Monday, May 5, 2008

ಮಳೆಯೆಂದರೆ ಹೀಗೆ ?

ನಿನ್ನೆ ಯಾಕೆ ಮಳೆ ಸುರಿಯಿತೋ
ನಾಡೆಲ್ಲ ತಂಪಾಗಿದೆ
ಇನ್ನೂ ಬಿಸಿಲಿರಬಾರದಿತ್ತೆ.
ನಾನು ಆ ಬಿಸಿಲಲ್ಲಿ ಸುಟ್ಟು ಹೋಗಬಾರದೆ
ಎಲ್ಲವೂ ತಂಪಾಗಿದೆ,ಆದರೆ
ನನ್ನ ಮನಸ್ಸಲ್ಲಿ ಬೆಂಕಿಯ ನೋವಿದೆ
ಎದೆಯೊಳಗಡೆ ಸಾವಿರ ಹಾವು ಹರಿದಾಡುತ್ತಿದೆ

ಕನಸಲ್ಲಿ ಸುಖವಿಲ್ಲ
ಹಳೆಯ ದಿನಗಳು ಮತ್ತೆ ಯಾಕೋ ಮರುಕಳಿಸುತ್ತಿದೆ
ನನ್ನ ಕೋಪ ನನ್ನ ಸುಡಬಾರದೆ

ಸುಡು ಎಂದರೂ ಸುಡದ ಈ ಬೆಂಕಿ
ನಿಲ್ಲೂ ಎಂದರೂ ನಿಲ್ಲದ ಗಾಳಿ
ಹೋಗು ಎಂದರೂ ಹೋಗದ ಬೆಳಕು
ನನ್ನ ಬದುಕ ಚುಚ್ಚುತ್ತಿದೆ

ಕಾಲ ಕೆಳಗೆ ಸಮುದ್ರ
ದೂರದಲ್ಲೆಲ್ಲೂ ಮಳೆ ಬರುವ ಸದ್ದು
ಕೇಳುವ ದಿನ ಎಂದೂ ಬರುವುದೋ.....

5 comments:

ತೇಜಸ್ವಿನಿ ಹೆಗಡೆ said...

ಅಂತರಂಗದ ತುಮುಲಗಳನ್ನು ಚೆನ್ನಾಗಿ ಪ್ರತಿಬಿಂಬಿಸುವ ಕವನ. ಆದರೆ ಕವನದ ಶೀರ್ಷಿಕೆ ಯಾಕೋ ಕವನವನ್ನು ಪ್ರತಿಬಿಂಬಿಸುವಂತಿಲ್ಲ! (ಇದು ನನ್ನ ಅಭಿಪ್ರಾಯವಷ್ಟೇ)

Chevar said...

your blog featured in Kannada Prabha.

sunaath said...

ನಿಮ್ಮಎದೆಯ ತುಮುಲಗಳಿಗೆ ಉಪಶಮನ ಸಿಗಲಿ ಎಂದು ಹಾರೈಸುವೆ.

Anonymous said...

oldmonk hodi sariyaguthe

Life is Beautiful said...

oldmonk hodi sariyaguthe