
ತುಟಿಗೆ ತುಟಿ ತಾಗಿಸಿ
ರಸ ಹೀರಿದ ಕ್ಷಣ
ಕಾಮವೋ ಪ್ರೇಮವೋ ಗೊತ್ತಿಲ್ಲ.
ಆವಾಗ ನಾನು ಕಣ್ಣು ಮುಚ್ಚಿದೆ.
ಉಪ್ಪರಿಗೆಯ ಮೇಲೆ ಬೆಳದಿಂಗಳಿತ್ತು
ಅಂಗಳದಲ್ಲಿ ಮಲ್ಲಿಗೆ ಸೇವಂತಿ ಪರಿಮಳ
ಹರಡಿಕೊಳ್ಳುತ್ತಿತ್ತು.
ಮನೆಯ ಹೆಣ್ಣು ಬೆಕ್ಕು ಇನಿಯನ ಭೇಟಿಯಲ್ಲಿತ್ತು.
ನಾನು ನಾನಾಗಿರಲ್ಲಿಲ್ಲ.
ಒಳಗಡೆ,
ಒಲೆಯಲ್ಲಿ ತಾಯಿ ಇಟ್ಟ ಹಾಲು ಉಕ್ಕುತಿತ್ತು.
ಬೆಂಕಿ ಧಗ ಧಗ ಅನ್ನುವಂತೆ......
ಹೊರಗಡೆ,
ಗುಲಾಬಿ ಹೂವಿನ ಎಸಳಿನಿಂದ
ಇಬ್ಬನಿ ಜಾರಿತ್ತು.
ನಡು ರಾತ್ರಿ ದಿವ್ಯ ಮೌನ
ಎಲ್ಲವೂ ಮುಗಿದಿತ್ತು.
ಮಲ್ಲಿಗೆ, ಸೇವಂತಿ, ಗುಲಾಬಿ ಅರಳಿತ್ತು.
ಒಲೆಯ ಬೆಂಕಿ ಇದ್ದಿಲಾಗಿತ್ತು.
5 comments:
ಕವನಗಳಲ್ಲಿ ಕೊನೆಯ ಕೆಲ ಸಾಲುಗಳು ಅತೀ ಮುಖ್ಯ. ನಿಮ್ಮ ಕವನದ ಕೊನೆಯ ಸಾಲುಗಳಂತೂ ತುಂಬಾ ಖುಷಿ ಕೊಟ್ಟವು.
ಆಗ ತಾನೆ ಗುಡ್ಡದ ಹಸಿರು ಹುಲ್ಲು ಮೇದು ಬಂದ ಹಸುವಿನ ಒಂದು ಲೋಟ ಫ್ರೆಶ್ ನೊರೆ ಹಾಲು ಕುಡಿದ ಹಾಗೆ ಆಯ್ತು!
ಒಳ್ಳೆಯ ಬರವಣಿಗೆ ರಾಧಾ.
thanks
ಪರವಾಗಿಲ್ವೇ... ಸಿಕ್ಕಾಪಟ್ಟೆ ರೊಮ್ಯಾ೦ಟಿಕ್ ..!!
ನಿಜವಾಗ್ಲು ಕಲ್ಪನೆ, ರಚನೆ ಚೆನ್ನಾಗಿದೆ...
ಆದ್ರೆ, ಕವನಗಳು - ಕವಿಗಳು ಎಲ್ಲೇ ಹೋದ್ರೂ ಇಲ್ಲಿ ಬ೦ದೇ ಬರ್ತವೆ... ಸುತ್ತು ಹೊಡೆದೇ ಹೊಡೀತವೆ...ಅಲ್ವಾ? that'z really interesting !!!
ರಾಧಾಕೃಷ್ಣರೇ,
ಒಳ್ಳೇ ಕವನ ಮಾರಾಯರೆ! ಇಷ್ಟು ದಿನ ತಮ್ಮ ಬ್ಲಾಗು ನೋಡೇ ಇರಲಿಲ್ಲ!!
thanks to Shree and shrrenidhi
i am new for blog and for poem
Post a Comment