Tuesday, June 10, 2008

ರೈತ -- ರಕ್ತ ತರ್ಪಣ

ನಾನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ದಿನಗಳು ರೈತ ದೇಶದ ಬೆನ್ನೆಲುಬು ಎಂದು ನಮ್ಮ ಟೀಚರ್ ಕಂಠ ಪಾಠ ಮಾಡಿಸುತ್ತಿದ್ದರೂ,ಆದರೆ ಅಮೇಲಿನ ದಿನಗಳಲ್ಲಿ ಆರಿವಾಗತೊಡಗಿತು....ಬೆನ್ನೆಲುಬನ್ನು ಮುರಿಯುವ ಕೆಲಸ ಸತತವಾಗಿ ನಡೆಯುತ್ತಿದೆ ಎಂದು.ಹಾವೇರಿಯಲ್ಲೂ ನಡೆದದ್ದು ಇದೇ.ರಾಜ್ಯ ಪ್ರತೀ ಬಾರಿಯೂ ಒಂದಲ್ಲ ಒಂದು ಸಮಸ್ಯೆ ಸಿಲುಕಿ ತತ್ತರಿಸುತ್ತಿದೆ. ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮಂದಿಗೆ ಇದರ ಅರಿವು ಇರಬೇಕಾಗಿತ್ತು. ಆದರೆ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಭಣಗೊಳ್ಳುತ್ತಿದ್ರೂ ಇವರಿಗೆ ಚಿಂತೆ ಇದದ್ದು ಅಧಿಕಾರಿಗಳ ವರ್ಗಾವಣೆ ಬಗ್ಗೆ. ಇದರ ಪ್ರತಿಫಲ ಗೊಬ್ಬರ-ಬೀಜಕ್ಕಾಗಿ ರೈತನ ರಕ್ತ ತರ್ಪಣ.

ರಾಜ್ಯದಲ್ಲಿ ರೈತನ ಸಮಸ್ಯೆ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಪ್ರಾರಂಭಗೊಂಡಿತ್ತು. ಬೀಜ, ಗೊಬ್ಬರಕ್ಕಾಗಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು.ಆದರೆ ರಾಜಧಾನಿಯಲ್ಲಿ ಕೇವಲ ಭರವಸೆಯ ಮಹಾನದಿ ಹರಿದಿತ್ತು ಬಿಟ್ಟರೆ, ಆಡಳಿತದ ಚುಕ್ಕಾಣಿ ಹಿಡಿದ ಮಂದಿ ಈ ಭಾಗಕ್ಕೆ ಭೇಟಿ ನೀಡುವ ಕೆಲಸವನ್ನು ಮಾಡಿರಲಿಲ್ಲ. ಈಗ ಎಲ್ಲವೂ ಕೈ ಮೀರಿದೆ. ರಾಜ್ಯದಲ್ಲಿ ಹೋರಾಟ ಕೆಂಪಾಗಿದೆ. ಹಸಿರು ಶಾಲಿನ ಮೇಲಿನ ಕೆಂಪು ಕಲೆಗಳಾಗಿದೆ.

ಮಾಧ್ಯಮಗಳು ಸಮಸ್ಯೆಯ ಸ್ವರೂಪವನ್ನು ಗಂಟೆಗಟ್ಟಲೆ ತೋರಿಸಿದವು, ಪುಟಗಟ್ಟಲೆ ಬರೆದವು ಆದರೂ ರೈತರ ಆಕ್ರೋಶವನ್ನು ಶಮನಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ. ಇದೀಗ ರಾಜಭವನದತ್ತ ವಿಧಾನಸೌಧ ಕೈತೋರಿಸುತ್ತಿದೆ. ತಪ್ಪುಗಳು ನಡೆದದ್ದು ಇಲ್ಲೆ ಎನ್ನುವುದು ಇದರ ಒಳಾರ್ಥ. ಆದರೆ ರಾಜ್ಯಪಾಲರಿಗೆ ಕನ್ನಡದ ನೆಲದ ಸಮಸ್ಯೆಯ ಅರಿವಿಲ್ಲ ಸರಿ, ಅಧಿಕಾರಿಗಳು ಏನು ಮಾಡುತ್ತಿದ್ದರು. ಇವರ ತಪ್ಪುಗಳಿಗೆ ಶಿಕ್ಷೆಯೇನು? ಸರಿ ಬಿಟ್ಟು ಬಿಡಿ. ಸಮಸ್ಯೆ ತೀವ್ರ ಸ್ವರೂಪ ಪಡೆದು, ಪೋಲಿಸರು ಪರಿಸ್ಥಿತಿ ನಿಯಂತ್ರಣಕ್ಕೆ ಒದ್ದಾಡುತ್ತಿದ್ದರೆ ಮಾನ್ಯ ಗೃಹ ಸಚಿವರು ತಮ್ಮ ತವರೂರಿನಲ್ಲಿ ಮಾಡುತ್ತಿದ್ದದರೂ ಏನು?

ಈಗ ರೈತರ ಹೆಸರಿನಲ್ಲಿ ರಾಜಕೀಯ ಆರೋಪ ಪ್ರತ್ಯಾರೋಪಗಳು ಪ್ರಾರಂಭಗೊಂಡಿದೆ. ಮುಂದೇನು ಅನ್ನುವ ಪ್ರಶ್ನೆಗೆ ಉತ್ತರವಿಲ್ಲ.

ಈ ನಡುವೆ ಬಹುಮುಖ್ಯ ಪ್ರಶ್ನೆಯೊಂದು ಎಲ್ಲರನ್ನೂ ಕಾಡುತ್ತಿದೆ. ಹಾವೇರಿಯಲ್ಲಿ ಗೋಲಿಬಾರ್ ಅಗತ್ಯವಿತ್ತೆ ?

6 comments:

ಭಾವನೆಗಳಿಗೆ ಜೀವ ತುಂಬುತ್ತ... said...

ತಪ್ಪು ಎಲ್ಲರಿಂದಲೂ ಆಗುತ್ತದೆ... that is what happened at there..

ತೇಜಸ್ವಿನಿ ಹೆಗಡೆ said...

ನಿಜಕ್ಕೂ ಖಂಡನೀಯ ಹಾಗೂ ಆಘಾತಕಾರಿ ಘಟನೆ.

damodara dondole said...

thappu sahaja paristhithigalu bigadayisidaga sarkaravannu dooruvudu mamuuli. raitha rajya deshada bennelubu rajyapalara jothegidda adhikarigalu yenu madade iddaga yaru mathadalilla. sari rajyada bagge kalaji iruva congai thannade kendra sarkarakke paristhithi thilisi bekada karya madbodittu. adare adhikara kaiyalli illa adrinda thanage bekagilla. BJP sacha anthalla adhikarakke bandha kudle yedurada samasye ..munde sariyagabahudu kadu noduvude namma mundiruva upayaa. uthhama baraha superb thumba ista aithu.....Damu Dondole

Shree said...

ಇಷ್ಟು ಸರಳವಾಗಿ ವಿಷ್ಲೇಶಿಸಬಹುದಾದ ವಿಷಯವಾ ಇದು? ರೈತರ ಮೇಲೆ ಗೋಲಿಬಾರ್ ಖಂಡಿತವಾಗಿ ತಪ್ಪು. ಆದರೆ, ವಿವೇಚನೆಯಿಲ್ಲದೆ ಸಾರ್ವಜನಿಕರದೇ ಸೊತ್ತಾದ ಬಸ್ಸುಗಳನ್ನು ಸುಟ್ಟು ಹಾಕುವುದು ಸರಿಯೇ? ಟ್ರಾಫಿಕ್ ಸಮಸ್ಯೆಗಳು ಎದುರಾದಾಗ ಮತ್ತೆ ಸರಕಾರಕ್ಕೆ ಬೈಯುವ ನಾವು, ೫ ಬಸ್ಸು ಸುಟ್ಟುದರಿಂದ ಎಷ್ಟು ನಷ್ಟವಾಯ್ತು ಸರಕಾರಕ್ಕೆ ಅಂತ ಕ್ಷಣವಾದರೂ ಯೋಚಿಸುತ್ತೇವಾ? ಹಾಗೆಯೇ, ಹಾವೇರಿಯಲ್ಲಿ ಗೋಲಿಬಾರ್ ಆದ ಹಿಂದಿನ ದಿನ ಹುಬ್ಬಳ್ಳಿಯಲ್ಲಿ ಆದ ಗಲಾಟೆಯನ್ನು ಯಾವ ಮಾಧ್ಯಮದಲ್ಲಿ ಯಾವ ರೀತಿ ಬಿಂಬಿಸಿದ್ದರು ಅಂತ ಯಾರಾದರೂ ನೋಡಿದ್ದೀರಾ? ಅರ್ಧ ಗಲಾಟೆಗಳು ಹುಟ್ಟಿಕೊಳ್ಳುವುದು ಮಾಧ್ಯಮಗಳಿಂದಲೇ ಅಂದರೆ ಒಪ್ಪುತ್ತೀರಾ? ರೈತರು ಹೋರಾಡಿರುವುದು ನಿಜವೇ. ಆದರೆ ರೈತರ ಹೆಸರಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಕೂಡ ತಮ್ಮ ಕೊಡುಗೆ ನೀಡಿಲ್ಲ ಅಂತ ಹೇಳ್ತೀರಾ? ಹಾಗೆಯೇ, ಕನ್ನಡದಲ್ಲಿ ಇಷ್ಟು ಪತ್ರಿಕೆಗಳಿವೆ, ಇಷ್ಟು ಟೆಲಿವಿಶನ್ ಚಾನೆಲ್-ಗಳಿವೆ, ರಸಗೊಬ್ಬರ ಕೊರತೆ ಯಾಕೆ ಬಂದಿದೆ ಈ ಸಾರಿ ಅನ್ನುವುದಕ್ಕೆ ಸರಿಯಾದ ಕಾರಣಗಳನ್ನು ಯಾರಾದರೂ ಕೊಡಬೇಕಾದ ರೀತಿಯಲ್ಲಿ ಕೊಟ್ಟಿದ್ದಾರೆಯೇ? ಇದು ಮಾಧ್ಯಮದ ಜವಾದ್ಬಾರಿ ಅಲ್ಲ ಎನ್ನುತ್ತೀರಾ? ಮಾಧ್ಯಮ ಕೆಟ್ಟಿದೆ ಅಂತ ಹೇಳಿಕೊಂಡು ತಿರುಗುವ ನಾವು ನಮ್ಮ ಪರಿಧಿಯೊಳಗೆ ಸಾಧ್ಯವಿರುವುದನ್ನು ಯಾಕೆ ಮಾಡುವುದಿಲ್ಲ?
ನನ್ನ ವಾದಗಳೆಲ್ಲ ಸರಿಯೆಂದು ನಾನೂ ನಂಬುತ್ತಿಲ್ಲ. ಹೊರನೋಟಕ್ಕೆ ನಮಗೆ ಸಾವಿರ ತಪ್ಪುಗಳು, ಸರಿಗಳು ಕಾಣಬಹುದು. ಆದರೆ ಒಳಹೋದಾಗಲಷ್ಟೇ ಸತ್ಯದ ಬೇರೆಬೇರೆ ಮುಖ ಗೊತ್ತಾಗುತ್ತದೆ. ಮತ್ತು ನಮಗೆ ಬೇಕಾದ ’ಸತ್ಯ’ಗಳನ್ನು ನಾವು ನಂಬುತ್ತೇವೆ!

sunaath said...

ಮಂತ್ರಿಗಳು ರಾಜ್ಯಪಾಲರತ್ತ ಹಾಗು ಆಡಳಿತ ಯಂತ್ರದತ್ತ ಬೊಟ್ಟು ಮಾಡುತ್ತಿದ್ದಾರೆ. ಅಧಿಕಾರಿಗಳು ಎಂತಹ restrictionsಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ ಎನ್ನುವದು ಮಂತ್ರಿಗಳಿಗೆ ಗೊತ್ತಿಲ್ಲವೇನು?

ದೀಪಸ್ಮಿತಾ said...

ಇಷ್ಟು ದಿನ ಇಲ್ಲದ್ದು, ಈ ಸರಕಾರ ಬಂದ ಕೂಡಲೆ ಉದ್ಭವಿಸಿದ್ದು ಅನುಮಾನಾಸ್ಪದ. ಗೋಲಿಬಾರ್ ನಡೆದಿದ್ದು ತಪ್ಪು, ಆದರೆ, ತಾಳ್ಮೆಗೆಟ್ಟು ಬಸ್ಸು, ಅಂಗಡಿಗೆ ಬೆಂಕಿ ಹಾಕುವುದು, ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವುದು ಎಷ್ಟು ಸರಿ?

ನಾನೊಬ್ಬ ಹೊಸ ಬ್ಲಾಗಿಗ. ನನ್ನ ಬ್ಲಾಗ್ http://www.ini-dani.blogspot.com/. ದಯವಿಟ್ಟು ಓದಿ ವಿಮರ್ಶಿಸಿ.