪಾಲಾಗಿತ್ತು.ಜೊತೆಗೆ ನಾಗತಿಹಳ್ಳಿ ನಿರ್ದೇಶನದ 'ಅಮೃತ ಧಾರೆ' ಮತ್ತು ಜಾಕ್ ಪಾಟ್ ಚಿತ್ರಗಳಲ್ಲಿ ನಟನೆ. ಹೂವು,ಅನಂತ ನಮನ,ದೀಪೋತ್ಸವ,ಮುಂತಾದ ಆಲ್ಬಂಗಳನ್ನು ರಾಜು ಅನಂತಸ್ವಾಮಿ ಹೊರ ತರುವಲ್ಲಿ ಪಟ್ಟ ಶ್ರಮ ಆಷ್ಟಿಷ್ಟಲ್ಲ.ಈಗ ನೆನಪು ಮಾತ್ರ.ನಮನ ಮಾತ್ರ ನನ್ನ ಕಡೆಯಿಂದ.

3 comments:

sunaath said...

ನಿಜ ರಾಧಾಕೃಷ್ಣರೆ,
ರಾಜು ಹೋದದ್ದು ಬಹಳ ದುಃಖದ ಸಂಗತಿ.

ಚಿತ್ರಾ ಕರ್ಕೇರಾ said...

ರಾಜು..ಕುರಿತು ಮಾತೆತ್ತಿದಾಗಲೆಲ್ಲಾ ಕಣ್ಣಾಲಿಗಳು ತೇವಗೊಳ್ಳುತ್ತೇವೆ.
ಅದೇ..ಶ್ರೀನಿಧಿ ಕಾಡಿ ಕಾಡಿ ಹೊಸ ಪೋಸ್ಟ್ ಮಾಡಿದ್ರಾ? ಅದ್ಸರಿ ನಾವು ಬಂದು ನಿರಾಶಾರಾಗಿ ವಾಪಾಸಾಗುತ್ತಿದ್ದೇವು ಮಾರಾಯ್ರೆ..
ಬರಲಿ ಹೊಸ ಹೊಸ ಪೋಸ್ಟ್ ಗಳು...ಓದಲು ನಾವಿದ್ದೇವೆ.
-ಚಿತ್ರಾ

Anonymous said...

it very sad radha,,, some time and more time we love the raju,, thanks to the ಹೊತ್ತಲ್ಲದ ಹೊತ್ತಿನಲ್ಲಿ.......... ಅನಂತ ನಮನ