Wednesday, February 13, 2008

ಮತ್ತೊಂದು ಕನಸು

ನಿನ್ನ ಅಂಗೈಯಲ್ಲಿ ನನ್ನ ಅಂಗೈ ಬಂಧಿಯಾಗಿ
ನಾವಿಬ್ಬರೂ ಓಡಬೇಕು
ಸಮುದ್ರದಂಡೆಯಲಿ
ಮರಳರಾಶಿಯ ತುಂಬಾ ನಮ್ಮದೇ ಪಾದದ ಗುರುತು
ಮುತ್ತಿಕ್ಕುವ ಅಲೆಗೇನೂ ಗೊತ್ತು
ನಮ್ಮ ಓಟದ ಗುರಿ

ಸೊರ್ಯ ಮುಳುಗುವ ಹೊತ್ತಿಗೆ
ನೀರು ಚುಂಬಿಸುವಷ್ಟರಲ್ಲಿ
ನಾನು ನಿನ್ನೊಳಗೆ ಬಂಧಿಯಾಗಬೇಕು
ಓಟ ಮುಗಿದಿರಬೇಕು,
ನಿನ್ನ ನಾಚಿಕೆ ರಂಗೇರಬೇಕು
ಸೂರ್ಯನ ಕೆಂಪಿನಂತೆ

ನಿನ್ನ ಎದೆಯೊಳಗೆ ನಾನು ಉರಿಯಬೇಕು
ಹಣತೆಯಂತೆ ಹುಣ್ಣೆಮೆಯ ಚಂದಿರನಂತೆ
ನನ್ನೊಳಗೆ ನೀನು ಉರಿಯಬೇಕು
ನನ್ನಂತೆ..........


( ನಾಳೆ ಪ್ರೀತಿಯ ದಿನ, ಹಲವು ತಿಂಗಳುಗಳ ಹಿಂದೆ ಬರೆದ ಕವನ ಇಲ್ಲಿದೆ...)

9 comments:

ಭಾವನೆಗಳಿಗೆ ಜೀವ ತುಂಬುತ್ತ... said...

beauty da.... ಮತ್ತೊಬ್ಬ ಬರಹಗಾರ ತನ್ನ ಗರಿ ಬಿಚ್ಚಿದ್ದು ಖುಶಿಯನಿಸಿದೆ... ಈ ಬರಹಗಳಿಗೆ, ಅಂತರಾಳದ ಭಾವನೆಗಳಿಗೆ ಕೊನೆಯಿರದಿರಲಿ...
ಪ್ರೀತಿಯಿಂದ ಸುನಿಲ್..

ಶ್ರೀನಿಧಿ.ಡಿ.ಎಸ್ said...

ಮರಳಿ ಬ್ಲಾಗು ಲೋಕಕ್ಕೆ ಆತ್ಮೀಯ ಸ್ವಾಗತ!

Shiv said...

ಸುಂದರವಾಗಿ ಮೂಡಿ ಬಂದಿದೆ ಕವನ..

Anonymous said...

Konege Enaythu? :)
- SHREE

ತೇಜಸ್ವಿನಿ ಹೆಗಡೆ said...

ನನ್ನೊಳಗೆ ನೀನು ಉರಿಯಬೇಕು
ನನ್ನಂತೆ..........
ತುಂಬಾ ಚೆನ್ನಾಗಿದೆ.

ರಾಧಾಕೃಷ್ಣ ಆನೆಗುಂಡಿ. said...

thanks for all ................

Anonymous said...

nice thumba chennagide bareyuthiri sadha yavagalu.........
damu dondole

ನಾವಡ said...

ಕವನ ಚೆನ್ನಾಗಿದೆ. ಇರುವ ಒತ್ತಡದಲ್ಲೂ ಮೂಡಿ ಬರಲಿ ಬದುಕೆಂಬ ಭಾವಗೀತೆ.
ನಾವಡ

sunaath said...

ಕನಸು ಸುಂದರವಾಗಿದೆ. ನಿಮ್ಮ ಕನಸುಗಳೆಲ್ಲವೂ ನನಸಾಗಲಿ. ಹೊಸ ಹೊಸ ಕನಸು ಕಾಣಲಿ.