ಏಕಾಂತವಿದೆ ಗೆಳತಿ ಬದುಕಿನುದ್ದ
ಏಕಾಂಕವಿದೆ ಗೆಳತಿ ಜೀವನುದುದ್ದ
ನಾನು ಬಣ್ಣ ಹಚ್ಚುತ್ತೇನೆ
ನೀನೆ ಪ್ರೇಕ್ಷಕಿ
ತೆರೆ ಸರಿಯುತ್ತದೆ
ಬಣ್ಣದೊಳಗು ಬೆವರು ಸುರಿಯುತ್ತದೆ
ಮಾತು ಹೊರಡುವುದಿಲ್ಲ
ನಿನ್ನ ಮುಖದಲ್ಲಿ ನನ್ನ ಮಾತು
ಬಣ್ಣ ನನ್ನ ಮುಖದಲ್ಲಿ
ತೆರೆ ಮುಚ್ಚುತ್ತದೆ
ಬಣ್ಣ ಕಳಚಿಹೋಗುತ್ತದೆ
ಒಂದುಗೂಡುತ್ತೇವೆ ಬಣ್ಣ ಕಳಚುವ ಕೋಣೆಯಲ್ಲಿ
ವಿಮರ್ಶೆಯಿಲ್ಲದೆ......
ರಾಧಾಕೃಷ್ಣ ಆನೆಗುಂಡಿ
7 comments:
namskara radhkrishna aanegundi avarige
hegide kannada terina bandi
raviraj, henda thi makkalondige sukha vagiddare
ರಾಧಾ,
ಉದ್ದುದ್ದ ಆದ್ರೆ ಅರ್ಥವಾಗಲು ಕಷ್ಟಪಡಬೇಕಾದ ಕವನಕ್ಕಿಂತ ಹೊಸ ಅರ್ಥ ಹೊಮ್ಮಿಸುವ ಇಂಥ ಕವನ ಇಷ್ಟ. ಎಲ್ಲಾ ಸಾಲುಗಳೂ ಖುಷಿ ಕೊಟ್ಟವು
ರಾಧಾಕೃಷ್ಣ,
ಕೊನೆ ಸಾಲು ತುಂಬಾ ಇಷ್ಟವಾಯ್ತು..
nangunu!!!
thanks for all replyers or commenters
ನಮಸ್ಕಾರ ರಾಧಾ..
ಬ್ಲಾಗ್ ತುಂಬಾ ಚೆನ್ನಾಗಿದೆ...
ಮೇಲ್ನೋಟಕ್ಕೇ.. ನಮ್ಮನ್ನು ಓದಿಗೆ ಹಚ್ಚಿಬಿಡುತ್ತೆ..
ಆಪ್ತತೆ ಬರಹಗಳಲ್ಲಿ ಹೊಮ್ಮುತ್ತಿದೆ
ಚೆನ್ನಾಗಿದೆ.. ಮುಂದುವರೆಯಲಿ ...
ದತ್ತು
ರಾಧಾಕೃಷ್ಣ,
ಸತ್ವಪೂರ್ಣ ಕವಿತೆ.
ಬಣ್ಣದೊಳಗು ಬೆವರು ಸುರಿಯುತ್ತದೆ..
ಬಣ್ಣ ಕಳಚಿಹೋಗುತ್ತದೆ...
ವಿಮರ್ಶೆಯಿಲ್ಲದೆ......
ಈ ಸಾಲುಗಳು ತುಂಬ ಹಿಡಿಸಿದವು.
Post a Comment