ಈಗಷ್ಟೆ ಆದ ಮೈಥುನಕ್ಕೆ
ಗರ್ಭ ಕಟ್ಟಿದೆ.
ಯಾವುದೇ ಗುರುತಿಲ್ಲದ ಸಿಹಿ.
ಇನ್ನೆಷ್ಟು ದಿನ ಕಾಯಬೇಕು ಸಂಭ್ರಮಕ್ಕೆ
ಮೈಥುನದ ನೆನಪು ಒಂದು ಬಗೆ.
ಫಲಿತಾಂಶಕ್ಕೆ ಕಾಯುವ ಪರಿ ಮತ್ತೊಂದು ಬಗೆ
ಎರಡರೊಳಗಿನ ಬೆರಗು
ಅದರೊಳಗಿನ ಅಚ್ಚರಿ
ಮೊದಲ ಕೊನೆಯ ನೆನಪು
ಮೌನವಾಗಿ ಸಿಕ್ಕ ಸಿಹಿಗೆ
ಮತ್ತೊಂದು ಬಗೆಯ ಸಿಹಿಗೆ
ಮೌನವಾಗಿ ಕಾಯಬೇಕು
ಬೆಳವಣಿಗೆಯ ಬೆರಗುಗಳನ್ನು
ಅಚ್ಚರಿಯಿಂದ ಕಾಣಬೇಕು
ಸಣ್ಣ ಬೀಜಕ್ಕೆ ದೊಡ್ಡ ಮರ
ದೊಡ್ಡ ಮರದಲ್ಲಿ ಸಣ್ಣ ಬೀಜ
ಬೀಜ ಬಿದ್ದರೆ ಮತ್ತೊಂದು ಮರ
ದಿನ ಉರುಳಿದರೆ ಸಾಕು
ಮತ್ತೊಂದು ಬೆರಗಿನ ಆಗಮನ
ಮತ್ತೊಮ್ಮೆ ಮೈಥುನ
ಇದುವೇ ಸಂಭ್ರಮದ ಬೆರಗು.
1 comment:
ಒಳ್ಳೆಯ ಕವಿತೆ ರಾಧಾಕೃಷ್ಣ ಅವರೆ. ಎಷ್ಟು ಚೆನ್ನಾಗಿ ಬರೆದಿದ್ದೀರಿ: ' ಯಾವುದೇ ಗುರುತಿಲ್ಲದ ಸಿಹಿ ' ಎಂದು..! ಮೈಥುನ ಬೆರಗಿನಾಟವಲ್ಲದೇ ಇನ್ನೇನು..?
Post a Comment