ಬರೆಯಲು ಮತ್ಕಾಕೋ ಒತ್ತಡ ಆದರೂ ಕೆಲ ದಿನಗಳ ಹಿಂದೆ ಕನ್ನಡ ರಾಮಾಯಣ ಮತ್ತು ನಿನ್ನೆ ಧರೆಯೊಳಗನ ರಾಜಕೀಯ ನಾಟಕಗಳನ್ನು ನೋಡಿದೆ. ಎರಡೂ ನಾಟಕಗಳು ಚೆನ್ನಾಗಿತ್ತು. ರಾಮಾಯಣ ದ ಬಗ್ಗೆ ಶ್ರೀದೇವಿಯವರ ೧೦೦ ಕನಸು ಬ್ಲಾಗಿನಲ್ಲಿ ಮಾಹಿತಿಗಳು ಸಿಗಬಹುದು ಜೊತೆಗೆ ಧರೆಯೊಳಗಿನ ರಾಜಕೀಯದ ಬಗ್ಗೆ ಕೂಡಾ.
೨ ನಾಟಕಗಳನ್ನು ಒಟ್ಟಿಗೆ ಗಮನಿಸಿದರೆ ಅದಕ್ಕೆ ಅವುಗಳದ್ದೇ ಆದ ತೂಕವಿದೆ. ರಾಮಾಯಣ, ಆಭಿನಯ, ಮಾತುಗಳ ಕಾರಣಕ್ಕೆ ನಮ್ಮನ್ನು ಹೊಸ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಹಾಡುಗಳು ಅಷ್ಟೇ. ಧ. ರಾ ಅಭಿನಯದ ಕಾರಣಕ್ಕೆ ಸೋಲುತ್ತದೆ. ಧಾರಾವಾಹಿ ನಟರು ಕಲಾಕ್ಷೇತ್ರದ ಛಾಪನ್ನು ಉಳಿಸಿಕೊಂಡಿಲ್ಲ ಅನಿಸುತ್ತದೆ.
ನಿಮಗೊಂದು ಆಹ್ವಾನ
ರಂಗಚೇತನ ಸಿಜಿಕೆ ನೆನಪಿನಲ್ಲಿ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ ಈ ಅಂಗವಾಗಿ
೦೨.೦೪.೦೭ ರಂದು L.G. ಶಿವಕುಮಾರರವರ ಶ್ರೀ ಕೃಷ್ಣ ನಿರ್ಯಾಣ
೦೩.೦೪.೦೭ ರಂದು ಡಾ. ಸಿ. ವೀರಣ್ಣ ಅವರ ಕಪಿಲ - ಸಂಜೆ ೬ ಕ್ಕೆ
೦೪.೦೪.೦೭ ರಂದು ಸೇಡಿಯಾಪುರವರ ನಾಗರಬೆತ್ತ - ಸಂಜೆ ೭ ಕ್ಕೆ
೦೫.೦೪.೦೭ ರಂದು ಎಸ್. ಚಿದಾನಂದರವರ ದಿವ್ಯಾಂಬರಿ - " "
೦೬.೦೪.೦೭ ರಂದು ದೇವನೂರರ ಒಡಲಾಳ - ಸಂಜೆ ೬.೨೦
೦೭.೦೪.೦೭ ರಂದು ಶಿವಾಚಾರ್ಯ ಸ್ವಾಮಿಗಳ ಅಂಕುಶ ನಾಟಕ ಕಲಾಕ್ಷೇತ್ರ ಮತ್ತು ನಯನದಲ್ಲಿ ಪ್ರದರ್ಶನಗೊಳ್ಳಲಿದೆ
ಒಡಲಾಳ ಮತ್ತು ನಗರ ಬೆತ್ತ ನಾಟಕ ನೋಡಬೇಕು ಅಂದು ಕೊಂಡಿದ್ದೇನೆ. ಖಂಡಿತಾ ಬನ್ನಿ
Wednesday, March 28, 2007
Saturday, March 24, 2007
ಮತ್ತೆ ಮತ್ತೆ ಬೇಕು ಬೇಡಗಳ ನಡುವಿನ ಗೊಂದಲ......
ಮಂಗಳೂರು ನನ್ನ ಹೀಗೆ ಕರೆಯುತ್ತದೆ ಅಂತ ನನಗೆ ಗೊತ್ತಿರಲಿಲ್ಲ. ಕಳೆದ ಮಂಗಳವಾರ ಅಂದರೆ ಮಾರ್ಚ್ ೧೩ ರಂದು ನಮ್ಮ ಊರಿನ ಜಾತ್ರೆಗೆ ಹೋಗಿದ್ದೆ, ಜಾತ್ರೆ ಅಂದರೆ ನಮ್ಮ ಊರಿಗೆ ಅಂತ ಅಲ್ಲ ಏಲ್ಲರಿಗೂ ಸಂಭ್ರಮ.ಒಂದು ದಿನದ ಮಟ್ಟಿಗೆ ಅಲ್ಲಿದ್ದರೂ ಆ ಸಂಭ್ರಮವೇ ಭಿನ್ನ ಬಿಡಿ.ಆದರೆ ಮತ್ತೊಂದು ವಾರದ ಅಂತರದಲ್ಲಿ ಮಂಗಳೂರು ನನ್ನ ಕರೆಯುತ್ತದೆ ಅಂದು ಕೊಂಡಿರಲಿಲ್ಲ. ನನ್ನ ಅತ್ಮೀಯ ಗೆಳೆಯನೊಬ್ಬನ ಅಮ್ಮನ ಸಾವು ನನ್ನನ್ನು ಮತ್ತೆ ಮಂಗಳೂರಿನತ್ತ ಬಸ್ಸು ಹತ್ತಿಸಿತು. ಈ ಬಗ್ಗೆ ನಾನು ಏನೂ ಬರೆಯಲಾರೆ.ಎಲ್ಲರಿಗೂ ನೋವು ಸಹಿಸಿಕೊಳ್ಳುವ ಶಕ್ತಿ ಬರಲಿ ಎನ್ನುವುದು ನನ್ನ ಹಾರೈಕೆ. ನನ್ನ ಖಾಸಗಿ ವಿಚಾರ ಪ್ರಸ್ತಾಪಕ್ಕೆ ಕ್ಷಮೆ ಇರಲಿ.
ಆದರೆ ಕೆಲ ತಿಂಗಳುಗಳ ಹಿಂದೆ ಕಳೆದುಕೊಂಡಿದ್ದ ಪ್ರೀತಿಯ ವಸ್ತುವೊಂದು ನನಗೆ ಮತ್ತೆ ಸಿಕ್ಕಿದೆ.ಇದಕ್ಕಿಂತ ಸಂತೋಷದ ವಿಷಯ ನನ್ನಗೆ ಮತ್ಯಾವೂದೂ ಇಲ್ಲ. ನೋವಿನ ನಡುವೆ ನಲಿವು, ನಲಿವಿನ ನಡುವೆ ನೋವು ಇದೇನಾ ಜೀವನ.
ಆದರೆ ಕೆಲ ತಿಂಗಳುಗಳ ಹಿಂದೆ ಕಳೆದುಕೊಂಡಿದ್ದ ಪ್ರೀತಿಯ ವಸ್ತುವೊಂದು ನನಗೆ ಮತ್ತೆ ಸಿಕ್ಕಿದೆ.ಇದಕ್ಕಿಂತ ಸಂತೋಷದ ವಿಷಯ ನನ್ನಗೆ ಮತ್ಯಾವೂದೂ ಇಲ್ಲ. ನೋವಿನ ನಡುವೆ ನಲಿವು, ನಲಿವಿನ ನಡುವೆ ನೋವು ಇದೇನಾ ಜೀವನ.
Saturday, March 10, 2007
ಪ್ರೀತಿಯೆಂಬ ನಿನ್ನದೇ ಕೂಸು.
ಮಾತನಾಡ ಬೇಡ ಗೆಳತಿ
ಮಲಗಿದೆ ತೊಟ್ಟಿಲಲ್ಲಿ ಕೂಸು
ಇನ್ನು ಎಚ್ಚರವಾದರೆ
ಮತ್ತೆ ಮಲಗುವುದಿಲ್ಲ
ನೀನು ಮಾತನಾಡದಿದ್ದರೆ
ಮತ್ತೆ ಎಚ್ಚರವಾಗುವುದಿಲ್ಲ
ನನಗೂ ಬೇಕಾದುದು ಅದೇ
ಇನ್ನು ಅದು ಎಚ್ಚರವಾಗಬಾರದು
ಹೇಳಿದೆನಲ್ಲವೇ!
ಎದ್ದರೆ ಮಲಗುವುದಿಲ್ಲ
ಮಲಗಿಸಲಾಗುವುದಿಲ್ಲ
ನಿನ್ನಿಂದ ಹುಟ್ಟಿದ ಕೂಸು
ನೀನೇ ಬಿಟ್ಟು ಹೋದ ಕೂಸು
ಸುಮ್ಮನಿರು ಗೆಳತಿ ಮೌನದಲೇ ಮೇಣವಾಗು
ಕತ್ತಲಲ್ಲಿ ಕರಗಿ ಹೋಗು. ನಮ್ಮಿಬ್ಬರ ಕೂಸಿಗಾಗಿ
ಮಲಗಿದೆ ತೊಟ್ಟಿಲಲ್ಲಿ ಕೂಸು
ಇನ್ನು ಎಚ್ಚರವಾದರೆ
ಮತ್ತೆ ಮಲಗುವುದಿಲ್ಲ
ನೀನು ಮಾತನಾಡದಿದ್ದರೆ
ಮತ್ತೆ ಎಚ್ಚರವಾಗುವುದಿಲ್ಲ
ನನಗೂ ಬೇಕಾದುದು ಅದೇ
ಇನ್ನು ಅದು ಎಚ್ಚರವಾಗಬಾರದು
ಹೇಳಿದೆನಲ್ಲವೇ!
ಎದ್ದರೆ ಮಲಗುವುದಿಲ್ಲ
ಮಲಗಿಸಲಾಗುವುದಿಲ್ಲ
ನಿನ್ನಿಂದ ಹುಟ್ಟಿದ ಕೂಸು
ನೀನೇ ಬಿಟ್ಟು ಹೋದ ಕೂಸು
ಸುಮ್ಮನಿರು ಗೆಳತಿ ಮೌನದಲೇ ಮೇಣವಾಗು
ಕತ್ತಲಲ್ಲಿ ಕರಗಿ ಹೋಗು. ನಮ್ಮಿಬ್ಬರ ಕೂಸಿಗಾಗಿ
ಪ್ರೀತಿಯೆಂಬ...................?
www.navilugari.blogspot.com
ಸುಮ್ಮನೆ ಯಾಕೆ ವರಿ ಮಾಡ್ತೀರಾ? ಪ್ರೀತಿಯೆಂದರೆ ಎನ್ನುವುದಕ್ಕೆ ಸಿಂಧು ಸೇರಿದಂತೆ ಅನೇಕ ಮಿತ್ರರರು ಪ್ರೇಮಿಗಳ ದಿವಸ ಬ್ಲಾಗನ್ನು ಪೂರ್ತಿ ರಕ್ತಮಯ ಮಾಡಿದ್ದೀರಿ ತಾನೇ. ಇವತ್ತು ನಾನು ಬರೆಯುತ್ತೇನೆ.
ಪ್ರೀತಿ ಎಂದರೆ ಹೊಳೆ, ಸಮುದ್ರ ಸಾಗರ ಅನ್ನುತ್ತಾರೆ. ಅದರೆ ಇದೊಂದು ಬಾವಿ ಕೂಡಾ ಹೌದು.ದುನಿಯಾ ನೋಡಿ ಗೊತ್ತಾಗುತ್ತೆ. ಮುಂಗಾರು ಮಳೆ ಮತ್ತು ದುನಿಯಾನ ಜೊತೆಯಲ್ಲಿರಿಸಿ ನೋಡಿ. ಇಬ್ಬರೂ ಗೆಳೆಯರ ಚಿತ್ರ ಹೇಗೆ ಗೆದ್ದಿದೆ ಎಂದು ನಿಮಗೆ ಅನ್ನಿಸಬಹುದು.ಎರಡೂ ಚೆನ್ನಾಗಿದೆ ಎಂದು ನೀವು ಅನ್ನಬಹುದು ಆದರೆ ಕಥೆಗೆ ಹೋಲಿಸಿಕೊಂಡರೆ ದುನಿಯಾ ನಮ್ಮ ಪಕ್ಕದ ಮನೆಯ ಹುಡುಗಿಯದ್ದೊ/ಹುಡುಗನದ್ದೊ ಅನ್ನುವಂತಿದೆ. ಮುಂಗಾರು ಮಳೆ ಅದರೊಳಗಿನ ಕೆಲಸ,ಹಾಡಿನ ಕಾರಣಕ್ಕೆ ಭಿನ್ನವಾಗಿದೆ,ಆದರೆ ಪ್ರೀತಿಯ ಮಟ್ಟಿಗೆ ಬಂದರೆ ದುನಿಯಾನದ್ದೇ ಮೇಲುಗೈ.
ಪ್ರೀತಿ ಇಷ್ಟಕ್ಕೆ ನಿಲ್ಲುವುದಿಲ್ಲ. ಮುಂಗಾರು ಮಳೆ ನಿಲ್ಲುತ್ತದೆ ಹಾಗೆ ಪ್ರೀತಿಯೂ ಅಷ್ಟೇ. ನಿಮ್ಮನ್ನೂ ನೀವೇ ನೆನಪಿಸಿಕೊಳ್ಳಿ ಕಾಲೇಜಿನಲ್ಲಿದ್ದಾಗ ಪ್ರೀತಿಸಿದ ಹುಡುಗನೋ ಹುಡುಗಿಯೋ ಈಗ ಸಿಕ್ಕಾಗ ನಿಮ್ಮ ಮನಸ್ಸಿನಲ್ಲಿ ಏನೂ ಇರುವುದೇ ಇಲ್ಲ. ಮಳೆ ಕೊಚ್ಚಿ ಹೋದ ತರೆಗೆಲೆಯಂತೆ ಪ್ರೀತಿ ಕೊಚ್ಚಿ ಹೋಗಿರುತ್ತದೆ. ನಿಮಗೊಂದು ಸವಾಲಿದೆ.ಪ್ರಥಮ ಪ್ರೀತಿಯಲ್ಲೇ ಜಯಗಳಿಸದವರನ್ನ ನನಗೆ ತೋರಿಸಿ.
ನೀನು ಇಲ್ಲದೆ ನಾನಿಲ್ಲ ಎಂದು ರಕ್ತದಲ್ಲಿ ಲವ್ ಲೆಟರ್ ಬರೆದ ಹುಡುಗಿ, ಗೆಳೆಯನನ್ನೇ ತೆಕ್ಕೆಯಲ್ಲಿ ಬರ ಸೆಳೆದು ಮುತ್ತಿಕ್ಕಿದ ಹುಡುಗಿ ಗೆಳೆಯನನ್ನೇ ನೀನು ಸರಿಯಿಲ್ಲ ಎಂದು ನಡೆದಿದ್ದಳು. ಹುಡುಗ ಹಲವು ದಿನ ಕಂಗಲಾಗಿದ್ದ ನೋವು ಉಂಡಿದ್ದ ಈಗ ಇಬ್ಬರೂ ಆರಾಮವಾಗಿದ್ದರೆ. ಬೇರೆ ಬೇರೆಯವರನ್ನು ಪ್ರೀತಿಸುತ್ತಿದ್ದಾರೆ. ನೀವೇ ನಿಮ್ಮ ಬದುಕಿನ ಸುತ್ತಾ ಕಣ್ಣಾಡಿಸಿ, ನಿಮ್ಮ ಗೆಳೆಯರ/ ಗೆಳತಿಯರ ಬಗ್ಗೆ ಒಂದು Flash Back ಗೆ ಹೋಗಿ, ನಾನು ಹೇಳಿದ್ದು ಸುಳ್ಳಾಗಿದ್ದರೆ ಹೇಳಿ.
ಪ್ರೀತಿಗೆ ಮಿತಿಯಿಲ್ಲ, ಅಡ್ಡಗೋಡೆಯಿಲ್ಲ ಇದು ನಿಜ ಆದರೆ ಪರಿಧಿಯೂ ಇಲ್ಲ, ಮೊದಲ ದಿನ ಮೌನ ಆಳುವೇ ತುಟಿಗೆ ಬಂದಂತೆ
ಭಾವಗೀತೆಯನ್ನು ನೆನಪಿಸಿಕೊಳ್ಳಿ. ಹಾಗೇ ಕೆ.ಎಸ್. ನ ರವರ ’ಹೂ ಅರಳುವ ಮುನ್ನ, ಹಕ್ಕಿ ಹಾಡುವ ಮುನ್ನ ಮೀನು ತುಳುಕುವ ಮುನ್ನ ’ ಹಾಡನ್ನು ಗುಣು ಗುಣಿಸಿ. ಒಂದು ಕ್ಷಣ ಏನು ಅನ್ನಿಸಿತು ಹೇಳಿ.ಬಹುಶ:
ನೆನಪೇ ಏಕೆ ಕಾಡುವೇ
ನೆನಪೆ ಬಿಡದೆ ಕಾಡುವೇ
ಮನಸ್ಸು ರಸ ನಿಮಿಷ ನೆನೆದು ಅದನ್ನೇ ಕನವರಿಸಿದೆ. ಎಂದೂ ನೀವು ಹಾಡಿರ ಬಹುದಲ್ಲ. ಇದೇ ಪ್ರೀತಿ.
ನಾನು ಅಷ್ಟೇ ಪ್ರೀತಿಯ ಸುತ್ತ ಬೆಳೆದವನು ಅದನ್ನು ಕಳೆದುಕೊಂಡು ಆ ನೋವನ್ನು ಮೆಟ್ಟಿ ನಿಂತವನು. ನೋವ ಗೋರಿಯ ಮೇಲೆಯೇ ನನ್ನ ವಿಜಯ ಪತಾಕೆಯನ್ನು ಹಾರಿಸಲು ನಿರ್ಧರಿಸಿದವನು. ಹೀಗಾಗಿಯೇ ನೆನಪು ಯಾಕೆ ಕಾಡುವೇ ಏನ್ನುವ ಸಾಲು ನನ್ನ ಕಾಡಿದ್ದು.
ಪ್ರೀತಿಯ ಬಗ್ಗೆ ಇನ್ನಷ್ಟು ಬರೆಯುತ್ತೇನೆ. ಅದಕ್ಕಿಂತಲೂ ಮುನ್ನ ನನ್ನ ಅಕ್ಕನ ಬಗ್ಗೆ ಬರೆಯಬೇಕು, ಸಾಧ್ಯವಾದರೆ ನನ್ನ ಅಕ್ಕ ಬರೆದ ಇಂಗ್ಲೀಷ್ ಕವನಗಳು ಇಲ್ಲಿದೆ ದಯವಿಟ್ಟು ಕಣ್ಣಾಡಿಸಿ - http://ashu-mahesh.blogspot.com
ನನ್ನದೇ ಕವನವಿದೆ ಓದಿ ಪ್ರತಿಕ್ರಿಯಿಸಿ. ಅದಕ್ಕೂ ಮುನ್ನ ನಾಳೆ ನನ್ನ ಗೆಳೆಯನೊಬ್ಬನ ಬಗ್ಗೆ ಬರೆಯಿತ್ತೇನೆ. ಅಮೇಲೆ ನನ್ನ ಅಕ್ಕ.ಮೊದಲು ಅಕ್ಕ ತಮ್ಮನ ಕವನ ಓದಿ

ವಾರಾಂತ್ಯದಲ್ಲಿ ಒಂದಿಷ್ಟು ಮಾತು...
ಮತ್ತೊಂದು ವಾರ ಕಳೆದು ಹೋಗಿದೆ. TV 9 ಕಚೇರಿಗೆ ದಾಳಿ ಸೇರಿದಂತೆ ಹಲವು ಬೆಳವಣೆಗೆಗಳು ನಡೆದಿದೆ.ಮಾಧ್ಯಮ ಮಂದಿಯ ಮೇಲೆ ದಾಳಿ ಮಾಮೂಲಿ ನನಗೂ ಇದರ ಅನುಭವಾಗಿದೆ. ಆದರೆ ಕರ್ನಾಟಕದ ಮಟ್ಟಿಗೆ ಈ ದಾಳಿ ಪ್ರಥಮವೇ ಸರಿ. ಇದೊಂದು ಆತಂಕಕಾರಿ ಬೆಳವಣೆಗೆ ಅನ್ನುವುದರಲ್ಲಿ ಎರಡು ಮಾತಿಲ್ಲ.ಮುಂದೆ ಇದು ತೀವ್ರತೆಯನ್ನು ಪಡೆಯದಿದ್ದರೆ ಸಾಕು ಎನ್ನುವುದು ನನ್ನ ಆಶಯ.
ಆದರೆ ಪ್ರಚಾರ ಪಡೆಯುವ ಭರಾಟೆಯಲ್ಲಿ TV9 ಮಾಡಿಕೊಳ್ಳುತ್ತಿರುವ ಎಡವಟ್ಟುಗಳು ಮಾತ್ರ ಒಂದಲ್ಲ, ಎರಡಲ್ಲ. ರಕ್ಷಿತಾ ಮದುವೆ ಈ ಪರಿಯ ಪ್ರಚಾರ ಬೇಕೇ ( ZEE Kannada ) ಹೊರತಾಗಿಲ್ಲ. ಅದರೆ TV 9 ನದ್ದು ಅತೀಯಾಯಿತು. ವರದಿಗಾರ್ತಿಯೊಬ್ಬಳು ಕೇಳಿದ ಪ್ರಶ್ನೆಯಂತ್ತು ......... ನಾ ಹೇಳಲಾರೆ ಬಿಡಿ ನೀವೇ ಕೇಳಿ.
೧. ನಾಳೆ ನೀವು ಯಾವ ಡ್ರೆಸ್ ಹಾಕ್ತೀರಾ ? ಪುಣ್ಯ ರಕ್ಷಿತಾ ಸಾರಿ ಬಗ್ಗೆ ಮಾತ್ರ ಹೇಳಿದ್ಲು.
೨. ಯಾವ ಬ್ಯೂಟಿ ಪಾರ್ಲರ್ ನವರು ನಿಮಗೆ ಮೇಕಪ್ ಮಾಡುತ್ತಾರೆ.? ಇವರಿಗ್ಯಾಕೆ ಅಧಿಕ ಪ್ರಸಂಗ....
ಹೀಗೆ ಅಸಬಂದ್ಧ ಪ್ರಶ್ನೆಗಳೇ ಮುಂದುವರಿದಿತ್ತು. ಇಷ್ಟೊತ್ತಿಗೆ ರೋಸಿ ಹೋದ ಗೆಳೆಯ ಪ್ರಸಾದ್ ಟಿ.ವಿ. ಆಫ್ ಮಾಡಿದ್ದ.
ಕೊನೆ ಮಾತು
ರಕ್ಷಿತಾ - ಪ್ರೇಮ್ ವಿವಾಹದ ಸಮಗ್ರ , ಸಚಿತ್ರ ವರದಿ TV 9 ನಲ್ಲಿ ಮಾತ್ರವಂತೆ ಅಂತಾ ಅವರೇ ಹೇಳ್ತಾ ಇದ್ರೂ.
ಕೆಲ ಪಡ್ಡೆ ಹುಡುಗರು ರಾತ್ತ್ರಿ ೧೨ ಕಳೆದರೂ TV 9 ಮುಂದೆ ಕೂತಿದ್ದರೂ ಆದರೆ ಮದುವೆ ಮಂಟಪದಿಂದ TV 9 ಕ್ಯಾಮಾರ ಪ್ರೇಮ್ ಮನೆಗೆ ಹೋಗಿರಲಿಲ್ಲ.

Tuesday, March 6, 2007
ಮರೆಯಾದ ದಿನಗಳ ಬಗ್ಗೆ ಮತ್ತೆ ಬರೆಯಲೇ............

ಬಹಳ ದಿನಗಳಿಂದ ಏನೂ ಬರೆಯಲಾಗಲಿಲ್ಲ. ಕಾರಣ ಏನೆಂದು ನೀವು ಕೇಳಿದರೆ ನನ್ನ ಬಳಿ ಉತ್ತರವಿಲ್ಲ. ಹೇಳುವಂತ ಒತ್ತಡಗಳಿರಲಿಲ್ಲ. ಬರೆಯಬೇಕು ಏನ್ನುವ ಕನಸು ಮಾತ್ರ ಜೀವಂತವಿತ್ತು ಅದು ನನಗೆ ಖುಷಿ ತಂದಿದೆ.
ನನ್ನ ದಿನಚರಿಯಲ್ಲಿ ಹಲವಾರು ಬದಲಾವಣೆಗಳಾಗಿದೆ. ಮಂಗಳೂರಿನಿಂದ ಬೆಂಗಳೂರಿಗೆ ಬಂದ ಬಳಿಕ ನನ್ನ ಕನಸುಗಳ ಬಗ್ಗೆ ಕನಸಿನ ಹುಡುಗಿಯ ಬಗ್ಗೆ ಬರೆಯಲಾಗಲೇ ಇಲ್ಲ. ಮೊನ್ನೆ ಅದೇ ಯೋಚನೆ ಮಾಡುತ್ತಿದೆ ನನ್ನ ಕನಸುಗಳಿಗೆ ಏನಾಗಿದೆ ಎಂದು.......... ಜೊತೆಗೆ ಹಿಂದಿನಂತೆ ಈಗ ಬರೆಯಲಾಗುತ್ತಿಲ್ಲವಲ್ಲ. ಹೌದು ಮತ್ತೆ ಬರೆಯಲೇಬೇಕು ಎಂದು ಹಠ ಕಟ್ಟಿದ್ದೇನೆ. ಮತ್ತೆ ಬರೆಯಲೇ ಬೇಕು.
ಇವತ್ತು ನಿಮ್ಮೊಂದಿಗೆ ಹಂಚಿಕೊಳ್ಳಲೇ ಬೇಕು ಮೊನ್ನೆ ಅನೇಕ ನಾಟಕೋತ್ಸವಕ್ಕೆ ಹೋಗಿದ್ದೆ ’ಮದುವೆ ಹೆಣ್ಣು ’ ,
ಅಧೆ ಅಧೂರೆ ಮತ್ತು ನೆನಪಾದಳು ಶಕುಂತಲೆ ನಾಟಕಗಳ ಪ್ರದರ್ಶನ ಅಯೋಜಿಸಲಾಗಿತ್ತು. ನಾನು ನೋಡಿದ್ದು ಎರಡೇ ನಾಟಕ ಅದು ’ಮದುವೆ ಹೆಣ್ಣು ’ ಮತ್ತು ನೆನಪಾದಳು ಶಕುಂತಲೆ.
ಮದುವೆ ಹೆಣ್ಣು , ಬುಡಕಟ್ಟು ಜನಾಂಗದ ವ್ಯಕ್ತಿ ಮತ್ತು ಬೌದ್ಧ ಸನ್ಯಾಸಿಯ ಸುತ್ತ ನಡೆಯುವ ಕಥೆ. ಮಾನವನ ಚಂಚಲ ಮನಸ್ಸು, ಹಠ ಇವೆಲ್ಲಾವನ್ನೂ ವಿವರಿಸುವ ನಾಟಕ ರಂಗದ ಮೇಲಿನ ಅಭಿನಯ, ಸಂಯೋಜನೆಯ ಕಾರಣಕ್ಕೆ ತುಂಬಾ ಇಷ್ಟವಾಯಿತು.
ಶಕುಂತಲೆ ಬಗ್ಗೆ ನಾನು ಬರೆಯುವ ಅಗತ್ಯವಿಲ್ಲ ಆದರೂ ಪ್ರೀತಿಯನ್ನು ಮುಂಗಾರು ಮಳೆಯಂತೆ ( ಕಥೆಯೊಂದನ್ನು ಬಿಟ್ಟು)ತೋರಿಸಲಾಗದಿದ್ದರೂ ನನ್ ಮಗ ಕಾಳಿದಾಸನ ಮೆಚ್ಚಲೇ ಬೇಕು. ನಾಟಕ ಅದ್ಭುತವಾಗಿತ್ತು.ನಟರ ಕಾರಣಕ್ಕೆ ನಾಟಕ ಹಿಟ್ ಆಯಿತು ಅನ್ನುವುದರಲ್ಲಿ ಸಂಶಯವಿಲ್ಲ.
ಜೊತೆಗೆ ಮೊನ್ನೆ ಭಾನುವಾರ S.P. ಮತ್ತು ಅಶ್ವಥ್ ಕಾರ್ಯಕ್ರಮಕ್ಕೆ ಹೋಗಿದ್ದೆ ಭಾವಗೀತೆಗಳ ಮಳೆ, ನನ್ನ ಪ್ರೀತಿಯ ಎಂ.ಡಿ.ಪಲ್ಲವಿ ದನಿ ನನ್ನ ಹಳೆಯ ಕನಸು ಮತ್ತೆ ಜೀವ ತುಂಬಿದೆ, ಮತ್ತೆ ಬರುತ್ತೇನೆ.
ಅಕ್ಕನ ಬಗ್ಗೆ, ಕನಸು ತುಂಬಿದವರ ಬಗ್ಗೆ ಮತ್ತೆ ಬರೆಯಿತ್ತೇನೆ. ನಮಸ್ಕಾರ
Subscribe to:
Posts (Atom)