

ಬಹಳ ದಿನಗಳಿಂದ ಏನೂ ಬರೆಯಲಾಗಲಿಲ್ಲ. ಕಾರಣ ಏನೆಂದು ನೀವು ಕೇಳಿದರೆ ನನ್ನ ಬಳಿ ಉತ್ತರವಿಲ್ಲ. ಹೇಳುವಂತ ಒತ್ತಡಗಳಿರಲಿಲ್ಲ. ಬರೆಯಬೇಕು ಏನ್ನುವ ಕನಸು ಮಾತ್ರ ಜೀವಂತವಿತ್ತು ಅದು ನನಗೆ ಖುಷಿ ತಂದಿದೆ.
ನನ್ನ ದಿನಚರಿಯಲ್ಲಿ ಹಲವಾರು ಬದಲಾವಣೆಗಳಾಗಿದೆ. ಮಂಗಳೂರಿನಿಂದ ಬೆಂಗಳೂರಿಗೆ ಬಂದ ಬಳಿಕ ನನ್ನ ಕನಸುಗಳ ಬಗ್ಗೆ ಕನಸಿನ ಹುಡುಗಿಯ ಬಗ್ಗೆ ಬರೆಯಲಾಗಲೇ ಇಲ್ಲ. ಮೊನ್ನೆ ಅದೇ ಯೋಚನೆ ಮಾಡುತ್ತಿದೆ ನನ್ನ ಕನಸುಗಳಿಗೆ ಏನಾಗಿದೆ ಎಂದು.......... ಜೊತೆಗೆ ಹಿಂದಿನಂತೆ ಈಗ ಬರೆಯಲಾಗುತ್ತಿಲ್ಲವಲ್ಲ. ಹೌದು ಮತ್ತೆ ಬರೆಯಲೇಬೇಕು ಎಂದು ಹಠ ಕಟ್ಟಿದ್ದೇನೆ. ಮತ್ತೆ ಬರೆಯಲೇ ಬೇಕು.
ಇವತ್ತು ನಿಮ್ಮೊಂದಿಗೆ ಹಂಚಿಕೊಳ್ಳಲೇ ಬೇಕು ಮೊನ್ನೆ ಅನೇಕ ನಾಟಕೋತ್ಸವಕ್ಕೆ ಹೋಗಿದ್ದೆ ’ಮದುವೆ ಹೆಣ್ಣು ’ ,
ಅಧೆ ಅಧೂರೆ ಮತ್ತು ನೆನಪಾದಳು ಶಕುಂತಲೆ ನಾಟಕಗಳ ಪ್ರದರ್ಶನ ಅಯೋಜಿಸಲಾಗಿತ್ತು. ನಾನು ನೋಡಿದ್ದು ಎರಡೇ ನಾಟಕ ಅದು ’ಮದುವೆ ಹೆಣ್ಣು ’ ಮತ್ತು ನೆನಪಾದಳು ಶಕುಂತಲೆ.
ಮದುವೆ ಹೆಣ್ಣು , ಬುಡಕಟ್ಟು ಜನಾಂಗದ ವ್ಯಕ್ತಿ ಮತ್ತು ಬೌದ್ಧ ಸನ್ಯಾಸಿಯ ಸುತ್ತ ನಡೆಯುವ ಕಥೆ. ಮಾನವನ ಚಂಚಲ ಮನಸ್ಸು, ಹಠ ಇವೆಲ್ಲಾವನ್ನೂ ವಿವರಿಸುವ ನಾಟಕ ರಂಗದ ಮೇಲಿನ ಅಭಿನಯ, ಸಂಯೋಜನೆಯ ಕಾರಣಕ್ಕೆ ತುಂಬಾ ಇಷ್ಟವಾಯಿತು.
ಶಕುಂತಲೆ ಬಗ್ಗೆ ನಾನು ಬರೆಯುವ ಅಗತ್ಯವಿಲ್ಲ ಆದರೂ ಪ್ರೀತಿಯನ್ನು ಮುಂಗಾರು ಮಳೆಯಂತೆ ( ಕಥೆಯೊಂದನ್ನು ಬಿಟ್ಟು)ತೋರಿಸಲಾಗದಿದ್ದರೂ ನನ್ ಮಗ ಕಾಳಿದಾಸನ ಮೆಚ್ಚಲೇ ಬೇಕು. ನಾಟಕ ಅದ್ಭುತವಾಗಿತ್ತು.ನಟರ ಕಾರಣಕ್ಕೆ ನಾಟಕ ಹಿಟ್ ಆಯಿತು ಅನ್ನುವುದರಲ್ಲಿ ಸಂಶಯವಿಲ್ಲ.
ಜೊತೆಗೆ ಮೊನ್ನೆ ಭಾನುವಾರ S.P. ಮತ್ತು ಅಶ್ವಥ್ ಕಾರ್ಯಕ್ರಮಕ್ಕೆ ಹೋಗಿದ್ದೆ ಭಾವಗೀತೆಗಳ ಮಳೆ, ನನ್ನ ಪ್ರೀತಿಯ ಎಂ.ಡಿ.ಪಲ್ಲವಿ ದನಿ ನನ್ನ ಹಳೆಯ ಕನಸು ಮತ್ತೆ ಜೀವ ತುಂಬಿದೆ, ಮತ್ತೆ ಬರುತ್ತೇನೆ.
ಅಕ್ಕನ ಬಗ್ಗೆ, ಕನಸು ತುಂಬಿದವರ ಬಗ್ಗೆ ಮತ್ತೆ ಬರೆಯಿತ್ತೇನೆ. ನಮಸ್ಕಾರ
3 comments:
kaayuttiddene..
nimma barahakke..
hosa notagaLige..
preetiyirali,
sindhu
ಕೆಲವೊಮ್ಮೆ ಮನಸು ಮೌನಕ್ಕೆ ಶರಣಾಗ್ತದೆ, ಸಮಯ ತಗೊ೦ಡು ಅದನ್ನ ಮಾತಾಡಿಸಿ, ಒಲಿಸಿದರೆ ಬರಹ, ಕನಸು, ಕವಿತೆ ತಾನಾಗಿಯೆ ಮೂಡ್ತದೆ!!
ರಾಧಾಕೃಷ್ಣ,
ಯಾವಾಗಲೂ ಬರೀತಾ ಇರಿ..
ಕನಸುಗಳು ಚಿಗುರಿ ಬೆಳೆದು ಹೆಮ್ಮರವಾಗಿ ಫಲ ನೀಡಲಿ
Post a Comment