Friday, January 12, 2007

ಸಿ.ಜಿ.ಕೆ ನೆನಪಿನಲ್ಲಿ ................



ನಿನ್ನೆ ಸಹೋದ್ಯೋಗಿ ಮಿತ್ರ ಪ್ರಸಾದ್ ಜೊತೆಗೆ ನಾಟಕ ನೋಡಲು ಹೋಗಿದ್ದೆ. ಮಂಗಳೂರಿನಿಂದ ಕನಸಿನ ಮೊಟೆ ಹೊತ್ತು ಬೆಂಗಳೊರಿಗೆ ಬಂದಾಗ ನಾಟಕ, ಸೆಮಿನಾರ್, ಪುಸ್ತಕ ಪ್ರದರ್ಶನ,ಪುಸ್ತಕ ಬಿಡುಗಡೆ ನನಗೆ ಇನ್ನೂ ಹತ್ತಿರವಾಯಿತು ಅಂದುಕೊಂಡಿದ್ದೆ. ಆದರೆ ಆ ನಿರೀಕ್ಷೆ
ಸುಳ್ಳಾಗಿತ್ತು. ಮಂಗಳೂರಿನಲ್ಲಿದ್ದಾಗ ಸಂಪರ್ಕದಲ್ಲಿದ್ದ ಆನ್ವೇಷಣಿ, ದೇಶಕಾಲ, ಸಂಚಯ ದ ಬಗೆಗಿನ ನಿರೀಕ್ಷೆಗಳು ಕೂಡಾ ಸುಳ್ಳಾಗಿತ್ತು.
ಆದರೆ ನಿನ್ನೆ ಸಿ.ಜಿ.ಕೆ ನೆನಪಿಗಾಗಿ ರಂಗನಿರಂತರ ತಂಡ ರವೀಂದ್ರ ಕಲಾಕ್ಷೇತ್ರದಲ್ಲಿ ತೇಜಸ್ವಿ ಅವರ 'ಜುಗಾರಿ ಕ್ರಾಸ್'ನಾಟಕ ಇದೆ ಎಂದು ಪ್ರಸಾದ್ ಹೇಳಿದಾಗ ನಾನು ಅವನ ಜೊತೆ ಹೊರಟು ನಿಂತೆ. ಸಿಜಿಕೆ ಅಂದರೆ ನನಗೆ ನೆನಪಿರುವುದು ಅವರು ಮಂಗಳೂರಿಗೆ ಅವರದೇ ಪುಸ್ತಕದ ವಿಚಾರ ಸಂಕಿರಣಕ್ಕೆ ಬಂದ ದಿನ. ಸಂತ ಅಲೋಶೀಯಸ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮ ಇನ್ನೂ ನೆನಪಿದೆ. ಅದಕ್ಕೆ ಕಾರಣವೂ ಇದೆ. ಕಾರ್ಯಕ್ರಮಕ್ಕೆ ಕಾರ್ಯ ನಿಮಿತ್ತ ಹಾಜರಾದದ್ದು ಇದಕ್ಕೆ ಮುಖ್ಯ ಕಾರಣ.
ನಿನ್ನೆಯ ನಾಟಕ ಚೆನ್ನಾಗಿತ್ತು. ಹೊಸ ಮುಖಗಳೇ ಇದ್ದ ಕಾರಣಕ್ಕೆ ಟೀಕೆ ಸಲ್ಲದ್ದು. ಕಾದಂಬರಿಯೊಂದನ್ನು ನಾಟಕಕ್ಕೆ ಇಳಿಸಿದ ನಟರಾಜ ಹೊನ್ನವಳ್ಳಿ ಅವರಿಗೆ THANKS ಖಂಡಿತಾ...........
ಕೆಲವೊಂದು ಪ್ರಥಮ ದೃಶ್ಯಗಳು ಬೇಸರ ಉಂಟು ಮಾಡಿದರೂ.. ಬಳಿಕ ಪರವಾಗಿಲ್ಲ.....
ಕ್ರಾಸ್,ಕ್ರಾಸ್,ಕ್ರಾಸ್,ಕ್ರಾಸ್....... ಜುಗಾರಿ ಕ್ರಾಸ್ ಹಾಡು ಇನ್ನೂ ಮನಸ್ಸಿನಲ್ಲಿದೆ.
ಒಟ್ಟಾರೆಯಾಗಿ ನಾಟಕ ಚೆನ್ನಾಗಿತ್ತು.ಮಲೆನಾಡು ಸಂಪದ್ ಭರಿತವಾಗಿದೆ ಎನ್ನುವ ಕಾದಂಬರಿ ಅಂಶವನ್ನು ನಾಟಕ ಪ್ರೇಕ್ಷಕರಿಗೆ ಮನದಟ್ಟು ಮಾಡಿದೆ.ಏಲಕ್ಕಿ ವ್ಯಾಪಾರದ ಸಾಬಿ, ಕಂಡಕ್ಟರ್ ಜೊತೆಗೆ ಕಾದಂಬರಿಯಲ್ಲಿ ಪ್ರಸ್ತಾಪವಾಗದೇ ನಾಟಕದಲ್ಲಿ ಪ್ರವೇಶವಾಗುವ ಪಾತ್ರಗಳು ನಾಟಕಕ್ಕೆ ಒಂದಿಷ್ಟು ಕಳೆ ತಂದಿದೆ. ರಂಗವಿನ್ಯಾಸ ಕೂಡಾ ನಾಟಕ ಕಳೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ನಾನು ಮತ್ತೊಮ್ಮೆ ಕಾದಂಬರಿ ಓದಿದರೆ ಈ ಬಗ್ಗೆ ಇನ್ನಷ್ಟು ಬರೆಯಬಲ್ಲೆ.

ಕೊನೆಗೊಂದು ಕಿರಿಕ್!
ನಮ್ಮ ಊರಿನಲ್ಲೂ ಹಳೆಯ ಪರದೆ, ಸಿಂಗಲ್ ಸೆಟ್ಟ್ ನಾಟಕದ ಜಾಗದಲ್ಲಿ ಇಂತಹ ನಾಟಕಗಳನ್ನು ಪ್ರದರ್ಶಿದರೆ
ಹೇಗಿರಬಹುದು ?
* ಜನ ಆಯಗ್ ಮರ್ಲ್ ಅಂತಾರೆ.....( ಅವನಿಗೆ ಹುಚ್ಚು)

No comments: