Wednesday, February 14, 2007

ಮುಂಗಾರು ಮಳೆ....... ನೆನೆದು ಬಂದೆ






ಬಹಳ ದಿನಗಳ ಬಳಿಕ ಚಿತ್ರಮಂದಿರದತ್ತ ಮುಖ ಹಾಕಿದ್ದೆ. ಮುಂಗಾರು ಮಳೆ ಸಿನಿಮಾ ಚೆನ್ನಾಗಿದೆ ಎಲ್ಲರೂ ಹೇಳುತ್ತಿದ್ದರು, ಆದರೆ ನೋಡಿರಲಿಲ್ಲ,ನಿನ್ನೆ ಸಹೋದ್ಯೋಗಿ ಗೆಳತಿ ಅಕ್ಕ ಶ್ರೀ... ಯ ಆಚಾನಕ್ ನಿರ್ಧಾರದಿಂದ ಮುಂಗಾರು ಮಳೆಗೆ ಆಚಾನಕ್ ಆಗಿ ಮೈ ಒಡ್ಡುವಂತಾಯಿತು.
ಬ್ಲ್ಯಾಕ್ ನಲ್ಲಿ ಟಿಕೇಟ್ ಖರೀದಿ ಮಾಡಿ ಒಳನುಗ್ಗಿದರೂ ಮೋಸವಾಗಲಿಲ್ಲ.

ಮಳೆ ಕಥೆಯಾಗುತ್ತದೆ, ಕವಿತಯಾಗುತ್ತದೆ, ಮನಸ್ಸಿಗೆ ಮುದ ನೀಡುತ್ತದೆ ಜೊತೆಗೆ ಕಣ್ಣೀರು ತರಿಸುತ್ತದೆ ಎಂದು ನಮಗೆ ಗೊತ್ತೆ ಇದೆ. ಆದರೆ ಮುಂಗಾರು ಮಳೆ ಸುಡುವ ರೀತಿ ಭಿನ್ನ ಎಂಬುದನ್ನು ಈ ಚಿತ್ರ ತೆರೆದಿಟ್ಟಿದೆ. ಕಥೆಯನ್ನು ನೋಡಿದರೆ ಬಾಲಿಶಾ ಅನ್ನಿಸಬಹುದು. ಆದರೆ ಕಥೆಯನ್ನು ಹೆಣೆದ ರೀತಿ ಸಾಕಷ್ಟು ಮುದ ನೀಡುತ್ತದೆ. ಮದುವೆ ಗೊತ್ತಾದ ಹುಡುಗಿ ಈ ರೀತಿ ಮನಸ್ಸು ಬದಲಾಯಿಸಲು ಸಾಧ್ಯವೇ ಎನ್ನುವ ಪ್ರಶ್ಣೆ ನಮ್ಮ ಮುಂದೆ ಉಧ್ಬವವಾಗುತ್ತದೆ. ಆದರೆ ಪ್ರೀತಿಗೆ ಈ ಶಕ್ತಿ ಇದೆ ಅನ್ನುವುದು ಪ್ರೀತಿಸಿದ ಎಲ್ಲರಿಗೂ ಗೊತ್ತಿದೆ.
ಚಿತ್ರವನ್ನು ಹಲವು ಕೋನಗಳಲ್ಲಿ ನಾವು ಗಮನಿಸ ಬೇಕು. ಹಿಂದೆ ನಾನು ಕಥೆಯ ಬೆನ್ನು ಹತ್ತುತ್ತಿದೆ. ಈಗ ತಾಂತ್ರಿಕ ಕೋನಗಳಿಂದಲೂ ನೋಡುವ ಹುಚ್ಚು ಬೆಳೆದಿರುವುದರಿಂದ ಚಿತ್ರ ಚೆನ್ನಾಗಿದೆ,ಈ ಕಾರಣಕ್ಕಾಗಿಯೇ ಜನ ಸಾಮಾನ್ಯನಿಗೂ ಚಿತ್ರ ಇಷ್ಟವಾಗುತ್ತದೆ.
ಕ್ಯಾಮಾರ ವರ್ಕ್ ಚೆನ್ನಾಗಿದೆ ಜಲಪಾತವನ್ನು ಮೈ ಜುಂ ಅನ್ನುವಂತೆ ತೋರಿಸಿದ್ದಾರೆ. ಸಂಭಾಷಣೆ ಕೂಡಾ ಅಷ್ಟೇ ತುಂಬಾ ಗ್ರಾಂಥಿಕವಾಗಿಲ್ಲ.ನಾವು ನೀವು ಮಾತಾನಾಡುವಂತಿದೆ.ಗಣೇಶ್ ಪ್ರೇಮ ಪ್ರಸಂಗವನ್ನು ವಿವರಿಸುವಾಗ ಆಪ್ತರಾಗಿತ್ತಾರೆ. ಹಾಸ್ಯವೂ ಆಷ್ಟೇ ಕೇವಲ ಚಡ್ಡಿ ಪ್ರಸಂಗ ನಮ್ಮನ್ನು ನಗಿಸುತ್ತದೆ.
ಮೊಲ( ದೇವದಾಸ್ ) ನಮ್ಮನ್ನು ಕಾಡುತ್ತದೆ.
ನಮ್ಮ ನಿಮ್ಮ ನಡುವಿನ ಪೇಮ ಕಥೆಯೊಂದು ತೆರೆಯ ಮೇಲೆ ಮೊಡಿದೆ ಆಷ್ಟೇ ಅಂದುಕೊಳ್ಳುವಷ್ಟು ಹತ್ತಿರವಾದ ಕಥೆಯಲ್ಲಿ ಇಷ್ಟವಾಗದ ಪಾತ್ರವೊಂದಿದೆ ( ಕೊನೆ ಹನಿ ನೋಡಿ)
ಹಾಡುಗಳು ಇಂಪಾಗಿದೆ, ಆದರೆ ಮತ್ತೊಂದು ಚಿತ್ರ ಬಂದಾಗ ಈ ಹಾಡು ಮರೆಯಾಗುತ್ತದೆ ಎನ್ನುವುದು ನೆನಪಿರಲಿ. 'ನೆನಪಿರಲಿ' ಚಿತ್ರದ ಹಾಡು ನಮ್ಮ ಮನಸ್ಸು ಗುಣು ಗುಣಿಸುವಾಗ 'ಮು.ಮಳೆ 'ಆ ಜಾಗವನ್ನು ಅಕ್ರಮಿಸಿದೆ. ಮುಂದೆ.....
Any way ಮುಂಗಾರು ಮಳೆ ಆಪ್ತವಾಗಿದೆ , ಗಣೇಶ್ ನಂಥ ಕಲಾವಿದರ ತಾಕತ್ತನ್ನು, ಭಟ್ಟ, ಕೃಷ್ಣ ಅನಾವರಣಗೊಳಿಸಿದ್ದಾರೆ. ಜಲಪಾತದ ಎತ್ತರ ಪ್ರೀತಿಯ ಎತ್ತರವನ್ನು ಆಳವನ್ನು ತೋರಿಸಿದೆ. ಚಿತ್ರವನ್ನು ಇನ್ನಷ್ಟು ಸಲ ನೋಡುವ ಹಂಬಲ ನನಗಿದೆ, ನಿಮಗೆ .....
ಸಲಾಂ to ಮುಂಗಾರು ಮಳೆ


ಕೊನೆ ಹನಿ
#. ಮಳೆ ಬೀಳುವ ಮುನ್ನವೇ ಮಳೆ ಅನುಭವ ನೀಡುವ ಈ ಚಿತ್ರ ಮನಸ್ಸಿಗೆ ಬಹಳ ಆಪ್ತವಾಗುತ್ತದೆ.ಮನಸ್ಸು ಹಗುರಾಗುತ್ತದೆ, ಚಿತ್ರ ನೋಡಿದಾಗ ನನ್ನ -ಗೆಳೆಯರ ಹಳೆಯ ಪ್ರೇಮ ಪ್ರಸಂಗ ನೆನಪಾಗುತ್ತದೆ.
#. ಬೆಂಗಳೂರಿಗೆ ವಾಪಾಸ್ ಹೊರಟ ನಾಯಕ ಮತ್ತೆ ನಾಯಕಿಯ ಛಾಲೆಂಜ್ ಮಾತಿನಿಂದ ಮಡಿಕೇರಿ ಕಡೆಗೆ ಕಾರು ತಿರುಗಿಸುವಾಗ ನನಗೆ ನಾನೇ ನೆನಪಾದೇ. ನನ್ನ ಹಠದ ಛಾಲೆಂಜ್ ನ ಕಾರಣಕ್ಕೆ ಪ್ರೀತಿಯನ್ನು ಕಳೆದುಕೊಂಡವನು.
#. ನಾಯಕಿ ಸಂಜನಾ ಗಾಂಧಿ ಮಾತ್ರ ನನಗೆ ಇಷ್ಟವಾಗಲೇ ಇಲ್ಲ. ಅಭಿನಯಕ್ಕಿಂತಲೂ ಏನೋ ಕೊರತೆ ನನಗೆ ಕಾಣಿಸುತ್ತಿತ್ತು. ಅದಕ್ಕಿಂತಲೂ ಆಕೆಯ ಗೆಳೆತಿ ಚೆನ್ನಾಗಿದ್ದಾಳೆ. ಗೆಳತಿಯ ಪರಿಚಯವಿದ್ದರೆ ನನಗೆ ದಯವಿಟ್ಟು ತಿಳಿಸಿ ನನಗೂ ಮುಂಗಾರಿನ ಮಳೆಯಲಿ ಮೀಯುವ ಹಂಬಲವಿದೆ.

Saturday, February 10, 2007

ಬೆರಗಿನಾಟ



ಈಗಷ್ಟೆ ಆದ ಮೈಥುನಕ್ಕೆ
ಗರ್ಭ ಕಟ್ಟಿದೆ.
ಯಾವುದೇ ಗುರುತಿಲ್ಲದ ಸಿಹಿ.
ಇನ್ನೆಷ್ಟು ದಿನ ಕಾಯಬೇಕು ಸಂಭ್ರಮಕ್ಕೆ
ಮೈಥುನದ ನೆನಪು ಒಂದು ಬಗೆ.
ಫಲಿತಾಂಶಕ್ಕೆ ಕಾಯುವ ಪರಿ ಮತ್ತೊಂದು ಬಗೆ

ಎರಡರೊಳಗಿನ ಬೆರಗು
ಅದರೊಳಗಿನ ಅಚ್ಚರಿ
ಮೊದಲ ಕೊನೆಯ ನೆನಪು
ಮೌನವಾಗಿ ಸಿಕ್ಕ ಸಿಹಿಗೆ
ಮತ್ತೊಂದು ಬಗೆಯ ಸಿಹಿಗೆ
ಮೌನವಾಗಿ ಕಾಯಬೇಕು
ಬೆಳವಣಿಗೆಯ ಬೆರಗುಗಳನ್ನು
ಅಚ್ಚರಿಯಿಂದ ಕಾಣಬೇಕು

ಸಣ್ಣ ಬೀಜಕ್ಕೆ ದೊಡ್ಡ ಮರ
ದೊಡ್ಡ ಮರದಲ್ಲಿ ಸಣ್ಣ ಬೀಜ
ಬೀಜ ಬಿದ್ದರೆ ಮತ್ತೊಂದು ಮರ
ದಿನ ಉರುಳಿದರೆ ಸಾಕು

ಮತ್ತೊಂದು ಬೆರಗಿನ ಆಗಮನ
ಮತ್ತೊಮ್ಮೆ ಮೈಥುನ
ಇದುವೇ ಸಂಭ್ರಮದ ಬೆರಗು.

Tuesday, February 6, 2007

ಟಿ.ವಿ. ನ್ಯೂಸ್ ಸುತ್ತ....











ಸುದ್ದಿ ಹಿನ್ನೆಲೆಯ ಹುಚ್ಚಿನಿಂದ ಬಂದ ನನಗೆ ಸುದ್ದಿಗಳ ಬಗ್ಗೆ ಬರೆಯುವುದು ಮಾತನಾಡುವು ಎಂದರೆ ಇಷ್ಟ. ಅದರಲ್ಲೂ. Visual Media ಬಗ್ಗೆ ನನ್ನದೇ ಆದ ಕನಸುಗಳಿವೆ. Print media ದಲ್ಲಿ ನನ್ನನ್ನು ತೊಡಗಿಸದೇ ಇರುವುದು ಇದಕ್ಕೆ ಕಾರಣವಿರಬಹುದು. ಆದರೆ ನಾನು ಇವತ್ತು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸಿರುವುದು. ದೃಶ್ಯ ಮಾಧ್ಯಮದ ಬಗ್ಗೆ ಅದರಲ್ಲೂ ಸುದ್ದಿಯ ಬಗ್ಗೆ.....
ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿರುವ ಅಜ್ ತಕ್, NDTV, CNN IBN ಹೀಗೆ ಹಲವು ಚಾನೆಲ್ ಗಳನ್ನು ಗಮನಿಸಿ ಇದರ ಜೊತೆಗೆ ಕರ್ನಾಟಕದ ETV, udya ಟಿವಿಯ ಸುದ್ದಿಗಳನ್ನು ಗಮನಿಸಿ ಅವು ನಮಗೆ ನೀಡುತ್ತಿರುವ ಸುದ್ದಿಗಳಲ್ಲಿನ ಭಿನ್ನತೆ ಅರಿವಾಗುತ್ತದೆ.ಇದು ಸಹಜವೇ.ಆದರೆ ಪ್ರಸ್ತುತ ಪಡಿಸುತ್ತಿರುವ ರೀತಿಯಲ್ಲೂ ಭಿನ್ನತೆಗಳಿದೆಯಲ್ಲ. ಇದು ನನಗೆ ಇಂದಿಗೂ ಅಚ್ಚರಿ ಉಂಟು ಮಾಡುತ್ತಿರುವುದು.
ಕನ್ನಡದ ವಾಹಿನಿಯ ಸುದ್ದಿ ವಿಭಾಗದಲ್ಲಿ ಅದರಲ್ಲೂ ವರದಿಗಾರರಾಗಿ ಕೆಲಸ ಮಾಡುವವರನ್ನು ಗಮನಿಸಿ -ಅಂದರೆ ಅವರು ಟಿ.ವಿ ಯಲ್ಲಿ ಕೊಡುವ PTC ಇರಬಹುದು, Phonein ಇರಬಹುದು ಎಲ್ಲವೂ ಒಂದು ತರ ನಾಟಕೀಯ ಅನ್ನಿಸಿಬಿಡುತ್ತದೆ, ವಿವರಗಳ ಕೊರತೆ ಎದ್ದು ಕಾಣುತ್ತದೆ. ( ಒಂದಿಬ್ಬರನ್ನು ಹೊರತು ಪಡಿಸಿ ) ಜೊತಗೆ live PTC ನೋಡಿದರೆ ಅಯ್ಯೋ ಅನ್ನಿಸುತ್ತದೆ. recording time ನಲ್ಲಿ ೨೦ ಟೇಕ್ ತೆಗೆದುಕೊಳ್ಳುವವರನ್ನು ನಾನು ನೋಡಿದ್ದೇನೆ. ನಮ್ಮಲ್ಲಿ PTC, Phonein ಕೊಡಬೇಕಾಗಿ ಬಂದಾಗ ಚೀಟಿಯಲ್ಲಿ ಬರೆದು, ಕಂಠಪಾಠ ಹೊಡೆಯುವ ಪರಿಸ್ಥಿತಿ. ಆದರೆ ಅನುಭ ಬೋಸ್ಲೆ ಅಂಥವರು ನಮ್ಮಲ್ಲಿ ಯಾಕೆ ಬರುತ್ತಿಲ್ಲ?.
ಅದೇ National ಚಾನೆಲ್ ನೋಡಿ. ಬಿಂದಾಸ್ ಅನ್ನಿಸಲ್ವ. ಜನ ಜಂಗುಳಿಯ ನಡುವೆ ಹುಡುಗಿಯರೇ ವಿವರಗಳನ್ನು ಒಪ್ಪಿಸುತ್ತಾರೆ.
ಕನ್ನಡದ ವರದಿಗಾರರಿಗೆ,ಗಾರ್ತಿಯರಿಗೆ ಏನಾಗಿದೆ.ಆದರೆ ಇತ್ತೀಚೆಗೆ ಬಂದಿರುವ TV9 ಈ ಕೊರತೆಯನ್ನು ಹೋಗಲಾಡಿಸಬಹುದು ಅಂದುಕೊಂಡಿದ್ದೇನೆ.ಇದರ ಮೊದಲ ಪ್ರಯತ್ನ ಚೆನ್ನಾಗಿದೆ.ನನ್ನ ಕನಸುಗಳು ಇಷ್ಟೇ ಕನ್ನಡದಲ್ಲೂ CNN IBN ನಂತೆ ವರದಿಗಾರರು, ಗಾರ್ತಿಯರು ಬರಬೇಕು ಎಂಬುದು.
ನಿಮ್ಮಲ್ಲಿ ಉತ್ತರಗಳಿದ್ದರೆ ಪ್ರತಿಕ್ರಿಯಿಸಿ

Saturday, February 3, 2007

ಪೇಪರ್ ಕಟ್ಟಿಂಗ್........... ಕವನದ್ದು.....



ಇದು ಉದಯವಾಣಿ ಮತ್ತು ಜನವಾಹಿನಿ ಪತ್ರಿಕೆಯಲ್ಲಿ ಪ್ರಕಟವಾದ ಕವನ.ಕುಟ್ಟಲು ಸೋಮಾರಿತನ ಅದಕ್ಕೆ ಇದನ್ನೇ ನಿಮ್ಮ ಬಳಿ ತಂದಿದ್ದೇನೆ.
ನೀವು ಕುಟ್ಟಲೇಬೇಕು ಎಂದು ಹೇಳಿದರೆ ಕುಟ್ಟುತ್ತೇನೆ.

ಹೋಲಿಕೆ




ಮಡಿಕೇರಿಗೆ ಕಳೆದ ವರ್ಷ ಹೋಗಿದ್ದಾಗ ಗೋಲ್ಡನ್ ಟೆಂಪಲ್ ನಲ್ಲಿ ತೆಗೆದ ಪೋಟೋ .. ಯಾಕೋ ಹೋಲಿಕೆ ಅನ್ನಿಸಲ್ವಾ?

Friday, February 2, 2007

ಹಳೆಯ ನೆನಪು ಎನ್ನುವ ರೋಗ...




ಇದು ಮಂಗಳೂರಿನಲ್ಲಿ ಇದ್ದ ಸಂದರ್ಭದಲ್ಲಿ ತೆಗೆದ ಪೋಟೋ.

ನೌಕದಳದ ವರ್ಷಾಚರಣೆ ಅಂಗವಾಗಿ ಪ್ರತೀ ವರ್ಷ ಪತ್ರಕರ್ತರನ್ನು ಸಮುದ್ರ ಮಧ್ಯಕ್ಕೆ ಕರೆದುಕೊಂಡು ಹೋಗಿ, ಅಣಕು ಯುದ್ಧ ಕಾರ್ಯಾಚರಣೆ ನಡೆಸುತ್ತಾರೆ. ಆ ಸಂದರ್ಭದ ನೆನಪಿದು. ಇದಕ್ಕೆ ಸಂಬಂಧ ಪಟ್ಟ ಇನ್ನು ಹಲವು ಫೋಟೋಗಳಿವೆ. ಅವುಗಳನ್ನು ಕೂಡಾ ನಿಮಗೆ ಖಂಡಿತಾ ತೋರಿಸುತ್ತೇನೆ.

ಮೊದಲ ಈ ಯಾತ್ರೆ ಕೈಗೊಂಡಾಗ ಖುಷಿ. ನಂತರದ ವರ್ಷಗಳಲ್ಲಿ ಈ ದಿನವಾದರೂ ಯಾಕೆ ಬಂತೋ ಎಂದು ಅಂದುಕೊಳ್ಳುತ್ತೇವೆ. ಆದರೆ ನಿಮ್ಮಲ್ಲಿ ಹಲವರಿಗೆ ಹಾಗೆ ಅನ್ನಿಸುವಿದಿಲ್ಲ, ( ವೇಣು, ರಶ್ಮಿ, ದಯಾ, ಇರಾ ಇಂಥ orkut ) ಮಂದಿಯನ್ನು ಬಿಟ್ಟು.

ಅಂದ ಹಾಗೆ ನನ್ನ ಜೊತೆಗಿರಿವವನು ನನ್ನ ಜೊತೆಗೆ ಕ್ಮಾಮಾರಮೆನ್ ಆಗಿದ್ದ ಸತೀಶ್.

ಈತನದ್ದು ವಿಚಿತ್ರ ಪಯಣ. ಸಿನಿಮಾಕ್ಕಾಗಿ ದುಡಿಯುವ ಆರ್ಹತೆಯೆನ್ನು ಪಡೆದಿದ್ದರೂ.ಸುದ್ದಿ ಛಾನೆಲ್ಲ್ ಹಿಂದೆ ಬಿದ್ದಿದ್ದಾನೆ. ರಜತ್ ಶರ್ಮಾನ ಇಂಡಿಯಾ ಟಿ.ವಿ. ಸೇರಿದ, ಈಗ ಅಲ್ಲಿಂದ CNN IBN ಗೆ ಜಂಪ್ ಹೊಡೆದಿದ್ದಾನೆ. ಈಗ ಡೆಲ್ಲಿಯಲ್ಲಿ ಈತನದ್ದು ಕಾರುಬಾರು.

ನಾನು ಅವನ ಜೊತೆಗಿದ್ದರೂ ಮುಂದಿನ ಅವಕಾಶಕ್ಕೆ, ಹುಚ್ಚುಗಳು ಮಿತಿ ಮೀರಿ ಬೆಂಗಳೂರಿಗೆ ಬಂದಿದ್ದೇನೆ. ಮುಂದೆ ಗೊತ್ತಿಲ್ಲ

Thursday, February 1, 2007

ನನ್ನ ತಂಗಿ....


ಅಚ್ಚರಿ ಪಡಬೇಡಿ ಇವಳೇ ನನ್ನ ತಂಗಿ. ನನ್ನ ಕನಸುಗಳನ್ನು ನನಸು ಮಾಡಬೇಕು ಎನ್ನುವ ಪ್ರೇರಕ ಶಕ್ತಿಗಳಲ್ಲಿ ಈಕೆಯದ್ದು ಒಂದು ಪಾತ್ರವಿದೆ. ೧-೨ ಎರಡು ವರ್ಷದ ಸಂದರ್ಭದಲ್ಲಿ ಪಕ್ಕದ ಮನೆಯ ಪಿಲಿಪನ್ನ ಅವರ ತೋಟದ ಮಧ್ಯೆ ತೆಗೆದ ಫೋಟೋ. ಮಕ್ಕಳು ಹೇಗಿದ್ದರೂ ಚೆನ್ನ ತಾನೇ.