www.navilugari.blogspot.com
ಸುಮ್ಮನೆ ಯಾಕೆ ವರಿ ಮಾಡ್ತೀರಾ? ಪ್ರೀತಿಯೆಂದರೆ ಎನ್ನುವುದಕ್ಕೆ ಸಿಂಧು ಸೇರಿದಂತೆ ಅನೇಕ ಮಿತ್ರರರು ಪ್ರೇಮಿಗಳ ದಿವಸ ಬ್ಲಾಗನ್ನು ಪೂರ್ತಿ ರಕ್ತಮಯ ಮಾಡಿದ್ದೀರಿ ತಾನೇ. ಇವತ್ತು ನಾನು ಬರೆಯುತ್ತೇನೆ.
ಪ್ರೀತಿ ಎಂದರೆ ಹೊಳೆ, ಸಮುದ್ರ ಸಾಗರ ಅನ್ನುತ್ತಾರೆ. ಅದರೆ ಇದೊಂದು ಬಾವಿ ಕೂಡಾ ಹೌದು.ದುನಿಯಾ ನೋಡಿ ಗೊತ್ತಾಗುತ್ತೆ. ಮುಂಗಾರು ಮಳೆ ಮತ್ತು ದುನಿಯಾನ ಜೊತೆಯಲ್ಲಿರಿಸಿ ನೋಡಿ. ಇಬ್ಬರೂ ಗೆಳೆಯರ ಚಿತ್ರ ಹೇಗೆ ಗೆದ್ದಿದೆ ಎಂದು ನಿಮಗೆ ಅನ್ನಿಸಬಹುದು.ಎರಡೂ ಚೆನ್ನಾಗಿದೆ ಎಂದು ನೀವು ಅನ್ನಬಹುದು ಆದರೆ ಕಥೆಗೆ ಹೋಲಿಸಿಕೊಂಡರೆ ದುನಿಯಾ ನಮ್ಮ ಪಕ್ಕದ ಮನೆಯ ಹುಡುಗಿಯದ್ದೊ/ಹುಡುಗನದ್ದೊ ಅನ್ನುವಂತಿದೆ. ಮುಂಗಾರು ಮಳೆ ಅದರೊಳಗಿನ ಕೆಲಸ,ಹಾಡಿನ ಕಾರಣಕ್ಕೆ ಭಿನ್ನವಾಗಿದೆ,ಆದರೆ ಪ್ರೀತಿಯ ಮಟ್ಟಿಗೆ ಬಂದರೆ ದುನಿಯಾನದ್ದೇ ಮೇಲುಗೈ.
ಪ್ರೀತಿ ಇಷ್ಟಕ್ಕೆ ನಿಲ್ಲುವುದಿಲ್ಲ. ಮುಂಗಾರು ಮಳೆ ನಿಲ್ಲುತ್ತದೆ ಹಾಗೆ ಪ್ರೀತಿಯೂ ಅಷ್ಟೇ. ನಿಮ್ಮನ್ನೂ ನೀವೇ ನೆನಪಿಸಿಕೊಳ್ಳಿ ಕಾಲೇಜಿನಲ್ಲಿದ್ದಾಗ ಪ್ರೀತಿಸಿದ ಹುಡುಗನೋ ಹುಡುಗಿಯೋ ಈಗ ಸಿಕ್ಕಾಗ ನಿಮ್ಮ ಮನಸ್ಸಿನಲ್ಲಿ ಏನೂ ಇರುವುದೇ ಇಲ್ಲ. ಮಳೆ ಕೊಚ್ಚಿ ಹೋದ ತರೆಗೆಲೆಯಂತೆ ಪ್ರೀತಿ ಕೊಚ್ಚಿ ಹೋಗಿರುತ್ತದೆ. ನಿಮಗೊಂದು ಸವಾಲಿದೆ.ಪ್ರಥಮ ಪ್ರೀತಿಯಲ್ಲೇ ಜಯಗಳಿಸದವರನ್ನ ನನಗೆ ತೋರಿಸಿ.
ನೀನು ಇಲ್ಲದೆ ನಾನಿಲ್ಲ ಎಂದು ರಕ್ತದಲ್ಲಿ ಲವ್ ಲೆಟರ್ ಬರೆದ ಹುಡುಗಿ, ಗೆಳೆಯನನ್ನೇ ತೆಕ್ಕೆಯಲ್ಲಿ ಬರ ಸೆಳೆದು ಮುತ್ತಿಕ್ಕಿದ ಹುಡುಗಿ ಗೆಳೆಯನನ್ನೇ ನೀನು ಸರಿಯಿಲ್ಲ ಎಂದು ನಡೆದಿದ್ದಳು. ಹುಡುಗ ಹಲವು ದಿನ ಕಂಗಲಾಗಿದ್ದ ನೋವು ಉಂಡಿದ್ದ ಈಗ ಇಬ್ಬರೂ ಆರಾಮವಾಗಿದ್ದರೆ. ಬೇರೆ ಬೇರೆಯವರನ್ನು ಪ್ರೀತಿಸುತ್ತಿದ್ದಾರೆ. ನೀವೇ ನಿಮ್ಮ ಬದುಕಿನ ಸುತ್ತಾ ಕಣ್ಣಾಡಿಸಿ, ನಿಮ್ಮ ಗೆಳೆಯರ/ ಗೆಳತಿಯರ ಬಗ್ಗೆ ಒಂದು Flash Back ಗೆ ಹೋಗಿ, ನಾನು ಹೇಳಿದ್ದು ಸುಳ್ಳಾಗಿದ್ದರೆ ಹೇಳಿ.
ಪ್ರೀತಿಗೆ ಮಿತಿಯಿಲ್ಲ, ಅಡ್ಡಗೋಡೆಯಿಲ್ಲ ಇದು ನಿಜ ಆದರೆ ಪರಿಧಿಯೂ ಇಲ್ಲ, ಮೊದಲ ದಿನ ಮೌನ ಆಳುವೇ ತುಟಿಗೆ ಬಂದಂತೆ
ಭಾವಗೀತೆಯನ್ನು ನೆನಪಿಸಿಕೊಳ್ಳಿ. ಹಾಗೇ ಕೆ.ಎಸ್. ನ ರವರ ’ಹೂ ಅರಳುವ ಮುನ್ನ, ಹಕ್ಕಿ ಹಾಡುವ ಮುನ್ನ ಮೀನು ತುಳುಕುವ ಮುನ್ನ ’ ಹಾಡನ್ನು ಗುಣು ಗುಣಿಸಿ. ಒಂದು ಕ್ಷಣ ಏನು ಅನ್ನಿಸಿತು ಹೇಳಿ.ಬಹುಶ:
ನೆನಪೇ ಏಕೆ ಕಾಡುವೇ
ನೆನಪೆ ಬಿಡದೆ ಕಾಡುವೇ
ಮನಸ್ಸು ರಸ ನಿಮಿಷ ನೆನೆದು ಅದನ್ನೇ ಕನವರಿಸಿದೆ. ಎಂದೂ ನೀವು ಹಾಡಿರ ಬಹುದಲ್ಲ. ಇದೇ ಪ್ರೀತಿ.
ನಾನು ಅಷ್ಟೇ ಪ್ರೀತಿಯ ಸುತ್ತ ಬೆಳೆದವನು ಅದನ್ನು ಕಳೆದುಕೊಂಡು ಆ ನೋವನ್ನು ಮೆಟ್ಟಿ ನಿಂತವನು. ನೋವ ಗೋರಿಯ ಮೇಲೆಯೇ ನನ್ನ ವಿಜಯ ಪತಾಕೆಯನ್ನು ಹಾರಿಸಲು ನಿರ್ಧರಿಸಿದವನು. ಹೀಗಾಗಿಯೇ ನೆನಪು ಯಾಕೆ ಕಾಡುವೇ ಏನ್ನುವ ಸಾಲು ನನ್ನ ಕಾಡಿದ್ದು.
ಪ್ರೀತಿಯ ಬಗ್ಗೆ ಇನ್ನಷ್ಟು ಬರೆಯುತ್ತೇನೆ. ಅದಕ್ಕಿಂತಲೂ ಮುನ್ನ ನನ್ನ ಅಕ್ಕನ ಬಗ್ಗೆ ಬರೆಯಬೇಕು, ಸಾಧ್ಯವಾದರೆ ನನ್ನ ಅಕ್ಕ ಬರೆದ ಇಂಗ್ಲೀಷ್ ಕವನಗಳು ಇಲ್ಲಿದೆ ದಯವಿಟ್ಟು ಕಣ್ಣಾಡಿಸಿ - http://ashu-mahesh.blogspot.com
ನನ್ನದೇ ಕವನವಿದೆ ಓದಿ ಪ್ರತಿಕ್ರಿಯಿಸಿ. ಅದಕ್ಕೂ ಮುನ್ನ ನಾಳೆ ನನ್ನ ಗೆಳೆಯನೊಬ್ಬನ ಬಗ್ಗೆ ಬರೆಯಿತ್ತೇನೆ. ಅಮೇಲೆ ನನ್ನ ಅಕ್ಕ.ಮೊದಲು ಅಕ್ಕ ತಮ್ಮನ ಕವನ ಓದಿ
No comments:
Post a Comment