ಭಾರೀ ಮಳೆ ಸುರಿಯುತ್ತಿದೆ. ಗೇರು ಬೀಜ ಗಿಡದಲ್ಲೆ ಮೊಳಕೆಯೊಡೆದಿದೆ.ಇದು ಕೆಲ ವಾರಗಳ ಹಿಂದೆ ನಾನು ಮಂಗಳೂರು ಬಸ್ಸು ಹತ್ತುವ ಮುನ್ನದ ಮಾತು. ಆದರೆ ಅದ್ಯಾವುದೋ ತಿರುವು ಮುರುವುಗಳಲ್ಲಿ ಸಾಗಿದ ಆರು ಚಕ್ರದ ಬಂಡಿ ನನ್ನನ್ನು ಬಿ.ಸಿ.ರೋಡಿನಲ್ಲಿ ಇಳಿಸಿದಾಗ Saftey ಗೆ ಇರಲಿ ಎಂದು ಕೊಂಡೊಯ್ಯುದಿದ್ದ ಜಾಕೆಟ್ ನೊಳಗೆ ಬೆವರು ಸುರಿಯುತಿತ್ತು. ಆದರೆ ನೆಲದ ಒದ್ದೆ ಆರಿರಲಿಲ್ಲ. ನೇತ್ರಾವತಿ ನದಿಯಲ್ಲಿ ನೀರು ಉಕ್ಕಿ ಹರಿಯುತಿತ್ತು. ( ಅದೆಷ್ಟು ನೀರು ನದಿಯಲ್ಲಿ ಹರಿದಿದೆಯೋ )
ಹೌದು ನಾನು ಊರಿಗೆ ಹೋಗಿ ಬಂದಿದ್ದೇನೆ.ಒಂಥರ Breaking news.ಯಾರು First ಓದುತ್ತಾರೋ ಅವರಿಗೆ Exclisive.ಮತ್ತೆಲ್ಲ Flash. Any way ನಾನು ಊರಿಗೆ ಹೋಗಿದ್ದೆ. ತುಂಬಾ ತಿಂಗಳಾಗಿತ್ತು. ಈ ಆಟೋನಗರಿಯ
ಕಿರಿ ಕಿರಿಯಿಂದ ಒಂದಿಷ್ಟು ರಿಲ್ಯಾಕ್ಸ್. ಜೊತೆಗೆ ನಾಸ್ತಿಕನಲ್ಲ ಎಂಬ ಕಾರಣಕ್ಕೆ ಊರಿನ ಜಾತ್ರೆ ನನ್ನನು ಊರಿಗೆ ಕರೆದಿತ್ತು.
ಊರೇ ಹೀಗೆ ........ ಊರು ಬಿಟ್ಟ ಮೇಲೆ ಗೊತ್ತಾಗುತ್ತೆ.Importent. ಅದರೆ ಬದುಕು ಕಾಡುತ್ತದೆ. Future ಎನ್ನುವ ಭೂತ ಕಾಡುತ್ತದೆ. ಹಾಗಾಗಿ ಊರಿನ ಪ್ರತಿಯೊಂದು ಬದಲಾವಣೆ ನಮ್ಮಲ್ಲಿ ಅಚ್ಚಲ್ಲಿ ಉಳಿಯುತ್ತದೆ. ಒಟ್ಟಾರೆ ನಮ್ಮ ಊರು ಮಾತ್ರ ಬದಲಾಗುತ್ತಿದೆ. ಮನೆ ಪಕ್ಕದಲ್ಲೇ ಇನ್ ಫೋಸಿಸ್ ಬಂದಿದೆ. ಆಕಾಶವಾಣಿ ಮಾತ್ರ ಕೇಳುತ್ತಿದ್ದ ಹಳ್ಳಿಗಳಲ್ಲಿ FMಗಳ ಕಾರು ಬಾರು. ಸುಂದರ ಹುಡುಗಿಯರ ಸುಂದರ ಕಿವಿಗಳಲ್ಲಿ ಇಯರ್ ಫೋನ್ ಭಾಗ್ಯ ಪಡೆದಿದೆ.ಮಂಗಳೂರಿನ ರಸ್ತೆಗಳಿಗೆ ಹೊಸ look ಬಂದಿದೆ. ಬೆಂಗಳೂರಿಗೆ ವಾಪಸಾದರೆ ನೆನಪುಗಳು ಕಾಡುತ್ತದೆ. ಆದರೆ ಎಲ್ಲಾ ನೆನಪುಗಳನ್ನು ಒಂದೇ ಕಡೆ ಸೇರಿಸಿದರೆ, ಆ ನೆನಪುಗಳ ಬಂಡಿಯಲ್ಲಿ ನೋವುಗಳೇ ಸರದಾರ. ಸಿಟಿ ಬಸ್ಸಲ್ಲಿ ಓಡಾಡಿದ್ದು, ಎಲ್ಲೋ, ಎಲ್ಲೋ ಗಿಲ್ಲಿದ್ದು ಹೀಗೆ......... ಎಲ್ಲಾ ನೆನಪುಗಳನ್ನು ಹೊತ್ತು ವಾಪಾಸಾಗಿದ್ದೇನೆ. ಮತ್ತೆ.... ಅದೇ ಬದುಕು ........Future ಎನ್ನುವ ಭೂತ.
last line's
+ ಅದೆಷ್ಟೋ ಜನ ಊರಿಂದ ನಾಪತ್ತೆಯಾಗಿದ್ದರೆ. ಹಲವು ಹೊಸ ಮುಖಗಳು ಊರಿಗೆ ಬಂದಿದೆ
+ ಕಡಲಲ್ಲಿ ಅಷ್ಟೇ ನೀರಿದೆ.
5 comments:
ಕೊನೆಯ ಸಾಲುಗಳು ಅದ್ಭುತವಾಗಿದೆ...
ಊರಿನಿಂದ ದೂರವಿರುವ ಮನಸ್ಸುಗಳಿಗೆಲ್ಲಾ ಇದೇ ಭಾವನೆ ಕಾಡುತ್ತದೆಯೇನೋ !
ಕಡಲು ...
ಅತಿಯಾಗಿ miss ಮಾಡಿಕೊಳ್ಳೋದಂದ್ರೆ ...
ಇಲ್ಲೂ ಈಗ ನಾನಿರೋ ಜಾಗದಲ್ಲಿ (california)ಕಡಲಿದೆ... ಆದ್ರೆ ...
ಮಂಗಳೂರಿನ ಸಮುದ್ರ ...
ಅದರ ಮರಳಿನ ವಾಸನೆ ... ( ಕಂಪು )
ಬೇರೆಲ್ಲೂ ಅನುಭವಕ್ಕೆ ಬಂದಿಲ್ಲ.
ನಮ್ಮ ಊರು ನಮ್ಮ ಊರಾಗಿ ಉಳಿಯೋದಿಲ್ಲ, ನಮ್ಮ ಬಾಲ್ಯದ ಹಾಗೆ.
ರಾಧಣ್ಣ ಚೆನ್ನಾಗಿ ಬರೆದಿದ್ದೀರಿ.ನದಿಯ ನೀರು ಹರಿದು ಸಾಗರವ ನಿರಂತರ ಸೇರಿದಂತೆ ಊರಿನಲ್ಲೂ ನಡೆಯುತ್ತಿರಬಹುದೇ...
ಮಂಗಳೂರು ಮತ್ತು ಬೆಂಗಳೂರನ್ನು compare ಮಾಡಿದ್ರೆ ಸಾವಿರಾರು ವಿಷಯಗಳು ಸಿಗುತ್ತವೆ ಬಿಡಿ. ಅಲ್ಲಿರುವ ಸುಂದರ ಪ್ರಪಂಚ ಇಲ್ಲಿಲ್ಲ... ಆ ಬಗ್ಗೆ ನಾನೂ ಬರೆದಿದ್ದೆ.
ಚೆನ್ನಾಗಿತ್ತು...ಆದ್ರೆ ಸುಂದರ ಹುಡುಗಿಯರ ಸುಂದರ ಕಿವಿಗಳ ಮೇಲ್ಯಾಕೆ ನಿಮ್ ಕಣ್ಣು????
Post a Comment