Sunday, April 22, 2007

ಮಳೆಯ ನೆನಪುಗಳ ಹಿಂದೆ...

ದಿನ ಯಾವತ್ತು ಇದ್ದ ಹಾಗೇ ಇರಲ್ಲ. ಕನಸುಗಳ ಹಾಗೇ... ಕವನದಂತೆ. ಕಾಗದದ ದೋಣಿಯಂತೆ ಸಾಗುತ್ತಲೆ ಇರುತ್ತದೆ. ನನ್ನ ಬದುಕು ಅಷ್ಟೇ. ಕನಸುಗಳೆಂದರೆ ಸಾಕು ಪಾತರಗಿತ್ತಿಯಾಗುತ್ತಿದ್ದೆ.ಪ್ರೀತಿ, ಕನಸುಗಳೆಂದರೆ ಸಾಕು ನನ್ನ ನಾ ಎಲ್ಲೋ ಕಳೆದುಕೊಳ್ಳುತ್ತಿದೆ. ಒಂಟಿತೆನ, ಆತ್ಮೀಯ ಗೆಳೆಯರ ಮಧ್ಯೆ ಬದುಕಿದ್ದ ನನಗೆ ಆಸರೆಯಾಗಿದದ್ದು ಕನಸುಗಳು. ಕನಸುಗಳೆಂದರೆ ನನ್ನ ಪಾಲಿಗೆ ಕೇವಲ ರಾತ್ರಿ ಮಲಗಿದಾಗ ಮನಸ್ಸು, ಕಣ್ಣು ಗಳ ಮಧ್ಯೆ ಆಗುವ ಮಧುರ ಅನುಭವ ಮಾತ್ರವಲ್ಲ. ಅದು ಎಚ್ಚರವಾಗಿದ್ದಾಗ ನನ್ನ ಜಾಗೃತಗೊಳಿಸುವ ಶಕ್ತಿಯಾಗಿತ್ತು, ನನ್ನ ಕನಸುಗಳಿಗೆ ಒಂದು ಚೌಕಟ್ಟು ಹಾಕಿ ಕೊಟ್ಟವಳು ನಾನು ಪ್ರೀತಿಸುವ ಪುಟ್ಟ.ನನ್ನ ಕನಸಿಗೆ ಆಸರೆಯಾಗಿ ನಿಂತು, ನನ್ನ ತಪ್ಪುಗಳನ್ನು ಕ್ಷಮಿಸಿ, ನನ್ನ ಕೋಪಗಳಿಗೆ ಮತ್ತೆ ಕಾಲವನ್ನೇ ಹೊಣೆಯನ್ನಾಗಿ ಮಾಡಿದಾಕೆ. ಅಲ್ಲಿ ಪ್ರೀತಿಯ ವ್ಯಾಪ್ತಿ ಬೆಳೆದಿತ್ತು ಕನಸಿನ ಕನಸು ಕೂಡಾ.........
ಅದಕ್ಕೆ ಸೆಲ್ಯೂಟ್ ಟೂ PUTTA

ಮೊನ್ನೆಯಿಂದ ಬೆಂಗಳೂರಿನಲ್ಲಿ ಮಳೆ ಸುರಿಯುತ್ತಿದೆ. ಮಳೆಯೆಂದರೆ ಸಾಕು ಅದೇನೋ ಖುಷಿ.... ನನ್ನೂರಿಗೆ ಮೊನ್ನೆ ಹೋಗಿದ್ದಾಗಲೂ ಅಷ್ಟೇ ಜೋರು ಮಳೆ. ಮತ್ತೆ ನನ್ನ ಬಾಲ್ಯದ ನೆನಪುಗಳಲ್ಲಿ ಮಿಂದೆ.ಕೆಸರಿನ ಆಟ, ಕಾಗದದ ದೋಣಿ, ಮಳೆಯೊಂದಿಗೆ ಜೋರು ಗಾಳಿ ಬಂದರೆ ಮಾವಿನ ಮರದಡಿಗೆ ಓಟ... ಹೀಗೆ. ಆದರೆ ಈಗ ಬದುಕೇ ಬದಲಾಗಿದೆ. ಮಳೆ ಬಂದರೆ ಬರೀ ನೆನಪುಗಳು ಬಂಡಿ ಹೂಡುತ್ತವೆ.ನನ್ನ ಪುಟ್ಟ ಮತ್ತೆ ಕವನಕ್ಕೆ ಸಾಥ್ ನೀಡುತ್ತಾಳೆ.ನನ್ನ ತಂಗಿ ಮತ್ತೆ ಮಾವಿನ ಹಣ್ಣು, ಕಾಗದದ ದೋಣಿ ಎಂಬ ಕಾರಣಕ್ಕೆ ತಾಯಿ ಕೈಯಿಂದ ಬೈಸಿಕೊಳುತ್ತಾಳೆ.

ಮಳೆಯಿಂದರೆ ಹೀಗೆ ಮತ್ತೆ ನೆನಪುಗಳು, ನೋವುಗಳು, ಆತಂಕಗಳು ಸಿಡಿಲು, ಮಿಂಚು ಬದುಕಿಗೆ ಹತ್ತಿರ ಅನ್ನಿಸಿಬಿಡುತ್ತದೆ. ಆದರೆ ನನಗೆ ಈ ಎಲ್ಲವನ್ನೂ ತಡೆಯಲಾಗಲಿಲ್ಲ. ಮೊನ್ನೆ ಮಳೆಯ ದಿವಸ ರಾತ್ರಿ ಒದ್ದೆಯಾಗಿಯೇ ಬಿಟ್ಟೆ. ಅವತ್ತು ನನ್ನಲ್ಲಿ ಖುಷಿ ಇತ್ತು. ಆದರೆ ಇವತ್ತು ಈ ಕ್ಷಣ ಬರೀ ಎದೆಯೊಳಗೆ ಭಾರವಿದೆ.

ಮಳೆ ಬಂತು ಮಳೆ ಹಾಡು ನೆನಪಿಸಿಕೊಳ್ಳಿ

ಎನನಿಸಿತು ಹೇಳಿ

No comments: