Wednesday, January 31, 2007

ಉಳಿದಿರುವುದು ನೋವು ಮಾತ್ರ..........

ರೈಲು ಗಾಡಿಯ ಕುಲುಕಾಟಕ್ಕೆ
ನಿನ್ನ ಎದೆ ಕುಲುಕುತಿತ್ತು.
ನಾನೂ ಕುಲುಕುತ್ತಿದ್ದೆ ನಿನ್ನ ಮನಸ್ಸಿನೊಳಗೆ.

ನನ್ನ ಮೌನದೊಳಗೆ
ನಿನ್ನ ಕುಲುಕಾಟವಿಲ್ಲ
ಕಟ್ಟಿದ ಕನಸು ನುಚ್ಚು ನೂರಾಗಿತ್ತು
ಇನ್ನೆಲ್ಲಿ ಕುಲುಕಾಟ

ನಿರೀಕ್ಷೆ ಬೆಳೆದ ಬಗೆ
ಹೇಗೆ ಇಳಿದು ಹೋಯಿತು
ಗೆಜ್ಜೆಯ ದನಿಗೆ ಹುಚ್ಚನಾದದ್ದು
ಪ್ರೀತಿ ಬೆಳೆಸಿದ್ದು
ಕನಸು ಕಟ್ಟಿದು
ಮನೆಯವರ ಅಬ್ಬರಕ್ಕೆ
ನೀರಿನಂತೆ ಪ್ರೀತಿ ಕಟ್ಟೆಯೊಡೆದು ಕರಗಿತ್ತು.

ಈಗ ರೈಲು ನಿಂತಿದೆ
ಕುಲುಕಾಟವಿಲ್ಲ
ಈ ವರೆಗಿನ ಕುಲುಕಾಟದಲ್ಲಿ ನಾನೂ ಕರಗಿದ್ದೇನೆ.
ಪ್ರೀತಿಯೂ ಕರಗಿದೆ.
ಆದರೆ
ನೋವು ಉಳಿದಿದೆ.

7 comments:

Anveshi said...

""ನಿರೀಕ್ಷೆ ಬೆಳೆದ ಬಗೆ
ಹೇಗೆ ಇಳಿದು ಹೋಯಿತು
ಗೆಜ್ಜೆಯ ದನಿಗೆ ಹುಚ್ಚನಾದದ್ದು
ಪ್ರೀತಿ ಬೆಳೆಸಿದ್ದು
ಕನಸು ಕಟ್ಟಿದು
ಮನೆಯವರ ಅಬ್ಬರಕ್ಕೆ
ನೀರಿನಂತೆ ಪ್ರೀತಿ ಕಟ್ಟೆಯೊಡೆದು ಕರಗಿತ್ತು.""

ಈ ಏಳು ಸಾಲುಗಳಲ್ಲಿ ಪ್ರೇಮಕಥಾನಕವನ್ನೇ ತುಂಬಿದ್ದೀರಿ.
ಪ್ರೀತಿ ಏಕೆ ಕರಗಿತು? :)

ರಾಧಾಕೃಷ್ಣ ಆನೆಗುಂಡಿ. said...

ಕೆಲವೊಂದು ಭಾರೀ ಪ್ರೀತಿ ಐಸ್ ಕ್ರಿಮ್ ನಂತೆ. ಬೇಗ ತಿಂದು ಬಿಡಬೇಕು ಇಲ್ಲದಿದ್ದರೆ ಕರಗುತ್ತದೆ. ಇಲ್ಲವೇ ಫ್ರೀಜ್ಜ್ ನಲ್ಲಿ ಜೋಪಾನವಾಗಿರಸಬೇಕು. ನನ್ನ ಕೈಯಲ್ಲಿ ಎರಡೂ ಸಾಧ್ಯವಾಗಲಿಲ್ಲ.ತಿನ್ನಲಿ ಮನಸ್ಸಾಗಲಿಲ್ಲ ಪ್ರೀತಿಯ ಸೌಂದರ್ಯವನ್ನು ಇನ್ನಷ್ಟು ನೋಡುವ ಆಶೆ.

ಫ್ರೀಜ್ಜ್ ನಲ್ಲಿ ಜೋಪಾನವಾಗಿರಸಲೂ ಆಗಲಿಲ್ಲ ದಿನ ನಿತ್ಯ ನೋಡುವ ಹೀಗೆ..... ಹತ್ತು ಹಲವು ಕಾರಣಗಳು.

ಅದಕ್ಕಾಗಿ ಹೊಸ ಕನಸಿನತ್ತ ಪಯಣ

Sushrutha Dodderi said...

ಪ್ರೀತಿಯ ನಂತರ ಉಳಿಯುವುದು ನೋವಷ್ಟೇ? ಆದರೂ ಅದು ಅದೆಷ್ಟು ಮಧುರ ನೋವು..! ಒಳ್ಳೆಯ ಕವಿತೆ; ಒಳ್ಳೆಯ ಬ್ಲಾಗು.

ರಾಧಾಕೃಷ್ಣ ಆನೆಗುಂಡಿ. said...

ಕನ್ನಡದಲ್ಲಿ ಕುಟ್ಟಲು ಪ್ರಾರಂಭಿಸಿದ ಮೊದಲ ದಿನಗಳಲ್ಲಿ ಸ್ಪಂದನ ಇಲ್ಲದೇ ನನ್ನ ನೋವು ನನಗೆ ಮಾತ್ರವೇ ಅಂದುಕೊಂಡಿದ್ದೆ. ಈಗ ಅರಿವಾಗಿದೆ ಎಲ್ಲವನ್ನೂ ಹಂಚಿಕೊಳ್ಳಲು ಮುಖ ಪರಿಚಯದ ಗೆಳೆಯರಿದ್ದಾರೆ ಎಂದು.

ದೊಡ್ಡೇರಿಯವರಿಗೆ ದೊಡ್ಡ ಥ್ಯಾಂಕ್ಸ್

Shree said...

ಚೆನ್ನಾಗಿದೆ... ಹೀಗೇ ಮು೦ದುವರೀರಿ ರಾಧಾ.. ನಿಮಗೆ ಬೇಗ ಒಳ್ಳೆಯ ಫ್ರಿಜ್ ಸಿಗಲಿ, ಅಥವಾ ಐಸ್ಕ್ರೀಮ್ ತಿನ್ನೋಕ್ಕೆ ಟೈಮ್ ಸಿಗ್ಲಿ ಅ೦ತ ಹಾರೈಕೆ... :-)

Enigma said...

"ಕೆಲವೊಂದು ಭಾರೀ ಪ್ರೀತಿ ಐಸ್ ಕ್ರಿಮ್ ನಂತೆ. ಬೇಗ ತಿಂದು ಬಿಡಬೇಕು ಇಲ್ಲದಿದ್ದರೆ ಕರಗುತ್ತದೆ. ಇಲ್ಲವೇ ಫ್ರೀಜ್ಜ್ ನಲ್ಲಿ ಜೋಪಾನವಾಗಿರಸಬೇಕು."
bahala chenagi helideera preethiya bagge :) kavan baritah iri

ರಾಧಾಕೃಷ್ಣ ಆನೆಗುಂಡಿ. said...

enigma ಅವರೇ ಬ್ಲಾಗಿಗೆ ಸ್ವಾಗತ.ಪ್ರತಿಕ್ರಿಯೆಗೆ ಸ್ವಾಗತ, ಧನ್ಯವಾದ.
ನೀವು ಹೇಳಿದಂತೆ ನನ್ನ ಕೈಯಲ್ಲಿ ಎರಡು ಸಾಧ್ಯವಾಗಲಿಲ್ಲ.ಇನ್ನಷ್ಟು ಪ್ರೀತಿಯ ಹುಚ್ಚು, ಪ್ರೀತ್ಸುವ ಹುಚ್ಚು.