Thursday, August 7, 2008

ಅಶೋಕನ ಸಾರಿಗೆ ಪುರಾಣ


ಸಾರಿಗೆ ಸಚಿವ ಆರ್.ಅಶೋಕ್ ವೋಲ್ವೊ ಬಸ್ ನಲ್ಲಿ ಪ್ರಯಾಣ ಮಾಡಿದರಂತೆ.ಇದು ಇತ್ತೀಚೆಗೆ ಬಂದ ಸುದ್ದಿ.ಇಷ್ಟಕ್ಕೆ ಈ ಸುದ್ದಿ ಸುಮ್ಮನಿರಬೇಕೆ. ಕಾವೇರಿ ಹರಿದಂತೆ ಮುಂದುವರಿದಿದೆ.ಬಸ್ ನಲ್ಲಿ ಟಿಕೇಟ್ ಪಡೆದರಂತೆ, ರಸ್ತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರಂತೆ. ಹೀಗೆ ಇದು ಮುಂದುವರಿಯುತ್ತದೆ.

ಸಾರಿಗೆ ಸಚಿವರು ದೆಹಲಿಗೆ ಪ್ರಯಾಣಿಸಬೇಕಾಗಿತ್ತು.ಇದೇ ಸುದಿನ - ಬಿಟ್ಟಿ ಪ್ರಚಾರಕ್ಕೆ ಇನ್ನೇನು ಬೇಕು.ಮಾಧ್ಯಮ ಪ್ರತಿನಿಧಿಗಳ ಮೊಬೈಲ್ ರಿಂಗಣಿಸಿದೆ. ಕರೆಯ ಹಿಂದಿನ ರಹಸ್ಯದ ಬಗ್ಗೆ ಒಂದಿಷ್ಟು ಯೋಚಿಸಿದ್ದರೆ.ಸಾಯಲಿ ಬಿಡಿ ಬಿಎಂಟಿಸಿನಲ್ಲಿ ತಮ್ಮ ಪ್ರಯಾಣ ಯಾವಾಗ ಎಂದು ಪ್ರಶ್ನಿಸಿದ್ದರೆ ಅಶೋಕ ಸಾರಿಗೆಯ ಟಯರ್ ಪಂಚರ್ ಆಗುತ್ತಿತ್ತು.ಹಾಗಾಗಲಿಲ್ಲ. ಅಶೋಕನು ಒಂದಿಷ್ಟು ಯೋಚಿಸಬೇಕಾಗಿತ್ತು ತಾನೇ. ವೋಲ್ವೊ ಬಸ್ ನಲ್ಲಿ ಪ್ರಯಾಣಿಸುವುದು ದೊಡ್ಡ ವಿಷಯವಲ್ಲ ಎಂದು. ಬೆಂಗಳೂರಿನ ಸಾರಿಗೆ ವ್ಯವಸ್ಥೆ ಸಾವಿರ ಸಮಸ್ಯೆಗಳನ್ನು ಎದುರಿಸುತ್ತಿದೆ.ಬಿಎಂಟಿಸಿಯ ನೌಕರರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಮಾರ್ಗ ಮಧ್ಯದಲ್ಲಿ ಚೆಕಿಂಗ್ ನೆಪದಲ್ಲಿ ಬಸ್ ಹತ್ತುವ ಹಿರಿಯ ಅಧಿಕಾರಿಗಳು ಮಾಮೊಲಿಗಾಗಿ ಚಾಲಕ, ನಿರ್ವಾಹಕನ ಪ್ರಾಣ ಹಿಂಡುತ್ತಿದ್ದಾರೆ.ಕೊಡದಿದ್ದರೆ ಅಜಾಗರುಕತೆ ಚಾಲನೆ,ಟಿಕೇಟ್ ನೀಡಿಕೆಯಲ್ಲಿ ಲೋಪದ ನೆವಕ್ಕೆ ಬಲಿಯಾಗಬೇಕು.ಇವೆಲ್ಲಾ ಸಾರಿಗೆ ಸಚಿವರ ಕಣ್ಣಿಗೆ ಬಿದ್ದಿಲ್ಲ. ಇದು ಕಾಣುವುದೂ ಇಲ್ಲ. ಯಾಕೆಂದರೆ ವೋಲ್ವೊ ತಾನೇ ಇಲಾಖೆಯ ಮಾನ ಉಳಿಸುತ್ತಿರುವುದು.?

ಸಾರಿಗೆ ಸಚಿವರಿಗೆ ಹೇಳಿ ಸ್ವಾಮಿ ರಾತ್ರಿ ೧೨ ಗಂಟೆಯ ಬಳಿಕ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಬರಲು,ನೋಡಲಿ ಅಲ್ಲಿ ನೌಕರರು ಪಡುತ್ತಿರುವ ಪಾಡು.ಬಸ್ ನಿಲ್ದಾಣದ ಮೇಲೆ ರಾಜಾರೋಷವಾಗಿ ವ್ಯಾಪಾರ ನಡೆಯುತ್ತಿದೆಯಲ್ಲ. ಕಡಿವಾಣ ಸಾಧ್ಯವಿಲ್ಲವೆ.ಇದೆ ಆದರೆ ಇಲಾಖೆಯ ಅಧಿಕಾರಿಗಳಿಗೆ ಬರುವ ಆದಾಯಕ್ಕೆ ಕತ್ತರಿ ಬೀಳುತ್ತದಲ್ಲ.ಇವೆಲ್ಲಾ ಅಶೋಕನ ಕಣ್ಣಿಗೆ ಕಾಣಿಸುತ್ತಿಲ್ಲ.ಇಲ್ಲಿಗೆ ಭೇಟಿ ನೀಡಿದಾಗ ಮಾಧ್ಯಮ ಪ್ರತಿನಿಧಿಗಳನ್ನು ಕರೆಯಿರಿ.ಜನ ನಿಮ್ಮನ್ನು ಮೆಚ್ಚುತ್ತಾರೆ.

ಸಾರಿಗೆ ಸಚಿವರೆ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸಿ ಜನ ಸಾಮಾನ್ಯನ ಪಾಡು ನಿಮಗೂ ಅರ್ಥವಾಗುತ್ತದೆ.ಅದು ಬಿಟ್ಟು ಆಗ್ಗದ ಪ್ರಚಾರ ಬಿಟ್ಟು ಬಿಡಿ. ಈ ಹಿಂದೆ ರಮಾನಾಥ ರೈ ಬಸ್ ಹತ್ತಿದಾಗ ಬಂದ ಟೀಕೆಯನ್ನು ನೆನಪಿಸಿಕೊಳ್ಳಿ.ನೆನಪಾಗದಿದ್ದರೆ ಹಳೆ ಸುದ್ದಿ ಪತ್ರಿಕೆಯನ್ನು ತಿರುವು ಹಾಕಿ.ಸಾಕಷ್ಟು ಕೆಲಸಗಳು ಬಾಕಿ ಇದೆ. ವೋಲ್ವೊ ಕನವರಿಕೆಯಿಂದ ಹೊರ ಬನ್ನಿ ಸಾರ್............

7 comments:

Anonymous said...

i think you add more info about it.

ಶ್ರೀನಿಧಿ.ಡಿ.ಎಸ್ said...

:)complete bechcha

Anonymous said...

Media craze is not new to Ahhok. as you said he must stop such silly popultity exercise and start curb corruption. It will be an achievemnet if he does not become the part the corrupt system.

Shree said...

ರಾಧಾ, ನಿಮ್ಮ ಬ್ಲಾಗ್ ಓದಲು ತೊಂದರೆಯಾಗುತ್ತಿದೆ, ಬಣ್ಣಗಳ ಆಯ್ಕೆ ಕಣ್ಣಿಗೆ ತೊಂದರೆ ನೀಡುತ್ತಿದೆ, ಬದಲಾಯಿಸಿದರೆ ಉತ್ತಮ.

ಅಶೋಕ್ ಅವರು ಡೆಲ್ಲಿಗೆ ಹೋಗಿದ್ದು ಇದೇ ವಿಚಾರಕ್ಕೆ ತಾನೇ. ಮುಂದೆ 200 ವೋಲ್ವೋ ಖರೀದಿಸಲಿಕ್ಕೆ ಮಾತ್ರ ಅನುಮತಿ ಇದೆ, ನಂತರ ಸ್ವೀಡಿಷ್ ಮೂಲದ ವೋಲ್ವೋಕ್ಕೆ ಟಾಟಾ ಹೇಳಿ ಟಾಟಾರವರ ಅದೇ ರೀತಿಯ ಸ್ವದೇಶಿ ಗಾಡಿ ಖರೀದಿಸುತ್ತಾರಂತೆ, ಹಾಗೆ ಯಾವುದೋ ನ್ಯೂಸ್ ಐಟಮ್ ಓದಿದ ನೆನಪು. ಅಲ್ಲೂ ಹೊಸ ಟಾಟಾ ವಾಹನದಲ್ಲಿ ಅವರು ಪ್ರಯಾಣಿಸಿದ್ದಾರೆ ಅಂತ ಕೇಳಿದೆ.

Anonymous said...

ಮಂತ್ರಿ ಮಹಾಶಯರೆಲ್ಲ ಬೀದಿಗಿಳಿದು ನಡೆದು ಜನರ ಕಷ್ಟ ಕೇಳುವುದೇ ಆದರೆ ದೇಶ ಅರ್ಧ ಉದ್ದಾರ ಆದಂತೆ! ಏನಂತೀರಾ?

-ಜಿತೇಂದ್ರ

ಭಾವನೆಗಳಿಗೆ ಜೀವ ತುಂಬುತ್ತ... said...

chennagide... avara mele yakishtu beccha...

sunaath said...

ರಾಜಕಾರಣಿಗಳ hypocrisyಯನ್ನು ಚೆನ್ನಾಗಿ ಹೊರಗೆಳದಿದ್ದೀರಿ. ಅದರಂತೆಯೇ, ಇವರಿಂದಾಗಿ ಸರಕಾರಿ ನೌಕರರು ಪಡುತ್ತಿರುವ ಸಂಕಟವನ್ನು ಸಹ.