Tuesday, December 2, 2008

ನಮನ - ೨

ಬಾಂಬೆಯ ಸುತ್ತ ರಕ್ತದ ರಂಗೋಲಿ. ಈ ನಗರಕ್ಕೆ ಇದೇನು ಶಾಪ ಅಂದುಕೊಳ್ಳಬೇಕಿದೆ. ನಮ್ಮವರು ಬ್ಲಾಕ್ ಕಮಾಂಡೋ, ನೇವಿ ಮಂದಿ, ಅಗ್ನಿ ಶಾಮಕ ದಳ ಹೀಗೆ ಹಲವು ತಂಡಗಳು ತಮ್ಮವರನ್ನು ಮರೆತು ಹೋರಾಡಿದರು. ನಾವು ಮುಂಜಾನೆ ಪೇಪರ್ ನೋಡಿ ಛೇ ಅಂದೆವು, ಟಿ.ವಿ. ನೋಡಿ ಅಯ್ಯೋ ಅಂದೆವು. ನಾವಾದರು ಏನು ಮಾಡಲು ಸಾಧ್ಯ. ಬಹುಶ ಇಂತಹುದೊಂದು ಕೆಲಸ ಮಾಡಿದ ಹಿರಿಮೆ ನಮ್ಮದು.

http://neelanjala.wordpress.com/

ಸಂದೀಪ್ ಅಂತ್ಯ ಸಂಸ್ಕಾರದಲ್ಲಿ ಧರ್ಮವನ್ನು ಭಾಷೆಯನ್ನು ಗುತ್ತಿಗೆ ಪಡೆದಂತೆ ವರ್ತಿಸುವ ಮಂದಿ ಮಾಡಿದ ವರ್ತನೆ ಮಾತ್ರ ದುರಾದೃಷ್ಟ. ನೀವು ನೋಡಿದ್ದರೆ ನೆನಪಿಸಿಕೊಳ್ಳಿ. ಎಲ್ಲರ ಕಣ್ಣಂಚು ತೇವಗೊಂಡಿತ್ತು. ಭಾರತ ಬಾವುಟ ಹೋರಾಟದ ಕಥೆಗಳನ್ನು ಸಾರಿ ಹೇಳುತ್ತಿತ್ತು. ಆದರೆ ರಕ್ಷಣಾ ವೇದಿಕೆಯ ಮಂದಿ ಕನ್ನಡ ಬಾವುಟವನ್ನು ತ್ರಿವರ್ಣ ಧ್ವಜಕ್ಕಿಂತಲ್ಲೂ ಎತ್ತರಕ್ಕೆ ಹಾರಿಸಿದರು. ತಪ್ಪು ಅಂದವರಿಗೆ ಇದು ಕರ್ನಾಟಕ ಎಂದರು... ಸಂದೀಪ್ ಹೋರಾಡಿದ್ದು ಭಾರತಕ್ಕೆ ಏನ್ನುವುದನ್ನು ಮರೆತರು. ಇನ್ನು ಹಿಂದು ಪರ ಸಂಘಟನೆಗಳು ತಮ್ಮ ಭಗವಾ ಧ್ವಜವನ್ನು ಹೊತ್ತು ತಿರುಗಾಡಿದರು. ಇದು ನಾವು ನೀಡಿದ ಸಲಾಂ.( ತಪ್ಪೇನಿದೆ ಕೇರಳ ಮುಖ್ಯಮಂತ್ರಿಗೆ ಅವಮಾನ ಮಾಡಿದ್ದರಲ್ಲಿ.)

ಇನ್ನು ರಾಜಕಾರಣಿಗಳು ಬಾಯಿ ಬಿಚ್ಚಿದರೆ ಕೋಟಿ ಅಂದರು.ಅದಕ್ಕೆ ಇರಬೇಕು ನಮ್ಮ ಡಿ.ಜಿ. ಸಾಹೇಬರು ಅವಧಿ ಮುಗಿದ ಶಸ್ತ್ರಾಸ್ತ್ರ ಗಳನ್ನು ಪ್ರದರ್ಶಿಸಿದ್ದು.ಒಟ್ಟಾರೆ ಧರ್ಮದ ಆಫೀಮು ಎಲ್ಲವನ್ನು ಕತ್ತಲಾಗಿಸಿದೆ. ನಿನ್ನೆ ಮುಂಬೈ.... ನಾಳೆ ಬೆಂಗಳೂರು ಇರಬಹುದು... ಜವಾಬ್ದಾರಿ ಯಾರು.?

7 comments:

ಚಿತ್ರಾ ಸಂತೋಷ್ said...

(:) ನೋವಾಗುತ್ತೆ..ಮನದ ನೋವು ಕರಗಿಲ್ಲ..ಕಣ್ಣೀರಿನ್ನೂ ಬತ್ತಿಲ್ಲ. ಕತ್ತಲು ಬೆಳಕಾಗಿಲ್ಲ..ಬಹುಶಃ ಬರೇ ಬೆಳಕಿನ ಹುಡುಕಾಟ

Shiv said...

ನೋವಿನ ಈ ಕ್ಷಣಗಳಲ್ಲಿದರೂ ಎಲ್ಲಾ ಮರೆತು ನಮ್ಮ ರಕ್ಷಣೆಗಾಗಿ ಮಡಿದವರಿಗೆ ನಮನ ಸಲಿಸಿಲ್ಲಿಕ್ಕೆ ಆಗದೇ..

shivu.k said...

ಸಾರ್,
ನಿಮ್ಮ ಲೇಖನ ಓದಿದೆ. ಮನಸ್ಸಿನ ನೋವು ಇನ್ನು ಹಾಗೆ ಉಳಿದಿದೆ. ಕಣ್ಣಂಚಿನ ಹನಿ ಇನ್ನು ಅಲ್ಲೇ ಇದೆ.

ಅನಿರೀಕ್ಷಿತವಾಗಿ ನಿಮ್ಮ ಬ್ಲಾಗಿಗೆ ಬಂದೆ. ಹೊಸ ಗೆಳೆತನಕ್ಕೆ ಅವಕಾಶ. ನನ್ನ ಬ್ಲಾಗಿಗೊಮ್ಮೆ ಬನ್ನಿ.

ಬಾನಾಡಿ said...

ಅದೆಲ್ಲಾ ಆಗುವುದು ಹೀಗೆಯೇ...
ಆದ ನಂತರ ಅದರ ಬಗ್ಗೆಯೇ ಯೋಚಿಸುವುದು...
ಅಷ್ಟರಲ್ಲಿ ಯೋಚಿಸದೇ ಇರುವಲ್ಲಿ
ಎಂಥದೋ ಆಗ್ತದೆ.
ಇದು ನಮಗೆ ಹೊಸತಲ್ಲ ಅಂತ ಎಲ್ಲರಿಗೂ ಗೊತ್ತು.
ಆದರೆ ನಾವು ಮಾಡುವುದು ಎಂತದು...
ಬರಹ ಚೆನ್ನಾಗಿತ್ತು. ಅಭಿನಂದನೆಗಳು.
ಒಲವಿನಿಂದ
ಬಾನಾಡಿ.

ವಿ.ರಾ.ಹೆ. said...

ಭಾರತಕ್ಕಾಗಿ ಹೋರಾಡಿದವರಿಗೆ ಕರ್ನಾಟಕದ ಬಾವುಟ ಹಾರಿಸೋದು ತಪ್ಪಾ? ಕರ್ನಾಟಕ ಪಾಕಿಸ್ತಾನದಲ್ಲೇನಾದ್ರೂ ಇದೆಯಾ? ಭಾರತ ಅಂತ ಪ್ರತ್ಯೇಕ ದೇಶ ಯಾವುದೂ ಇಲ್ಲ. ಎಲಾ ರಾಜ್ಯಗಳೂ ಸೇರಿ ಭಾರತವಷ್ಟೆ. ಯಾವ ಬಾವುಟ ಹಾರಿಸಿದ್ರೂ ಒಂದೇ, ಗೌರವ ಮುಖ್ಯ ಅಷ್ಟೆ. ಅದು ಇದ್ರೆ ಒ.ಕೆ. ಇಲ್ಲಾಂದ್ರೆ ತಪ್ಪು.

Anonymous said...

ವಿಕಾಸ್ ಬಾವುಟ ಹಾರಿಸಿದ್ದು ತಪ್ಪಲ್ಲ. ಸೇನೆಯ ಮಂದಿಗೆ ಅವರದ್ದೇ ಆದ ನಿಯಮಗಳಿದೆ. ಕನ್ನಡದ ಬಾವುಟವನ್ನು ರಾಷ್ಟ್ರಧ್ವಜಕ್ಕಿಂತ ಕೆಳಗಿರಿಸಿ ಅಂದಾಗ ಮೊಂಡು ವಾದಕ್ಕೆ ಇಳಿದದ್ದು ತಪ್ಪು. ವಿಧಾನಸೌಧ ಕರ್ನಾಟಕದಲ್ಲಿದೆ. ಅದರ ಮೇಲೆ ಕನ್ನಡ ಬಾವುಟ ಹಾರಿಸೋಣ ಅಂದರೆ ತಪ್ಪಲ್ಲವೆ.

ವಿ.ರಾ.ಹೆ. said...

ಯಾಕೆ ತಪ್ಪು?