ಮಾತನಾಡ ಬೇಡ ಗೆಳತಿ
ಮಲಗಿದೆ ತೊಟ್ಟಿಲಲ್ಲಿ ಕೂಸು
ಇನ್ನು ಎಚ್ಚರವಾದರೆ
ಮತ್ತೆ ಮಲಗುವುದಿಲ್ಲ
ನೀನು ಮಾತನಾಡದಿದ್ದರೆ
ಮತ್ತೆ ಎಚ್ಚರವಾಗುವುದಿಲ್ಲ
ನನಗೂ ಬೇಕಾದುದು ಅದೇ
ಇನ್ನು ಅದು ಎಚ್ಚರವಾಗಬಾರದು
ಹೇಳಿದೆನಲ್ಲವೇ!
ಎದ್ದರೆ ಮಲಗುವುದಿಲ್ಲ
ಮಲಗಿಸಲಾಗುವುದಿಲ್ಲ
ನಿನ್ನಿಂದ ಹುಟ್ಟಿದ ಕೂಸು
ನೀನೇ ಬಿಟ್ಟು ಹೋದ ಕೂಸು
ಸುಮ್ಮನಿರು ಗೆಳತಿ ಮೌನದಲೇ ಮೇಣವಾಗು
ಕತ್ತಲಲ್ಲಿ ಕರಗಿ ಹೋಗು. ನಮ್ಮಿಬ್ಬರ ಕೂಸಿಗಾಗಿ
3 comments:
saKhattaGide...!!!
ಪ್ರೀತಿಯೆಂಬ ಸುಂದರ ಕೂಸನ್ನು ಬಿಟ್ಟುಹೋಗೋ ಹಾಗೇ ಹೇಗಾಯ್ತು :(
ಅದು ನಿಜನೇ..ಎದ್ದರೆ ಮಲಗಿಸುವುದು ಕಷ್ಟ
BEAUTIFUL MAN.......
Post a Comment