ಕನಸು - ೧
ನನ್ನ ಪಾದ ತಲಗಳನ್ನು ಸಮುದ್ರದ
ಅಲೆಗಳು ಚುಂಬಿಸುತ್ತಿರಬೇಕು
ಸಮುದ್ರ ದಂಡೆಯಲ್ಲಿ ಮಲಗಿ ನಾನು
ಆಕಾಶ ದೃಷ್ಟಿಸುತ್ತಿರಬೇಕು
---------------------------
ಕನಸು - ೨
ಈ ಮಳೆಯೇ ಹೀಗೆ, ತುಂತುರು ಹನಿ
ಕಿವಿಯಲ್ಲೊಂದು ಮೊಬೈಲ್ ನ ಈಯರ್ ಫೋನ್
ಅದರಲ್ಲಿ ನನ್ನ ಹುಡುಗಿಯಯ ದನಿ
ಹನಿ ಹನಿ ಪ್ರೇಂ ಕಹಾನಿ
-------------------------
ಕನಸು - ೩
ಪೂಜೆ ಮುಗಿದ ಮೇಲೆ
ದೇವರ ಮುಟ್ಟಬೇಕು, ನಮಿಸಬೇಕು ಅನ್ನಿಸುತ್ತದೆ
ಪ್ರೀತಿಸಿದ ಹುಡುಗಿಯ ಮೇಲೂ ಅಷ್ಟೆ ಭಕ್ತಿ
ಪೂಜೆ ಮುಗಿದ ವಿಗ್ರಹದಂತೆ
ಪ್ರೀತಿ ಉಕ್ಕುತ್ತದೆ
----------------------------
ಕನಸು ೪
ಎಲ್ಲಾ ಮರೆತಿರುವಾಗ, ಮರೆಯಲಾಗುವುದಿಲ್ಲ
ನಿನ್ನ ಕಣ್ಣ ಒಳಗಿನ ಕನಸು
ಮನಸ್ಸಿನೊಳಗಿನ ಭಯ, ಆತಂಕ
ಮತ್ತೇನೂ ತಪ್ಪು ........ನಿನ್ನ ಕನಸು ಕದ್ದದ್ದು
9 comments:
ಕನಸುಗಳ ಕಾಮನಬಿಲ್ಲು ಚೆನ್ನಾಗಿ ಮೂಡಿವೆ..ಅದರಲ್ಲೂ ಮೊದಲನೆಯ ಕನಸು ತುಂಬಾ ಇಷ್ಟವಾಯಿತು. ಬರೆಯುತ್ತಿರಿ.
Tell me how to blog in kannada
ವ್ಹಾವ್, ಬಹಳ ದಿನಗಳ ನಂತರ ಆನೆಗುಂಡಿಯ ಕವಿತ್ವದ ಕನಸುಗಳು ಅರಳಿಕೊಂಡಿವೆ.... :)
ಕನಸುಗಳು ತುಂಬಾನೇ ಇಷ್ಟವಾದವು
ಕನಸು ನವಿರು ನವಿರಾಗಿವೆ... ಮುಂದುವರಿಸಿ... ಹೀಗೇ ಸುಮ್ಮನೆ...
ಪುಟ್ಟ ಪುಟ್ಟ ಕನಸಿನ ಪಿಸುಗಿನಂತಾ ನಿಮ್ಮ ಕವನ ಇಷ್ಟ ಆಯ್ತು. ಆದ್ರೂ ಕೆಲವೊಂದು ಕಡೆ ಸೈದ್ಧಾಂತಿಕತೆ ಬಿಟ್ಟು ಬರೆದ್ರೆ ಇನ್ನೂ ಚೆನ್ನಾಗಿರತ್ತೆ, ಅಲ್ವಾ?
ಸುಂದರವಾದ ಕವನಗಳು.
ಧನ್ಯವಾದಗಳು ,
ತೇಜಸ್ವಿನಿ, ವೇಣು,ಕೃಷ್ಣ,
ಪ್ರಿಯಾ ಖಂಡಿತಾ I Will try
ಚೆಂದದ ಹನಿಗಳು..
chenagide guruve...koneya kanasu chennagittu...ivellavu sakaragollali adakkagi mundina june thingalinalli nimage raje sigali
Post a Comment