Saturday, July 21, 2007

ನಿರೀಕ್ಷೆಗಳೇ ಹೀಗೆ

ಮದರಂಗಿ ಹಚ್ಚುತ್ತಾಳೆ ಹುಡುಗಿ
ಪ್ರೀತಿ ಕಟ್ಟುತ್ತಾಳೆ
ಅಂಗೈಯಲ್ಲಿ ಚಿತ್ತಾರ
ಕನಸಿನದ್ದೆ ರೇಖೆ
ಅಂಗೈಯಲ್ಲಿ ಜಾಗವಿಲ್ಲ
ದೂರದ ದಾರಿಗೆ ಕೊನೆಯಿಲ್ಲ
ದೃಷ್ಟಿ ಸಾಗುತ್ತಿದೆ - ಸಾಗುತ್ತದೆ
ಅಂಗೈಯಲ್ಲಿ ಮೊಡಿದ ಚಿತ್ತಾರ ನೋಡುವ ಬಯಕೆ.


ಮನಸ್ಸಿನಲ್ಲಿ ಸಾವಿರ ಚಿತ್ತಾರ
ಅದೆಷ್ಟೋ ನಿರೀಕ್ಷೆಗಳು
ದಿನಾ ಇದೇ ಪಾಡು
ನಿರೀಕ್ಷೆಗಳನ್ನು ಹೊತ್ತು ಸಾಗುವುದು

ಮದರಂಗಿ ಕೆಂಪೇರುತ್ತಿದೆ
ನಿರೀಕ್ಷೆಗಳು ಮಾತ್ರ ಕೆಂಪೇರಿಲ್ಲ
ಮಧ್ಯರಾತ್ರಿ ಕಳೆದರೂ
ಕನಸು ಬಂಡಿ ಹೂಡಿಲ್ಲ - ಕಣ್ಣ ರೆಪ್ಪೆ ಮುಚ್ಚಿಲ್ಲ
ದಾರಿಯಲ್ಲಿಲ್ಲೊಂದು ನೆರಳು ಕಾಣದೆ
ಕನಸು ಕಾಣುವುದಾದರೂ ಹೇಗೆ

8 comments:

minugutaare said...

bHAARI nireekshegalannittiddeeranta tildu santasa aaytu.

Anonymous said...

ತುಂಬಾ Thank u.........

ಅಂದ ಹಾಗೆ ತಮ್ಮ ಪರಿಚಯವೇ ಹೇಳಿಲ್ಲ

Anonymous said...

It's more like a small child's wish to make the world heaven! It's wonderful. I don't know if you've read this new kind of old story called Great expectations, by Charles Dickens! that's what this reminds me off!
Good luck.. and do see:
--------------------------------------------------------
If you think you need to type in Kannada, please use quillpad.in/kannada/ It's going to
make your life so easy, you'll think computers were made for Kannada. Try Quillpad. Put up lot
of blog articles and anything else you may want to do...

dinesh said...

niriiksheye baduku alva...?

ವಿನಾಯಕ ಭಟ್ಟ said...

ಮದರಂಗಿ ಕೆಂಪಾಗಿಲ್ಲ ಅಂತ ನಿದ್ರೆ ಮಾಡದೆ ಇದ್ದರೆ ಕಣ್ಣು ಕೆಂಪಾಗುತ್ತೆ.
ಕವನ ಚೆನ್ನಾಗಿದೆ.

ರಾಧಾಕೃಷ್ಣ ಆನೆಗುಂಡಿ. said...

reply madida ellarigi thanks

Anonymous said...

ಕವನ ಚೆನ್ನಾಗಿದೆ.
ದಾರಿಯಲ್ಲಿಲ್ಲೊಂದು ನೆರಳು ಕಾಣದೆ
ಕನಸು ಕಾಣುವುದಾದರೂ ಹೇಗೆ
ಹಿತ ನೀಡಿದ ಸಾಲುಗಳು. ಯಾಕೋ ಬರೆಯೋದನ್ನೇ ನಿಲ್ಲಿಸಿದ್ದೀರಾ ? ಹೇಗೆ?
ನಾವಡ

ಶಾಂತಲಾ ಭಂಡಿ (ಸನ್ನಿಧಿ) said...

ರಾಧಕೃಷ್ಣ ಅವರೆ...
ತುಂಬ ಚೆನ್ನಾಗಿದೆ ಕವನ. ಕೊನೆಯ ಪ್ಯಾರಾ ಇನ್ನಷ್ಟು ಇಷ್ಟ ಆಯ್ತು.