Wednesday, March 28, 2007

ನಾಟಕಗಳಿದೆ ಮನಸ್ಸಿಟ್ಟು ಬನ್ನಿ

ಬರೆಯಲು ಮತ್ಕಾಕೋ ಒತ್ತಡ ಆದರೂ ಕೆಲ ದಿನಗಳ ಹಿಂದೆ ಕನ್ನಡ ರಾಮಾಯಣ ಮತ್ತು ನಿನ್ನೆ ಧರೆಯೊಳಗನ ರಾಜಕೀಯ ನಾಟಕಗಳನ್ನು ನೋಡಿದೆ. ಎರಡೂ ನಾಟಕಗಳು ಚೆನ್ನಾಗಿತ್ತು. ರಾಮಾಯಣ ದ ಬಗ್ಗೆ ಶ್ರೀದೇವಿಯವರ ೧೦೦ ಕನಸು ಬ್ಲಾಗಿನಲ್ಲಿ ಮಾಹಿತಿಗಳು ಸಿಗಬಹುದು ಜೊತೆಗೆ ಧರೆಯೊಳಗಿನ ರಾಜಕೀಯದ ಬಗ್ಗೆ ಕೂಡಾ.

೨ ನಾಟಕಗಳನ್ನು ಒಟ್ಟಿಗೆ ಗಮನಿಸಿದರೆ ಅದಕ್ಕೆ ಅವುಗಳದ್ದೇ ಆದ ತೂಕವಿದೆ. ರಾಮಾಯಣ, ಆಭಿನಯ, ಮಾತುಗಳ ಕಾರಣಕ್ಕೆ ನಮ್ಮನ್ನು ಹೊಸ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಹಾಡುಗಳು ಅಷ್ಟೇ. ಧ. ರಾ ಅಭಿನಯದ ಕಾರಣಕ್ಕೆ ಸೋಲುತ್ತದೆ. ಧಾರಾವಾಹಿ ನಟರು ಕಲಾಕ್ಷೇತ್ರದ ಛಾಪನ್ನು ಉಳಿಸಿಕೊಂಡಿಲ್ಲ ಅನಿಸುತ್ತದೆ.

ನಿಮಗೊಂದು ಆಹ್ವಾನ

ರಂಗಚೇತನ ಸಿಜಿಕೆ ನೆನಪಿನಲ್ಲಿ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ ಈ ಅಂಗವಾಗಿ
೦೨.೦೪.೦೭ ರಂದು L.G. ಶಿವಕುಮಾರರವರ ಶ್ರೀ ಕೃಷ್ಣ ನಿರ್ಯಾಣ

೦೩.೦೪.೦೭ ರಂದು ಡಾ. ಸಿ. ವೀರಣ್ಣ ಅವರ ಕಪಿಲ - ಸಂಜೆ ೬ ಕ್ಕೆ

೦೪.೦೪.೦೭ ರಂದು ಸೇಡಿಯಾಪುರವರ ನಾಗರಬೆತ್ತ - ಸಂಜೆ ೭ ಕ್ಕೆ

೦೫.೦೪.೦೭ ರಂದು ಎಸ್. ಚಿದಾನಂದರವರ ದಿವ್ಯಾಂಬರಿ - " "

೦೬.೦೪.೦೭ ರಂದು ದೇವನೂರರ ಒಡಲಾಳ - ಸಂಜೆ ೬.೨೦

೦೭.೦೪.೦೭ ರಂದು ಶಿವಾಚಾರ್ಯ ಸ್ವಾಮಿಗಳ ಅಂಕುಶ ನಾಟಕ ಕಲಾಕ್ಷೇತ್ರ ಮತ್ತು ನಯನದಲ್ಲಿ ಪ್ರದರ್ಶನಗೊಳ್ಳಲಿದೆ

ಒಡಲಾಳ ಮತ್ತು ನಗರ ಬೆತ್ತ ನಾಟಕ ನೋಡಬೇಕು ಅಂದು ಕೊಂಡಿದ್ದೇನೆ. ಖಂಡಿತಾ ಬನ್ನಿ

1 comment:

Madhu said...

ಇದು ಹುಡುಕು ನೋಡಿ
http://www.yanthram.com/kn/