ಮಂಗಳೂರು ನನ್ನ ಹೀಗೆ ಕರೆಯುತ್ತದೆ ಅಂತ ನನಗೆ ಗೊತ್ತಿರಲಿಲ್ಲ. ಕಳೆದ ಮಂಗಳವಾರ ಅಂದರೆ ಮಾರ್ಚ್ ೧೩ ರಂದು ನಮ್ಮ ಊರಿನ ಜಾತ್ರೆಗೆ ಹೋಗಿದ್ದೆ, ಜಾತ್ರೆ ಅಂದರೆ ನಮ್ಮ ಊರಿಗೆ ಅಂತ ಅಲ್ಲ ಏಲ್ಲರಿಗೂ ಸಂಭ್ರಮ.ಒಂದು ದಿನದ ಮಟ್ಟಿಗೆ ಅಲ್ಲಿದ್ದರೂ ಆ ಸಂಭ್ರಮವೇ ಭಿನ್ನ ಬಿಡಿ.ಆದರೆ ಮತ್ತೊಂದು ವಾರದ ಅಂತರದಲ್ಲಿ ಮಂಗಳೂರು ನನ್ನ ಕರೆಯುತ್ತದೆ ಅಂದು ಕೊಂಡಿರಲಿಲ್ಲ. ನನ್ನ ಅತ್ಮೀಯ ಗೆಳೆಯನೊಬ್ಬನ ಅಮ್ಮನ ಸಾವು ನನ್ನನ್ನು ಮತ್ತೆ ಮಂಗಳೂರಿನತ್ತ ಬಸ್ಸು ಹತ್ತಿಸಿತು. ಈ ಬಗ್ಗೆ ನಾನು ಏನೂ ಬರೆಯಲಾರೆ.ಎಲ್ಲರಿಗೂ ನೋವು ಸಹಿಸಿಕೊಳ್ಳುವ ಶಕ್ತಿ ಬರಲಿ ಎನ್ನುವುದು ನನ್ನ ಹಾರೈಕೆ. ನನ್ನ ಖಾಸಗಿ ವಿಚಾರ ಪ್ರಸ್ತಾಪಕ್ಕೆ ಕ್ಷಮೆ ಇರಲಿ.
ಆದರೆ ಕೆಲ ತಿಂಗಳುಗಳ ಹಿಂದೆ ಕಳೆದುಕೊಂಡಿದ್ದ ಪ್ರೀತಿಯ ವಸ್ತುವೊಂದು ನನಗೆ ಮತ್ತೆ ಸಿಕ್ಕಿದೆ.ಇದಕ್ಕಿಂತ ಸಂತೋಷದ ವಿಷಯ ನನ್ನಗೆ ಮತ್ಯಾವೂದೂ ಇಲ್ಲ. ನೋವಿನ ನಡುವೆ ನಲಿವು, ನಲಿವಿನ ನಡುವೆ ನೋವು ಇದೇನಾ ಜೀವನ.
3 comments:
ನೋವು-ನಲಿವುಗಳ ನಡುವಿನ ಜೀವನದಲ್ಲಿ ಎರಡನ್ನೂ ತೂಗಿಸಿಕೊಂಡು ಹೋಗುವ ಗಟ್ಟಿತನ ನಿಮಗಿರಲಿ.
Enadu? kaLedukonDiddu vApas sikkiddu?:-)
http://suptadeepti.blogspot.com/
Post a Comment