

ಮಂಗಳೂರಿನಿಂದ ಮರಳಿ ೨ ದಿನ ಕಳೆಯಿತು. ಮನದಲ್ಲಿ ಮತ್ತೇ ಆದೇ ಖಾಲಿ ಮೈದಾನ. ನೆನಪಿನಲ್ಲಿ ಏನಿದೆ ಅಂದರೆ ತಂಗಿಯ ಕಣ್ಣಂಚಿನ ಕಣ್ಣೇರು,ತಗ್ಗಿದ ತಾಯಿಯ ಸ್ವರ.ವಿಶ್ವಾಸದ ತಂದೆಯ ಮುಖ. ಜೊತೆಗೆ ಚಡ್ಡಿ ಗೆಳೆಯರಿಬ್ಬರೂ ಕಣ್ಣ ಮುಂದೆ ಪ್ರತೀ ದಿನ ನಿಲ್ಲುತ್ತಾರೆ.
ಮಂಗಳೂರಿಗೆನಾಗಿದೆ? ಮಂಗಳೂರು ಹೇಗಿದೆ ಎಂದು ಕೇಳಿದರೆ ಬದಲಾಗಿದೆ ಎನ್ನುವುದು ಸತ್ಯ. ಹೊಸ ಕಟ್ಟದ ತಲೆ ಏತ್ತಿದೆ. ದಿನ ನಿತ್ಯ ಸಿಗುತ್ತಿದ್ದ ಇನ್ಸ್ ಪೆಕ್ಟ್ ರ್ ೨ ಏನ್ ಕೌಂಟರ್ ಮಾಡಿದ್ದಾರೆ. ನನ್ನೂರಿನ ಬಸ್ಸುಗಳು ಹೊಸ ಬಣ್ಣ ಬಳಿದು ಹೊಸ ಹೊಸ ಹುಡುಗಿಯರನ್ನು ಹತ್ತಿಸಿಕೊಂಡು ಮಂಗಳೂರು, ಬಿ.ಸಿ. ರೋಡ್ ಎಂದು ಹಾರನ್ ಹೊಡೆಯುತ್ತ ಹೋಗಿ ಬರುತ್ತಿದೆ. ಅದರೆ ಜನ ಮಾತ್ರ ಆದೇ ಪೇಪರ್ ಓದುತ್ತಾರೆ ಆದರೆ ಟಿ.ವಿ. ಮಾತ್ರ ಬದಲಾಯಿಸಿದ್ದಾರೆ. TV9 ನ ಕೋಟ್ ANCHOR ಗಳ ಮಾತಿಗೆ ಬೆರಗಾಗಿದ್ದಾರೆ. ಹುಡುಗಿಯರೇ ನಡೆಸಿಕೊಡುವ ಕ್ರೈಂ ಸುದ್ದಿಯ ನಡುವೆ ಮುಳುಗಿ ಹೋಗಿದ್ದಾರೆ.ಮತ್ತೇ ಅದೇ ಪ್ರೀತಿಯ ಧಾರವಾಹಿ ಬಂದರೆ ರಿಮೋಟ್ ಕೈಗೆತ್ತುಕೊಳ್ಳುತ್ತಾರೆ.
ಮನೆ ಪಕ್ಕದ ಜಾಗವೆಲ್ಲ infosys ತನ್ನ ವಶಕ್ಕೆ ತೆಗೆದುಕೊಳ್ಳಲು ಸಿದ್ದತೆ ನಡೆಸಿದೆ. ಮನೆ ಪಕ್ಕದ ಬೋಳು ಗುಡ್ಡದಲ್ಲಿ infosys ತನ್ನ ವಶದ ೫೦೦ ಎಕರೆ ಜಾಗದಲ್ಲಿ ಕಾಮಗಾರಿ ಪ್ರಾರಂಭಿಸಿದೆ. ಬೆಳಕು ಕಾಣದ ಗುಡ್ಡದಲ್ಲಿ ಬೆಳುಕು ನೀಡಿದ ಚರ್ಚ್ ನ ಬೆಳಕನ್ನು ನುಂಗಿ ನೀರು ಕುಡಿದಂತೆ infosys ತನ್ನ ಬೆಳಕು ಬೀರುತ್ತಿದೆ. ಕೆಲ ವರ್ಷ ಕಳೆದರೆ ನಾನು ಎತ್ತರವಾದ ನೆಲದಲ್ಲಿ ಅಂದರೆ ನಮ್ಮ ಮನೆಯು ಸೇರಿದಂತೆ - ಜಾಗದಲ್ಲಿ infosys ಬೆಳೆದರೆ ಅಚ್ಚರಿಯಿಲ್ಲ.
ಮತ್ತೆ ಮಂಗಳೂರಿನ ಬಗ್ಗೆ, ನನ್ನೂರಿನ ಬರೆಯಿತ್ತೇನೆ. ಅಲ್ಲಿಯವರೆಗೆ.
ಕಿಕ್ ಗಾಗಿ ಮಾತ್ರ.
ಮದುವೆಯ ಹುಡುಗಿಗೆಗೆ ಕಚೇರಿಯಲ್ಲಿ ಮದುವೆಗೂ ರಜಾ ಕೊಡದಿದ್ದರೆ.?
ಚಿಂತೆ ಯಾಕೆ Moment ರಿಜಿಸ್ಟ್ ರ್ ನಲ್ಲಿ ಬರೆದು ಬಿಟ್ಟು ತಾಳಿ ಕಟ್ಟಿಸಿಕೊಳ್ಳಲು ಹೋದರಾಯಿತು.
No comments:
Post a Comment