Monday, October 20, 2008

ಬ್ಲಾಗಬ್ಬರ




ಮೊನ್ನೆ ನಮ್ಮ ಶ್ರೀ ನಿಧಿ ಎಫ್.ಎಂ ಚಾನೆಲ್ ಒಂದಕ್ಕೆ ಸಂದರ್ಶನ ಕೊಡಲು ಹೋಗಿದ್ದ. ಅದು ಬ್ಲಾಗುಗಳ ಬಗ್ಗೆ ಎನ್ನುವ ಕಾರಣಕ್ಕೆ ಹೆಮ್ಮೆಯಿಂದ ನಾನು ಇಲ್ಲಿ ದಾಖಲಿಸುತ್ತಿದ್ದೇನೆ.ಹಿಂದೆ ಪ್ರಣತಿ ತಂಡ ಬ್ಲಾಗರುಗಳ meet ಆಯೋಜಿಸಿದ್ದ ಸಂದರ್ಭದಲ್ಲಿ ಪ್ರಚಾರ ಕೊಡುವುದು ಹೇಗೆ ಎಂದು ತಲೆ ಕೆಡಿಸಿಕೊಂಡಿದ್ದಾಗ ಹೊಳೆದದ್ದು ಇದೇ ಎಫ್.ಎಂ.... ನಮ್ಮ ಯೋಚನೆ workout ಆಗಿತ್ತು ಕೂಡಾ. ಕನ್ನಡ ಬ್ಲಾಗುಗಳ ಬಗ್ಗೆ ಮಾತಾಡಿ ಅಂದೇ ಇದೇ ಶ್ರೀನಿಧಿ ಮಿಂಚಿದ್ದ. ಹಲವರ ಕೆಂಗಣ್ಣೆಗೂ ಗುರಿಯಾಗಿದ್ದ.

ಈಗಾಗಲೇ ಸಾಕಷ್ಟು ಕನ್ನಡದ ಪತ್ರಿಕೆಗಳು ಬ್ಲಾಗುಗಳ ಬಗ್ಗೆ ದಾಖಲಿಸಿದೆ.ಆದರೆ ವಿದ್ಯುನ್ಮಾನ ವಾಹಿನಿಗಳು ತಮ್ಮದೇ ಆದ ಕಾರಣಕ್ಕೆ ಮಿತಿಯಲ್ಲಿ ಕೆಲಸ ಮಾಡಿವೆ. ಆದರೆ ಎಫ್.ಎಂ ಗಳು ಸುಮ್ಮನಿತ್ತು. ಅವುಗಳನ್ನು ಎಚ್ಚರಿಸಿದ್ದು ಇದೇ ತುಂತುರು ಹನಿ ಎಂಬುದು ಕನ್ನಡದಲ್ಲಿ ಕುಟ್ಟುವ ಬ್ಲಾಗರುಗಳಿಗೆ ಹಿರಿಮೆಯೇ ಸರಿ. ನನ್ನ ಮಾತುಗಳು ಕೆಲವರಿಗೆ ಇಷ್ಟವಾಗದಿರಬಹುದು. ಹಾಗಂತ ನಾನು ಅವರಿಗೆ ಬಕೆಟ್ ಹಿಡಿಯಲು ಸಿದ್ದನಿಲ್ಲ. ಯಾಕೆಂದರೆ ನಾನು D.S.S. ( ದಲಿತ ಸಂಘರ್ಷ ಸಮಿತಿಯಲ್ಲ ) - ಡಿ.ಎಸ್. ಶ್ರೀನಿಧಿಗೆ ಬಕೆಟ್ ಹಿಡಿಯುತ್ತಿಲ್ಲ. ಕನ್ನಡದ ಬ್ಲಾಗುಗಳು ಸದ್ದಿಲ್ಲದೆ ಸುದ್ದಿಯಾಗುತಿದೆಯಲ್ಲ ಅದು ನನಗೆ ಖುಷಿ ತಂದಿರುವುದು. ನಾನು ಕಂಡ ಹಾಗೇ ಅದೆಷ್ಟೋ ಮಂದಿ ಬ್ಲಾಗರುಗಳಾಗುತ್ತಿದ್ದಾರೆ.ತಮ್ಮೊಳಗಿನ ಬರಹಗಾರನನ್ನು ಬರಹ ತಂತ್ರಾಂಶ ಬಳಸಿ ಎಚ್ಚರಿಸುತ್ತಿದ್ದಾರೆ.

ಇದಕ್ಕಿಂತ ಹೆಚ್ಚು ಏನು ಬೇಕು ಹೇಳಿ.

ಶ್ರೀನಿಧಿ ಆವಾಂತರ

# ಟಿ.ವಿ. ವಾಹಿನಿಯಲ್ಲಿ D.S.S. ಕೆಲಸ ಮಾಡುವುದರಿಂದ ಚಾನೆಲ್ ಸಂದರ್ಶನ ಎಂದ ತಕ್ಷಣ ಅದು ಎಫ್.ಎಂ ಎಂಬುದನ್ನು ಮರೆತು ಮೇಕಪ್ ಮಾಡಿಕೊಂಡೇ ಸಂದರ್ಶನಕ್ಕೆ ಹೋಗಿದ್ದರಂತೆ. ( ಸುದ್ದಿ ದೃಢಪಟ್ಟಿಲ್ಲ - just flash news )

# 8.30 ಕ್ಕೆ ಸಂದರ್ಶನ ಎಂದು ಹೆಚ್ಚಿನ ಮಂದಿ ಕಿವಿಗೆ ಇಯರ್ ಫೋನ್ ಇಟ್ಟು ಕಾದಿದ್ದರು. ಆದರೆ ಅಷ್ಟು ಹೊತ್ತಿಗೆ
R.J. Srinidhi (ಆರ್.ಜೆ.ತಾತ್ಕಾಲಿಕ)ಯವರು ೯೧.೧ ಲಾಂಜ್ ಲ್ಲಿ ಟೀ ಕುಡಿಯುತ್ತಿದ್ದರು. ಅಂದು ಶನಿವಾರ ಎಫ್.ಎಂ ಕಚೇರಿಯಲ್ಲಿ ಜನ ಕಡಿಮೆ ಇತ್ತು.(NOTE: ಮುಂದಿನ ಕಾರ್ಯಾಚರಣೆ ಕಿವಿಗೆ ಇಯರ್ ಫೋನ್ ಇಟ್ಟು ಕಾದಿದ್ದ ಮಂದಿಯದ್ದು.)

any way..... thanks D.S.S

ಕೊನೆಗೊಂದು ಮಾತು ನಮ್ಮ ಸಾಧನೆಗೆ ನಾವು ಬೆನ್ನು ತಟ್ಟುತ್ತಿಲ್ಲ. ಬದಲಿಗೆ ವಾಸ್ತವವನ್ನು ಹೇಳಿದ್ದೇನೆ. ಅಂದ ಹಾಗೇ ನಮ್ಮದೇ ಕಚೇರಿಯ ಹುಡುಗಿಯೊಬ್ಬರು ಬ್ಗಾಗು ಆರಂಭಿಸಲು ಲೈಸೆನ್ಸ್ ಪಡೆದಿದ್ದಾರೆ. ಕೆಲಸ ಪ್ರಾರಂಭವಾಗಿದೆ.ಚಲನಚಿತ್ರ ಅವರ ನೆಚ್ಚಿನ ಕ್ಷೇತ್ರ ಹಾಗಾಗಿ ಅವರು ಅದರ ಸುತ್ತವೇ ಅನುಭವ, ಟೀಕೆ-ಟಿಪ್ಪಣಿ ಬರೆಯುತ್ತಿದ್ದಾರೆ. ಚೆನ್ನಾಗಿದೆ ನೀವು ವಿಸಿಟ್ ಮಾಡಿ swapnahp.blogspot.com

7 comments:

sapna said...

ಹೂಂ ನಿಜ, ಶ್ರೀನಿಧಿ ಫುಲ್ zoom ನಲ್ಲಿ ಎಲ್ಲರಿಗೂ ಎಫ್.ಎಮ್ ಕೇಳೋಕೆ ಹೇಳಿದ್ರು. ಕನ್ನಡ ಭಾಷೆ ಅವನತಿಯತ್ತ ಸಾಗಿರುವ ಭಾಷೆಗಳ ಸಾಲಿಗೆ ಸೇರಿರುವುದು ಅದೆಷ್ಟು ಮಂದಿಗೆ ಗೊತ್ತೋ ಇಲ್ಲವೋ? ಆದ್ರೆ ನಮ್ಮ ಅದೆಷ್ಟೋ ಯುವ ಮನಸ್ಸುಗಳು ಸಿಹಿಸಿಹಿಯಾಗಿ ಕನ್ನಡದಲ್ಲಿ ಬ್ಲಾಗಿಗರಾಗಿರುವುದು, ಆಗುತ್ತಿರುವುದು ನನ್ಗಂತು ಸಖತ್ ಖುಷಿ ಕೊಡ್ತಾ ಇದೆ. ಅದನ್ನು ಎಫ್.ಎಮ್ ವರೆಗೂ ಕೊಂಡೊಯ್ದು ಕನ್ನಡ ಡಿಂಡಿಮ ಬಾರಿಸಿ ಬಂದ ಶ್ರೀನಿಧಿ ಅವ್ರೆ ನಿಮಗೆ ಶುಭಾಷಯಗಳು. ಗೆಳೆಯನ ಸಾಧನೆಗೆ ಉತ್ಸಾಹ ತುಂಬುತ್ತಿರುವ ನಿಮಗೂ ಸಹ.

ತೇಜಸ್ವಿನಿ ಹೆಗಡೆ said...

೮.೩೦ಕ್ಕೆ ಪ್ರೋಗ್ರಾಂ ಶುರು ಎಂದು ಹೇಳಿದ್ದರಿಂದ Reminder ಇಟ್ಕೊಂಡು ಕೇಳಿದೆ ಆದ್ರೆ R.J. Shreenidhi ಬಂದಿದ್ದು ಮಾತ್ರ ೯.೧೫ಕ್ಕೆ :) ಅವರ ಈ ಒಂದು ಉತ್ಸಾಹ ಹಾಗೂ Creativity ಯನ್ನು ಮೆಚ್ಚಲೇಬೇಕು.

sunaath said...

ಎಲ್ಲಿ, ಸಪ್ನಾರವರ blog ತೆರೀತಾನೇ ಇಲ್ಲ?

damodara dondole said...

dssgagi thindi thinnuvagalu givigittu kelidde... Adre start agiddu late..hadu matu addnindagi sittu bandittu..adru progrmme chennagittu

Jagali bhaagavata said...

ರಾಧಾ,
ಸಪ್ನಾರ ಬ್ಲಾಗ್ ಲಿಂಕ್ update ಮಾಡಿ. ಬಹುಶಃ ನೀವು ಅದನ್ನ swapnahp.blogspot.com/ ಅಂತ ಮಾತ್ರ ಕೊಟ್ಟಿರ್ಬೇಕು. ಅದನ್ನ http://swapnahp.blogspot.com/ ಮಾಡಿ.

ವಿ.ರಾ.ಹೆ. said...

ಟಿ.ವಿ. ವಾಹಿನಿಯಲ್ಲಿ D.S.S. ಕೆಲಸ ಮಾಡುವುದರಿಂದ ಚಾನೆಲ್ ಸಂದರ್ಶನ ಎಂದ ತಕ್ಷಣ ಅದು ಎಫ್.ಎಂ ಎಂಬುದನ್ನು ಮರೆತು ಮೇಕಪ್ ಮಾಡಿಕೊಂಡೇ ಸಂದರ್ಶನಕ್ಕೆ ಹೋಗಿದ್ದರಂತೆ.

HA HA HA .. :D

ಮಿಥುನ ಕೊಡೆತ್ತೂರು said...

ಶ್ರೀನಿಧಿ ಬಗ್ಗೆ ಹೆಮ್ಮೆಯೆನಿಸುತ್ತದೆ