

ಬಹಳ ದಿನಗಳ ಬಳಿಕ ಚಿತ್ರಮಂದಿರದತ್ತ ಮುಖ ಹಾಕಿದ್ದೆ. ಮುಂಗಾರು ಮಳೆ ಸಿನಿಮಾ ಚೆನ್ನಾಗಿದೆ ಎಲ್ಲರೂ ಹೇಳುತ್ತಿದ್ದರು, ಆದರೆ ನೋಡಿರಲಿಲ್ಲ,ನಿನ್ನೆ ಸಹೋದ್ಯೋಗಿ ಗೆಳತಿ ಅಕ್ಕ ಶ್ರೀ... ಯ ಆಚಾನಕ್ ನಿರ್ಧಾರದಿಂದ ಮುಂಗಾರು ಮಳೆಗೆ ಆಚಾನಕ್ ಆಗಿ ಮೈ ಒಡ್ಡುವಂತಾಯಿತು.
ಬ್ಲ್ಯಾಕ್ ನಲ್ಲಿ ಟಿಕೇಟ್ ಖರೀದಿ ಮಾಡಿ ಒಳನುಗ್ಗಿದರೂ ಮೋಸವಾಗಲಿಲ್ಲ.
ಮಳೆ ಕಥೆಯಾಗುತ್ತದೆ, ಕವಿತಯಾಗುತ್ತದೆ, ಮನಸ್ಸಿಗೆ ಮುದ ನೀಡುತ್ತದೆ ಜೊತೆಗೆ ಕಣ್ಣೀರು ತರಿಸುತ್ತದೆ ಎಂದು ನಮಗೆ ಗೊತ್ತೆ ಇದೆ. ಆದರೆ ಮುಂಗಾರು ಮಳೆ ಸುಡುವ ರೀತಿ ಭಿನ್ನ ಎಂಬುದನ್ನು ಈ ಚಿತ್ರ ತೆರೆದಿಟ್ಟಿದೆ. ಕಥೆಯನ್ನು ನೋಡಿದರೆ ಬಾಲಿಶಾ ಅನ್ನಿಸಬಹುದು. ಆದರೆ ಕಥೆಯನ್ನು ಹೆಣೆದ ರೀತಿ ಸಾಕಷ್ಟು ಮುದ ನೀಡುತ್ತದೆ. ಮದುವೆ ಗೊತ್ತಾದ ಹುಡುಗಿ ಈ ರೀತಿ ಮನಸ್ಸು ಬದಲಾಯಿಸಲು ಸಾಧ್ಯವೇ ಎನ್ನುವ ಪ್ರಶ್ಣೆ ನಮ್ಮ ಮುಂದೆ ಉಧ್ಬವವಾಗುತ್ತದೆ. ಆದರೆ ಪ್ರೀತಿಗೆ ಈ ಶಕ್ತಿ ಇದೆ ಅನ್ನುವುದು ಪ್ರೀತಿಸಿದ ಎಲ್ಲರಿಗೂ ಗೊತ್ತಿದೆ.
ಚಿತ್ರವನ್ನು ಹಲವು ಕೋನಗಳಲ್ಲಿ ನಾವು ಗಮನಿಸ ಬೇಕು. ಹಿಂದೆ ನಾನು ಕಥೆಯ ಬೆನ್ನು ಹತ್ತುತ್ತಿದೆ. ಈಗ ತಾಂತ್ರಿಕ ಕೋನಗಳಿಂದಲೂ ನೋಡುವ ಹುಚ್ಚು ಬೆಳೆದಿರುವುದರಿಂದ ಚಿತ್ರ ಚೆನ್ನಾಗಿದೆ,ಈ ಕಾರಣಕ್ಕಾಗಿಯೇ ಜನ ಸಾಮಾನ್ಯನಿಗೂ ಚಿತ್ರ ಇಷ್ಟವಾಗುತ್ತದೆ.
ಕ್ಯಾಮಾರ ವರ್ಕ್ ಚೆನ್ನಾಗಿದೆ ಜಲಪಾತವನ್ನು ಮೈ ಜುಂ ಅನ್ನುವಂತೆ ತೋರಿಸಿದ್ದಾರೆ. ಸಂಭಾಷಣೆ ಕೂಡಾ ಅಷ್ಟೇ ತುಂಬಾ ಗ್ರಾಂಥಿಕವಾಗಿಲ್ಲ.ನಾವು ನೀವು ಮಾತಾನಾಡುವಂತಿದೆ.ಗಣೇಶ್ ಪ್ರೇಮ ಪ್ರಸಂಗವನ್ನು ವಿವರಿಸುವಾಗ ಆಪ್ತರಾಗಿತ್ತಾರೆ. ಹಾಸ್ಯವೂ ಆಷ್ಟೇ ಕೇವಲ ಚಡ್ಡಿ ಪ್ರಸಂಗ ನಮ್ಮನ್ನು ನಗಿಸುತ್ತದೆ.
ಮೊಲ( ದೇವದಾಸ್ ) ನಮ್ಮನ್ನು ಕಾಡುತ್ತದೆ.
ನಮ್ಮ ನಿಮ್ಮ ನಡುವಿನ ಪೇಮ ಕಥೆಯೊಂದು ತೆರೆಯ ಮೇಲೆ ಮೊಡಿದೆ ಆಷ್ಟೇ ಅಂದುಕೊಳ್ಳುವಷ್ಟು ಹತ್ತಿರವಾದ ಕಥೆಯಲ್ಲಿ ಇಷ್ಟವಾಗದ ಪಾತ್ರವೊಂದಿದೆ ( ಕೊನೆ ಹನಿ ನೋಡಿ)
ಹಾಡುಗಳು ಇಂಪಾಗಿದೆ, ಆದರೆ ಮತ್ತೊಂದು ಚಿತ್ರ ಬಂದಾಗ ಈ ಹಾಡು ಮರೆಯಾಗುತ್ತದೆ ಎನ್ನುವುದು ನೆನಪಿರಲಿ. 'ನೆನಪಿರಲಿ' ಚಿತ್ರದ ಹಾಡು ನಮ್ಮ ಮನಸ್ಸು ಗುಣು ಗುಣಿಸುವಾಗ 'ಮು.ಮಳೆ 'ಆ ಜಾಗವನ್ನು ಅಕ್ರಮಿಸಿದೆ. ಮುಂದೆ.....
Any way ಮುಂಗಾರು ಮಳೆ ಆಪ್ತವಾಗಿದೆ , ಗಣೇಶ್ ನಂಥ ಕಲಾವಿದರ ತಾಕತ್ತನ್ನು, ಭಟ್ಟ, ಕೃಷ್ಣ ಅನಾವರಣಗೊಳಿಸಿದ್ದಾರೆ. ಜಲಪಾತದ ಎತ್ತರ ಪ್ರೀತಿಯ ಎತ್ತರವನ್ನು ಆಳವನ್ನು ತೋರಿಸಿದೆ. ಚಿತ್ರವನ್ನು ಇನ್ನಷ್ಟು ಸಲ ನೋಡುವ ಹಂಬಲ ನನಗಿದೆ, ನಿಮಗೆ .....
ಸಲಾಂ to ಮುಂಗಾರು ಮಳೆ
ಕೊನೆ ಹನಿ
#. ಮಳೆ ಬೀಳುವ ಮುನ್ನವೇ ಮಳೆ ಅನುಭವ ನೀಡುವ ಈ ಚಿತ್ರ ಮನಸ್ಸಿಗೆ ಬಹಳ ಆಪ್ತವಾಗುತ್ತದೆ.ಮನಸ್ಸು ಹಗುರಾಗುತ್ತದೆ, ಚಿತ್ರ ನೋಡಿದಾಗ ನನ್ನ -ಗೆಳೆಯರ ಹಳೆಯ ಪ್ರೇಮ ಪ್ರಸಂಗ ನೆನಪಾಗುತ್ತದೆ.
#. ಬೆಂಗಳೂರಿಗೆ ವಾಪಾಸ್ ಹೊರಟ ನಾಯಕ ಮತ್ತೆ ನಾಯಕಿಯ ಛಾಲೆಂಜ್ ಮಾತಿನಿಂದ ಮಡಿಕೇರಿ ಕಡೆಗೆ ಕಾರು ತಿರುಗಿಸುವಾಗ ನನಗೆ ನಾನೇ ನೆನಪಾದೇ. ನನ್ನ ಹಠದ ಛಾಲೆಂಜ್ ನ ಕಾರಣಕ್ಕೆ ಪ್ರೀತಿಯನ್ನು ಕಳೆದುಕೊಂಡವನು.
#. ನಾಯಕಿ ಸಂಜನಾ ಗಾಂಧಿ ಮಾತ್ರ ನನಗೆ ಇಷ್ಟವಾಗಲೇ ಇಲ್ಲ. ಅಭಿನಯಕ್ಕಿಂತಲೂ ಏನೋ ಕೊರತೆ ನನಗೆ ಕಾಣಿಸುತ್ತಿತ್ತು. ಅದಕ್ಕಿಂತಲೂ ಆಕೆಯ ಗೆಳೆತಿ ಚೆನ್ನಾಗಿದ್ದಾಳೆ. ಗೆಳತಿಯ ಪರಿಚಯವಿದ್ದರೆ ನನಗೆ ದಯವಿಟ್ಟು ತಿಳಿಸಿ ನನಗೂ ಮುಂಗಾರಿನ ಮಳೆಯಲಿ ಮೀಯುವ ಹಂಬಲವಿದೆ.