Tuesday, February 6, 2007

ಟಿ.ವಿ. ನ್ಯೂಸ್ ಸುತ್ತ....











ಸುದ್ದಿ ಹಿನ್ನೆಲೆಯ ಹುಚ್ಚಿನಿಂದ ಬಂದ ನನಗೆ ಸುದ್ದಿಗಳ ಬಗ್ಗೆ ಬರೆಯುವುದು ಮಾತನಾಡುವು ಎಂದರೆ ಇಷ್ಟ. ಅದರಲ್ಲೂ. Visual Media ಬಗ್ಗೆ ನನ್ನದೇ ಆದ ಕನಸುಗಳಿವೆ. Print media ದಲ್ಲಿ ನನ್ನನ್ನು ತೊಡಗಿಸದೇ ಇರುವುದು ಇದಕ್ಕೆ ಕಾರಣವಿರಬಹುದು. ಆದರೆ ನಾನು ಇವತ್ತು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸಿರುವುದು. ದೃಶ್ಯ ಮಾಧ್ಯಮದ ಬಗ್ಗೆ ಅದರಲ್ಲೂ ಸುದ್ದಿಯ ಬಗ್ಗೆ.....
ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿರುವ ಅಜ್ ತಕ್, NDTV, CNN IBN ಹೀಗೆ ಹಲವು ಚಾನೆಲ್ ಗಳನ್ನು ಗಮನಿಸಿ ಇದರ ಜೊತೆಗೆ ಕರ್ನಾಟಕದ ETV, udya ಟಿವಿಯ ಸುದ್ದಿಗಳನ್ನು ಗಮನಿಸಿ ಅವು ನಮಗೆ ನೀಡುತ್ತಿರುವ ಸುದ್ದಿಗಳಲ್ಲಿನ ಭಿನ್ನತೆ ಅರಿವಾಗುತ್ತದೆ.ಇದು ಸಹಜವೇ.ಆದರೆ ಪ್ರಸ್ತುತ ಪಡಿಸುತ್ತಿರುವ ರೀತಿಯಲ್ಲೂ ಭಿನ್ನತೆಗಳಿದೆಯಲ್ಲ. ಇದು ನನಗೆ ಇಂದಿಗೂ ಅಚ್ಚರಿ ಉಂಟು ಮಾಡುತ್ತಿರುವುದು.
ಕನ್ನಡದ ವಾಹಿನಿಯ ಸುದ್ದಿ ವಿಭಾಗದಲ್ಲಿ ಅದರಲ್ಲೂ ವರದಿಗಾರರಾಗಿ ಕೆಲಸ ಮಾಡುವವರನ್ನು ಗಮನಿಸಿ -ಅಂದರೆ ಅವರು ಟಿ.ವಿ ಯಲ್ಲಿ ಕೊಡುವ PTC ಇರಬಹುದು, Phonein ಇರಬಹುದು ಎಲ್ಲವೂ ಒಂದು ತರ ನಾಟಕೀಯ ಅನ್ನಿಸಿಬಿಡುತ್ತದೆ, ವಿವರಗಳ ಕೊರತೆ ಎದ್ದು ಕಾಣುತ್ತದೆ. ( ಒಂದಿಬ್ಬರನ್ನು ಹೊರತು ಪಡಿಸಿ ) ಜೊತಗೆ live PTC ನೋಡಿದರೆ ಅಯ್ಯೋ ಅನ್ನಿಸುತ್ತದೆ. recording time ನಲ್ಲಿ ೨೦ ಟೇಕ್ ತೆಗೆದುಕೊಳ್ಳುವವರನ್ನು ನಾನು ನೋಡಿದ್ದೇನೆ. ನಮ್ಮಲ್ಲಿ PTC, Phonein ಕೊಡಬೇಕಾಗಿ ಬಂದಾಗ ಚೀಟಿಯಲ್ಲಿ ಬರೆದು, ಕಂಠಪಾಠ ಹೊಡೆಯುವ ಪರಿಸ್ಥಿತಿ. ಆದರೆ ಅನುಭ ಬೋಸ್ಲೆ ಅಂಥವರು ನಮ್ಮಲ್ಲಿ ಯಾಕೆ ಬರುತ್ತಿಲ್ಲ?.
ಅದೇ National ಚಾನೆಲ್ ನೋಡಿ. ಬಿಂದಾಸ್ ಅನ್ನಿಸಲ್ವ. ಜನ ಜಂಗುಳಿಯ ನಡುವೆ ಹುಡುಗಿಯರೇ ವಿವರಗಳನ್ನು ಒಪ್ಪಿಸುತ್ತಾರೆ.
ಕನ್ನಡದ ವರದಿಗಾರರಿಗೆ,ಗಾರ್ತಿಯರಿಗೆ ಏನಾಗಿದೆ.ಆದರೆ ಇತ್ತೀಚೆಗೆ ಬಂದಿರುವ TV9 ಈ ಕೊರತೆಯನ್ನು ಹೋಗಲಾಡಿಸಬಹುದು ಅಂದುಕೊಂಡಿದ್ದೇನೆ.ಇದರ ಮೊದಲ ಪ್ರಯತ್ನ ಚೆನ್ನಾಗಿದೆ.ನನ್ನ ಕನಸುಗಳು ಇಷ್ಟೇ ಕನ್ನಡದಲ್ಲೂ CNN IBN ನಂತೆ ವರದಿಗಾರರು, ಗಾರ್ತಿಯರು ಬರಬೇಕು ಎಂಬುದು.
ನಿಮ್ಮಲ್ಲಿ ಉತ್ತರಗಳಿದ್ದರೆ ಪ್ರತಿಕ್ರಿಯಿಸಿ

3 comments:

VENU VINOD said...

ನಿಮ್ಮದೇ ಯೋಚನೆ ಅನೇಕ ಬಾರಿ ನನಗೂ ಬಂದಿತ್ತು. ಎಷ್ಟಾದ್ರೂ ರಾಷ್ಟ್ರೀಯ ವಾಹಿನಿಗಳಿಗೆ ಇರುವ ಸನ್ನಿವೇಶ, ಅನುಕೂಲಗಳೇ ಬೇರೆ ಇರೋದೂ ಈ ಭಿನ್ನತೆಗೆ ಕಾರಣವಿರಲೂ ಬಹುದು. ಆದ್ರೂ, ಕನ್ನಡ ವಾಹಿನಿಗಳ ಶೈಲಿಯಲ್ಲಿ ಬದಲಾವಣೆ ತರಲು ಅವಕಾಶ ಖಂಡಿತ ಇದೆ.
ನೀವು ಹೇಳಿದಂತೆ ಟಿವಿ ೯ ಪ್ರಯೋಗ ಚೆನ್ನಾಗಿ ಬರುತ್ತಿದೆ.

Unknown said...

neevu heliddu sari Aadare nmage mOOnku mutta manasside, Aguvudillavalla !

ರಾಧಾಕೃಷ್ಣ ಆನೆಗುಂಡಿ. said...

ಕುಂದೇಶ್ವರ ನಿಮಗೆ ನನ್ನ ನೆನಪು ಇದೆಯಾ ಮಾರಾಯರೇ. ನಿಮ್ಮ ಬ್ಲಾಗ್ ಇದೆಯ. ಮತ್ತೆ ರವಿರಾಜ್ ಹೇಗಿದ್ದಾರೆ. ಜೊತೆಗೆ ನಕ್ಸಲೈಟ್ ಕೂಡಾ